ಕೊಡಚಾದ್ರಿಯಲ್ಲಿ ಸಿಡಿಲು ಬಡಿದು ಕೇರಳದ ಯುವಕ ಸಾವು

ಶಿವಮೊಗ್ಗ, ಮೇ 20 : ಸಿಡಿಲು ಬಡಿದು ಕೇರಳದ ಯುವಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕೊಡಚಾದ್ರಿಯಲ್ಲಿ ನಡೆದಿದೆ. ಕೇರಳದಿಂದ 4 ಯುವಕರು ಕೊಡಚಾದ್ರಿಗೆ ಚಾರಣಕ್ಕೆಂದು ಬಂದಿದ್ದರು.

ಮೃತಪಟ್ಟ ಯುವಕನನ್ನು ಕೇರಳದ ತ್ರಿಶೂರ್ ಮೂಲದ ವಿಷ್ಣು (24) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಸಿಡಿಲು ಬಡಿದು ವಿಷ್ಣು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ವಿಷ್ಣು ಮತ್ತು ಆತನ ಮೂವರು ಸ್ನೇಹಿತರು ಕೇರಳದಿಂದ ಕೊಡಚಾದ್ರಿಗೆ ಟ್ರಕ್ಕಿಂಗ್ ಬಂದಿದ್ದರು. ರಾತ್ರಿ ಸರ್ವಜ್ಞ ಪೀಠದಲ್ಲಿ ತಂಗಿದ್ದರು. ಆಗ ಸಿಡಿಲು ಬಡಿದು ವಿಷ್ಣು ಮೃತಪಟ್ಟಿದ್ದಾರೆ.

Kerala youth killed in lightning at Kodachadri, Shivamogga

ಹೊಸನಗರ ತಾಲೂಕು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಷಕರಿಗೆ ಮಾಹಿತಿ ತಿಳಿಸಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ.

ಲಾರಿಗೆ ಕಾರು ಡಿಕ್ಕಿ, ಇಬ್ಬರ ಸಾವು : ಹಾಸನ-ಬೆಂಗಳೂರು ರಾಷ್ಷ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ಯುವಕರು ಮಂಡ್ಯ ಮೂಲದ ಬಸರಾಳು ಗ್ರಾಮದವರು ಎಂದು ತಿಳಿದುಬಂದಿದೆ. ಮೃತಪಟ್ಟ ಯುವಕರನ್ನು ಅರುಣ್, ರಾಜ ಎಂದು ಗುರುತಿಸಲಾಗಿದೆ. ಚಾಲಕ ಸಹ ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+