'ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು'

Recommended Video

      ಶೋಭಾ ಕರಂದ್ಲಾಜೆ ಮನೆ ಮೇಲೆ ಐ ಟಿ ದಾಳಿ ನಡೀಬೇಕು ಎಂದ ಬೇಳೂರು ಗೋಪಾಲಕೃಷ್ಣ

      ಶಿವಮೊಗ್ಗ, ಜೂನ್ 20 : 'ಸಂಸದೆ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು. ಬಿ.ಎಸ್.ಯಡಿಯೂರಪ್ಪ ಅಕ್ರಮವಾಗಿ ಸಂಪಾದನೆ ಮಾಡಿರುವ ಹಣ ಅವರ ಮನೆಯಲ್ಲಿದೆ' ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

      ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

      IT Dept should conduct raid on Shobha Karandlaje house says Beluru Gopalkrishna

      'ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಐಟಿ ದಾಳಿ ನಡೆಯಬೇಕು. ಯಡಿಯೂರಪ್ಪ ಅವರು ಅಕ್ರವವಾಗಿ ಸಂಪಾದನೆ ಮಾಡಿರುವ ಹಣ ಅವರ ಮನೆಯಲ್ಲಿದೆ' ಎಂದರು.

      ಯಡಿಯೂರಪ್ಪ ಸಿಎಂ ಆಗಬಾರದು : 'ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ನಾನು ದೇವರಲ್ಲಿ ಬೇಡಿಕೊಂಡಿದ್ದೆ. ನನ್ನ ಪ್ರಾರ್ಥನೆಯನ್ನು ಸ್ವಾಮಿ ಸ್ವೀಕರಿಸಿದ್ದಾನೆ. ಆದ್ದರಿಂದ, ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು' ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.

      'ನನ್ನ ಮನೆದೇವರು ಶಿಕಾರಿಪುರದ ಹುಚ್ಚರಾಯ ಆಂಜನೇಯ ಸ್ವಾಮಿ. ಆ ದೇವರ ಬಳಿ ಚುನಾವಣೆ ಮುಂಚೆ ನಾನು ಪ್ರಾರ್ಥಿಸಿಕೊಂಡಿದ್ದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದೆಂಬ ನನ್ನ ಪ್ರಾರ್ಥನೆಯನ್ನು ಆ ಸ್ವಾಮಿ ಸ್ವೀಕಾರಿಸಿದ್ದಾನೆ' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+