Annamalai On Jagadish Shettar: ಜಗದೀಶ್ ಶೆಟ್ಟರ್ ಮೇಲೆ ಗೌರವವಿದೆ, ಅವರ ನಿರ್ಧಾರಕ್ಕೆ ಜನರೇ ಉತ್ತರ ನಿಡುತ್ತಾರೆ: ಅಣ್ಣಾಮಲೈ

ಶಿವಮೊಗ್ಗ, ಏಪ್ರಿಲ್ 19: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಾಹೇಬರು ದೊಡ್ಡ ಲೀಡರ್. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರು ಈಗ ಕೈಗೊಂಡಿರುವ ನಿರ್ಧಾರದ ಬಗ್ಗೆ ಜನರ ಉತ್ತರ ನೀಡುತ್ತಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಬಿಜೆಪಿ ನಾಯಕ ಸದಾನಂದಗೌಡರ ಜೊತೆಗೆ ಸಮಾವೇಶವೊಂದರಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ ಜಗದೀಶ್ ಶೆಟ್ಟರ್ ಅವರ ಬಗ್ಗೆ ನನಗೆ ಗೌರವವಿದೆ. ಅವರು ದೊಡ್ಡ ಲೀಡರ್. ಇದರಲ್ಲಿ ಬೇರೆ ಮಾತೇ ಇಲ್ಲ. ಆದರೆ ಅವರು ಕೈಗೊಂಡಿರುವ ನಿರ್ಧಾರ ಬಗ್ಗೆ ಜನರೇ ಉತ್ತರ ನೀಡುತ್ತಾರೆ ಎಂದು ಶೆಟ್ಟರ್ ಪಕ್ಷಾಂತರ ನಿರ್ಧಾರ ಕುರಿತು ಪ್ರತಿಕ್ರಿಯಿಸಿದರು.

Karnataka People Will Give Answer To Jagadish Shettar Resignation Decision Says Annamalai

ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಜಗದೀಶ್ ಶೆಟ್ಟರ್ ಅವರು, ಅಣ್ಣಾಮಲೈ ಅವರನ್ನು ತಮಿಳುನಾಡಿನ ಬಿಜೆಪಿಗೆ ಅಧ್ಯಕ್ಷರನ್ನಾಗಿ ಮತ್ತು ಕರ್ನಾಟಕದ ಟಿಕೆಟ್‌ ಹಂಚಿಕೆ ಪ್ರಕ್ರಿಯೆಗೆ ಅವರನ್ನು ನೇಮಿಸಲಾಗಿದೆ. ಈ ಮೂಲಕ ಒಬ್ಬ ಮಾಜಿ ಐಎಎಸ್‌ ಅಧಿಕಾರಿ ಮುಂದೆ ಮಾಜಿ ಸಿಎಂ ಆದ ನನ್ನನ್ನು ತಲೆ ತಗ್ಗಿಸಿ ನಿಲ್ಲುವಂತೆ ಮಾಡಲಾಯಿತು ಎಂದು ವಾಗ್ದಾಳಿ ನಡೆಸಿದ್ದರು.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಅವರು, ಶೆಟ್ಟರ್ ಮೇಲೆ ನನಗೆ ಗೌರವವಿದೆ. ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗುತ್ತಾರೆ. ಕೆಲವರು ಪಕ್ಷ ಸಂಘಟನೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಾರೆ. ಈ ನಿಟ್ಟಿನಲ್ಲಿ ಶೆಟ್ಟರ್ ಅವರ ಪಕ್ಷಾಂತರದ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ಜನರೇ ಉತ್ತರ ನೀಡುತ್ತಾರೆ ಎಂದರು.

ಜಗದೀಶ್ ಶೆಟ್ಟರ್ ಹೀಗೆ ಹೇಳಿದ್ದೇಕೆ
ಬಿಜೆಪಿ ಎರಡು ಪಟ್ಟಿಗಳಲ್ಲಿ ಹುಬ್ಬಳ್ಳಿ ಧಾರವಾಡ ಕೇಂದ್ರದ ಟಿಕೆಟ್ ಸಿಗದಿದ್ದಕ್ಕೆ ಜಗದೀಶ್ ಶೆಟ್ಟರ್ ಆಕ್ರೋಶಗೊಂಡಿದ್ದರು. ಬಿಜೆಪಿಯಲ್ಲಿನ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು.

Karnataka People Will Give Answer To Jagadish Shettar Resignation Decision Says Annamalai

ಬಳಿಕ ಹುಬ್ಬಳ್ಳಿಯಲ್ಲಿಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಕುಟುಂಬವೆಲ್ಲ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷ ಬಲಪಡಿಸಲು ನಮ್ಮ ಕುಟುಂಬದ ಅನೇಕರು ಶ್ರಮಿಸಿದ್ದಾರೆ. ನನಗೆ ಅಧಿಕಾರದ ದಾಹ ಇರಲಿಲ್ಲ. ಆಎರೆ ನನನ್ನು ಪಕ್ಷದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದರು.

ನನಗೆ ಟಿಕೆಟ್ ತಪ್ಪಲು ಹಲವರದ್ದು ಪ್ಲಾನ್ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ನಾಯಕ ಬಿ.ಎಲ್.ಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಅಣ್ಣಾಮಲೈ ಕುರಿತು ಮಾತನಾಡಿದ ಅವರು, ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಅಲ್ಲದೇ ಕರ್ನಾಟಕದಲ್ಲಿ ಟಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲೂ ಅವರಿಗೆ ಸ್ಥಾನ ನೀಡಲಾಗಿದೆ.

ಆದರೆ ನನ್ನನ್ನು ಕಡೆಗಣಿಸಲಾಗಿದೆ. ಹೀಗಾಗಿ ಮಾಜಿ ಸಿಎಂ ಒಬ್ಬರು ಮಾಜಿ ಐಎಎಸ್‌ ಅಧಿಕಾರಿ ಮುಂದೆ ತಲೆ ತಗ್ಗಿಸುವಂತೆ ಮಾಡಲಾಯಿತು ಎಂದು ಅವರು ಹೇಳಿದ್ದರು. ಅದಕ್ಕೀಗ ಅಣ್ಣಾಮಲೈ ಅವರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+