Vande Bharat Express: ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ತಯಾರಿ ಆರಂಭ

ಶಿವಮೊಗ್ಗ, ಜೂನ್ 19: ಬೆಂಗಳೂರು-ಶಿವಮೊಗ್ಗ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇದೆ. ನೈಋತ್ಯ ರೈಲ್ವೆ ವಲಯ ಸಹ ಈ ಮಾರ್ಗದಲ್ಲಿ ರೈಲು ಓಡಿಸಲು ಚಿಂತನೆ ನಡೆಸಿದೆ. ಈಗ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಸೆಮಿ ಹೈಸ್ಪೀಡ್ ರೈಲು ತರುವ ತಯಾರಿ ಆರಂಭವಾಗಿದೆ.

ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಬುಧವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ರೈಲ್ವೆ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಯೋಜನೆಗೆ ಹೊಂದಿಕೊಂಡಿರುವ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು.

Koteganguru Railway Depot To Design As Maintenance Of Vande Bharat Train

ಈ ಸಭೆಯಲ್ಲಿ ಜಿಲ್ಲೆಯ ವಿವಿಧ ರೈಲು ಯೋಜನೆಗಳ ಕುರಿತು ಸಂಸದರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಇವುಗಳಲ್ಲಿ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ತರುವ ಬಗ್ಗೆಯೂ ಮಾತುಕತೆ ನಡೆಯಿತು. ಅದಕ್ಕೂ ಮೊದಲು ರೈಲು ನಿರ್ವಹಣೆಗೆ ಬೇಕಾದ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ವಂದೇ ಭಾರತ್ ರೈಲು ನಿರ್ವಹಣೆ: ಬಿ. ವೈ. ರಾಘವೇಂದ್ರ ಸಭೆಯಲ್ಲಿ ಕೋಟೆಗಂಗೂರಿನಲ್ಲಿ ನಡೆಯುತ್ತಿರುವ ಕೋಚಿಂಗ್ ಡಿಪೋ ಕಾಮಗಾರಿ ಕುರಿತು ಮಾಹಿತಿ ಪಡೆದರು. ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಡಿಪೋ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.

ಶಿವಮೊಗ್ಗ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರು ಎಂಬಲ್ಲಿ ರೈಲ್ವೇ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 27, 2023ರಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ.

ಶಿವಮೊಗ್ಗ-ತಾಳಗುಪ್ಪ ನಡುವೆ ಕೋಟೆಗಂಗೂರು ರೈಲು ನಿಲ್ದಾಣ, ರೈಲ್ವೆ ಡಿಪೋ ನಿರ್ಮಾಣವಾಗುತ್ತಿದೆ. ರೈಲು ನಿರ್ವಹಣೆ ಮಾಡಲು ಬೆಂಗಳೂರು ಮತ್ತು ಮೈಸೂರಿನ ನಿಲ್ದಾಣದ ಮೇಲಿರುವ ಒತ್ತಡ ಕಡಿಮೆ ಮಾಡಲು ಶಿವಮೊಗ್ಗದಲ್ಲಿ ಈ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ ವೆಚ್ಚ ಸುಮಾರು 105 ಕೋಟಿ ರೂ.ಗಳು.

ಯೋಜನಾ ವರದಿಯಂತೆ ಡಿಪೋದಲ್ಲಿ ಒಟ್ಟು 4 ಮಾರ್ಗ ನಿರ್ಮಾಣವಾಗಲಿದೆ. 1 ಸ್ಪೈರ್‌ ಲೈನ್, 1 ಟವರ್ ವ್ಯಾಗನ್ ಸೈಡಿಂಗ್, 1 ಟ್ರಾಕ್ ಯಂತ್ರ ಸೈಡಿಂಗ್, 1 ಸಿಕ್ ಲೈನ್ ಶೆಡ್, ಸಬ್‌ ವೇ, ಪ್ರಯಾಣಿಕರ ಓವರ್ ಬ್ರಿಡ್ಜ್‌ ಸಹ ಇರಲಿದೆ. ಈಗ ಸಂಸದರು ಡಿಪೋದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.

ವಿವಿಧ ಯೋಜನೆ ಕುರಿತು ಚರ್ಚೆ: ಸಭೆಯಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗದ ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಸಾಗಿರುವ ಕುರಿತು ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಭದ್ರಾವತಿ ಸೇರಿದಂತೆ ಹೊಸದಾಗಿ ಅನುಮೋದನೆ ದೊರಕಿರುವ ರೈಲ್ವೇ ಮೇಲ್ಸೇತುವೆ ಮತ್ತು ರೈಲ್ವೇ ಕೆಳಸೇತುವೆ ಕಾಮಗಾರಿ ಸಾಗಿರುವ ಹಂತದ ಕುರಿತು ಮಾಹಿತಿ ಪಡೆದರು. ಬೀರೂರು-ಶಿವಮೊಗ್ಗ ರೈಲ್ವೆ ಡಂಬಲಿಂಗ್ ಯೋಜನೆ ಶೀಘ್ರವಾಗಿ ಪ್ರಾರಂಭಿಸುವ ಕುರಿತು ಚರ್ಚಿಸಿದರು.

ಸಭೆಯಲ್ಲಿ ಸಂಸದರು ಈ ಎಲ್ಲಾ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬೇಕಾಗಿರುವ ಅಗತ್ಯ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಹಾಗೂ ಭವಿಷ್ಯದ ಅನೇಕ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಸಮಯದಲ್ಲಿ ಸೂಕ್ತ ಅನುದಾನ ಬಿಡುಗಡೆ ಮಾಡಿಸಲು ರೈಲ್ವೆ ಸಚಿವರ ಮನವೊಲಿಸುತ್ತೇನೆ ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+