ಅಪಾಯದಲ್ಲಿದೆ ಜಯಚಾಮರಾಜೇಂದ್ರ ಒಡೆಯರ್ ತೂಗುಸೇತುವೆ

ತೀರ್ಥಹಳ್ಳಿ, ಜುಲೈ.04: ಮೈಸೂರು ಮಹಾರಾಜರ ಆಡಳಿತದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ತೂಗು ಸೇತುವೆ ಇದೀಗ ಅಪಾಯ ಸ್ಥಿತಿಗೆ ತಲುಪಿದೆ.

ಈ ಹಿಂದೆ ಮೈಸೂರು ಮಹಾರಾಜರ ಆಡಳಿತದಲ್ಲಿ ರಾಜ್ಯದಲ್ಲಿ ಹತ್ತಾರು ಸೇತುವೆಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ತುಂಗಾನದಿಗೆ ನಿರ್ಮಿಸಿದ ಜಯಚಾಮರಾಜೇಂದ್ರ ಒಡೆಯರ್ ತೂಗು ಸೇತುವೆಯೂ ಒಂದಾಗಿದೆ.

ಈ ಸೇತುವೆಯನ್ನು ಅಂದಿನ ಮೈಸೂರು ಮಹಾರಾಜರು ನಿರ್ಮಿಸಿ ಉದ್ಘಾಟನೆ ಸಹ ಅವರ ದಿವ್ಯ ಅಮೃತಹಸ್ತದಲ್ಲಿ ನೆರವೇರಿಸಿದ್ದರು.

Jayachamarajendra Wodeyar Hanging now reached a danger level

ಇದೀಗ ಈ ಸೇತುವೆಯೂ ಅಪಾಯ ಮಟ್ಟಕ್ಕೆ ತಲುಪಿದೆ. ಈಗಾಗಲೇ ಸೇತುವೆಯ ಕೆಳಭಾಗದಲ್ಲಿರುವ ರಿಂಗ್‌ಗಳು ನಿರ್ವಹಣೆ ಇಲ್ಲದೇ ಸೊರಗಿವೆ. ಸೇತುವೆಯ ಕೆಲವು ಭಾಗ ಬಿರುಕು ಕಾಣಿಸಿಕೊಂಡಿದೆ. ಗ್ರೀಸ್ ಆಯಿಲ್ ಹಾಕಿ ನಿರ್ವಹಣೆ ಮಾಡಬೇಕಿದ್ದ ಇಂಜಿನೀಯರ್ ಗಳು ಆ ಬಗ್ಗೆ ಅನೇಕ ವರ್ಷದಿಂದ ಗಮನಹರಿಸಿಲ್ಲ.

ಜೊತೆಯಲ್ಲಿ ಅಧಿಕ ಭಾರದ ವಾಹನಗಳ ಸಾಗಾಟ ಸ್ಪೋಟಕ ಸಿಡಿಸಲಾಗುತ್ತದೆ. ಇವೆಲ್ಲಾ ಕಾರಣದಿಂದ ಸೇತುವೆ ಭದ್ರತೆ ಅಪಾಯದಲ್ಲಿದೆ. ರಾಜ್ಯದಲ್ಲಿ ಹಳೇ ಸೇತುವೆಗಳು ಈಗಾಗಲೇ ಕುಸಿದು ಬಿದ್ದ ಸುದ್ದಿಗಳನ್ನು ನೋಡುತ್ತಿದ್ದೇವೆ.

Jayachamarajendra Wodeyar Hanging now reached a danger level

ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ- ಮಂಗಳೂರು ಮಾರ್ಗದಲ್ಲಿ ಈ ಸೇತುವೆ ಇದೆ. ಸೇತುವೆಗೆ ಹೆಚ್ಚಿನ ಹಾನಿಯಾಗಿ ಕುಸಿದು ಬೀಳುವ ಮೊದಲು ಇಂಜೀನಿಯರ್ ಗಳು, ಜಿಲ್ಲಾಡಳಿತ ಗಮನಹರಿಸಬೇಕಿದೆ. ಬೇಜವಾಬ್ದಾರಿಯಿಂದ ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ ಅನಾಹುತ ಕಟ್ಟಿಟ್ಟ ಬುತ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+