ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಓಪನ್ ಮೈಂಡ್: ವಿದೇಶಿ ಮಾದರಿ, ಶಿವಮೊಗ್ಗದಲ್ಲಿ ವಿನೂತನ ಶಾಲೆಯ ತಯಾರಿ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಶೈಕ್ಷಣಿಕ ಹಂತದಲ್ಲಿ ಪ್ರತಿಯೊಂದು ಮಗುವೂ ವಿಶಿಷ್ಟವಾಗಿರುವುದಲ್ಲದೆ ತನ್ನ ನಡವಳಿಕೆ ಹಾಗೂ ಕಲಿಕಾ ಸಾಮರ್ಥ್ಯದಲ್ಲಿ ಸ್ವಂತಿಕೆಯನ್ನು ಹೊಂದಿರುತ್ತದೆ. ಹಾಗಾಗಿ ಮಗುವಿಗೆ ತನ್ನದೇ ಆದ ಕಲಿಕಾ ಅವಕಾಶಗಳು ಸಿಗುವಂತಾಗಬೇಕು. ಆಗಿದ್ದಾಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಕಳೆದ ಇಪ್ಪತ್ತು ವರ್ಷಗಳ ಸಂಶೋಧನೆಯಿಂದ ರೂಪುಗೊಂಡ ವಿದೇಶಿ ಶಿಕ್ಷಣ ಪದ್ಧತಿಯ ಶಿಶು ಕೇಂದ್ರಿತ ಶಾಲೆಯೊಂದು ಶಿವಮೊಗ್ಗದಲ್ಲಿ ತಲೆ ಎತ್ತಿದೆ.

ಕೊಠಡಿಗಳೇ ಇಲ್ಲದ ಕಟ್ಟಡದ ವಾಸ್ತುಶಿಲ್ಪ, ಕ್ಲಾಸ್ ಸೆಕ್ಷನ್ ಇಲ್ಲದ ಎಲ್ಲ ವಯೋಮಾನದ ಮಕ್ಕಳು ಒಟ್ಟಿಗೆ ಕಲಿಯುವ ಅವಕಾಶ, ಸ್ಟಾರ್, ರ್‍ಯಾಂಕ್ ಎಂದು ಒಂದು ಮಗು ಹೆಚ್ಚು ಮತ್ತೊಂದು ಮಗು ಕಡಿಮೆ ಎಂದು ಹೇಳದೆ ಎಲ್ಲರನ್ನೂ ಸಮಾನವಾಗಿ ಕಾಣುವ ತಾಯ್ತನ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನ ಗುಣವಿಶೇಷವಾಗಿದೆ.

 ನೇಕಾರ ಹಾಗೂ ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ: ಸಿಎಂ ಘೋಷಣೆ ನೇಕಾರ ಹಾಗೂ ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ: ಸಿಎಂ ಘೋಷಣೆ

ಶಾಲೆಯ ಪಠ್ಯಕ್ರಮ ಹಾಗೂ ಕಲಿಕಾ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ
ಮಕ್ಕಳ ಆತ್ಮಗೌರವ(self esteem), ಮಾನಸಿಕ ಸುರಕ್ಷತೆ (Emotional security) ಕಾಪಾಡುವುದು ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ ಶಾಲೆಯಲ್ಲಿ ಇರಲಿದೆ. ಶಿಶುಕೇಂದ್ರಿತ ಆಚರಣೆ ಈ ಶಾಲೆಯ ಆಧಾರ ಸ್ತಂಭವಾಗಿದೆ.

Inauguration Of Foreign Education Systems Open Minds World School In Shivamogga On April 15

ಈ ರೀತಿಯ ಹೊಸ ಆಲೋಚನೆ, ನವೀನ ಚಿಂತನೆ ಮತ್ತು ಆಚರಣೆಗಳಿಗೆ ಈ ಶಾಲೆ ಗ್ಲೋಬಲ್ ಅವಾರ್ಡ್ ಬಹುಮಾನ ಪಡೆದಿದೆ. ಇದು ಪರಿಪೂರ್ಣ ಶಿಶು ಕೇಂದ್ರಿತ ಶಾಲೆಯಾಗಿದ್ದು, ಇಲ್ಲಿ ಮಕ್ಕಳು ಕ್ರಿಯಾಶೀಲರಾಗಿರುವುದಲ್ಲದೇ ತಮ್ಮ ಕಲಿಕೆಯ ಜ್ಞಾನವನ್ನು ಸ್ವಯಂ ರಚನೆ/ಪುನಾರಚನೆ ಮಾಡಿಕೊಳ್ಳುತ್ತಾರೆ. ನಿಜಾರ್ಥದಲ್ಲಿ "ಸ್ವಯಂಭು" ಎನಿಸಿಕೊಳ್ಳುವಂತಹದ್ದು.

ಇಲ್ಲಿ ವಿದ್ಯಾರ್ಥಿಗಳು ವಿಷಯ ವಸ್ತುವನ್ನು ಕಲ್ಪಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ, ಪರಿಶೋಧಿಸುತ್ತಾ, ಊಹಿಸುತ್ತಾ ತಮ್ಮೊಳಗೆ ಹೊಸದನ್ನು ಕಂಡುಕೊಳ್ಳುತ್ತಾರೆ. ಈಗಾಗಲೇ ಇರುವ ಜ್ಞಾನವನ್ನು ಒರೆಗೆ ಹಚ್ಚಿ, ಹೊಸ ಅರ್ಥ ಶೋಧಿಸಿ ತಮ್ಮದಾಗಿಸಿಕೊಳ್ಳಬಹುದು.

ನೆದರ್ಲೆಂಡ್ಸ್, ಫಿನ್‌ಲ್ಯಾಂಡ್, ಇಂಗ್ಲೇಡ್, ಅಮೆರಿಕ, ಕೆನಡಾ, ಸಿಂಗಾಪುರ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜಪಾನ್, ಚೀನಾ, ನ್ಯೂಜಿಲ್ಯಾಂಡ್, ಶ್ರೀಲಂಕಾ ಮತ್ತು ನಮ್ಮ ಭಾರತ ಸೇರಿದಂತೆ ವಿಶ್ವದ ಅನೇಕ ಶಿಕ್ಷಣ ಪದ್ಧತಿಗಳನ್ನು ಅಧ್ಯಯನ ಮಾಡಿದ ನಂತರ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನ ಕಲಿಕಾ ಮಾದರಿಯನ್ನು ಕಂಡುಕೊಳ್ಳಲಾಗಿದೆ. ಬಹಳ ಜಾಗರೂಕತೆಯಿಂದ ರೂಪಿಸಲಾಗಿರುವ ಓಪನ್ ಮೈಂಡ್ಸ್ ಕಲಿಕಾ ಮಾದರಿಯು ಎಲ್ಲಾ ಪಠ್ಯಕ್ರಮಗಳು ಹಾಗೂ ಪರೀಕ್ಷಾ ಮಂಡಳಿಗಳಿಗೆ ಹೊಂದಿಕೊಳ್ಳುತ್ತದೆ.

Inauguration Of Foreign Education Systems Open Minds World School In Shivamogga On April 15

ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ ಇತರೆ ಶಿಕ್ಷಕರ ಕೇಂದ್ರಿತ ಶಾಲೆಗಿಂತ ಹೇಗೆ ಭಿನ್ನ
1. ಕಲಿಕೆಯಲ್ಲಿ ಬಹುತೇಕ ಶೈಕ್ಷಣಿಕ ತೀರ್ಮಾನಗಳನ್ನು ವಿದ್ಯಾರ್ಥಿಗಳೇ ತೆಗೆದುಕೊಳ್ಳಲಿದ್ದು, ಶಿಕ್ಷಕರು ಅಥವಾ ಪೋಷಕರು ತೆಗೆದುಕೊಳ್ಳುವುದಿಲ್ಲ.

2. ಕಲಿಕೆಯನ್ನು ಮಾಪಿಸಲು ಐದು ಮಾನದಂಡಗಳಿವೆ. ಸ್ಮರಣೆ, ಅರ್ಥ ಗ್ರಹಿಕೆ, ತೀರ್ಮಾನಿಸುವಿಕೆ, ಅನ್ವಯ ಹಾಗೂ ಮಾಹಿತಿಯನ್ನು ಜ್ಞಾನವನ್ನಾಗಿ ಮಾರ್ಪಡಿಸಿಕೊಳ್ಳುವಿಕೆ.

3. ವಿಭಿನ್ನ ವಯೋಮಾನದ ಮಕ್ಕಳು ಬೆರೆತು ಕಲಿಯುವ ವಾತಾವರಣ. ಪ್ರತಿ ಮಗುವಿನ ಸ್ವಯಂ ಕಲಿಕೆಗೆ ತನ್ನದೇ ಕಲಿಕಾ ಅವಕಾಶ ಮತ್ತು ಸ್ಥಳವಿರುತ್ತದೆ.

* ಕಲಿಕಾ ಪದ್ಧತೆ ಮತ್ತು ಆಚರಣೆ
ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನಲ್ಲಿ ತಿಳಿಸಿದ ಕಲಿಕಾ ಪದ್ಧತಿಗಳು ಶಾಲೆಯ ಆಚರಣೆಯಲ್ಲಿದ್ದು, ಇವು ನಮ್ಮ ಓಪನ್ ಮೈಂಡ್ಸ್ ಶಿಕ್ಷಣ ಕ್ರಮವನ್ನು ವಿಭಿನ್ನ ಎಂದು ಸಾದರಪಡಿಸುತ್ತವೆ.

* ಮಾರ್ಗದರ್ಶಕರಾಗಿ ಬದಲಾದ ಶಿಕ್ಷಕರು
ಶಾಲೆಯಲ್ಲಿ ಮಾರ್ಗದರ್ಶಕರಿದ್ದಾರೆ. ಮಕ್ಕಳ ಆತ್ಮಗೌರವ ಕಾಪಾಡುವ ಆಳವಾದ ತರಬೇತಿ ಅವರಿಗೆ ಆಗಿದೆ. ಅಚ್ಚರಿಯೆಂಬಂತೆ ಈ ಶಾಲೆಯಲ್ಲಿ ಶಿಕ್ಷಕರಿಲ್ಲ, ಆದರೆ ಮಾರ್ಗದರ್ಶಕರಿದ್ದಾರೆ.

* ತರಗತಿ ವೇಳಾಪಟ್ಟಿ ಇಲ್ಲ
ಯಾವಾಗ, ಏನು ಕಲಿಯಬೇಕು, ವಿಷಯವನ್ನು ಎಷ್ಟು ಕಾಲ ಕಲಿಯಬೇಕೆಂದು ಮಕ್ಕಳು ಸ್ವಯಂ ನಿರ್ಧರಿಸುತ್ತಾರೆ. ನಿಸರ್ಗದತ್ತ ತಮ್ಮ ಸಾಮರ್ಥ್ಯ ಮತ್ತು ಮಿತಿಗಳನ್ವಯ ಪ್ರತಿ ವಿದ್ಯಾರ್ಥಿಯು ಸ್ವವೇಗದಲ್ಲಿ ಕಲಿಯುತ್ತಾರೆ.

ಪಾಠ ಪರಿಕಲ್ಪನೆಗಳನ್ನು ಉದ್ದೇಶಿತ ಸವಾಲುಗಳಾಗಿ ಮಾರ್ಪಡಿಸಲಾಗಿದೆ. ಮಕ್ಕಳು ಆ ಸವಾಲಿನ ಪ್ರಶ್ನೆಗಳಿಗೆ ಉತ್ತರ ಶೋಧಿಸುತ್ತಾ, ಒಗಟುಗಳನ್ನು ಬಿಡಿಸುತ್ತಾ, ಅದನ್ನು ಅಭಿವ್ಯಕ್ತಿಸುತ್ತಾ ಕಲಿಯುತ್ತಾರೆ.

ಮಕ್ಕಳು ತಮ್ಮ ಕಲಿಕಾ ಯೋಜನೆಯನ್ನು ತಯಾರಿಸುತ್ತಾರೆ. ಈ ಶಾಲೆಯ ಮಾರ್ಗದರ್ಶಕರು ಆ ಯೋಜನೆಗೆ ತಮ್ಮ ಒಳನೋಟಗಳನ್ನು ಸೇರಿಸಿ ಮಕ್ಕಳನ್ನು ಸ್ವತಂತ್ರವಾಗಿ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸುವುದು.

ಪ್ರತಿ ಮಗುವಿಗೆ ಎಂಟಕ್ಕಿಂತ ಹೆಚ್ಚು ಸಂಪನ್ಮೂಲಗಳನ್ನು ಒದಗಿಸಲಾಗಿದೆ. ಮಗು ತನಗೆ ಸರಿಯೆನಿಸಿದ ಯಾವುದೇ ಸಂಪನ್ಮೂಲದಿಂದ ಕಲಿಯಬಹುದಾಗಿದೆ.

* ಅರ್ಥಪೂರ್ಣ ಕಲಿಕೆ ಮತ್ತು ಅಂತಹ ಕಲಿಕೆಯ ಮೌಲ್ಯಮಾಪನ
ಕಲಿಕೆಯನ್ನು ಮಾಪಿಸಲು ಹತ್ತು ಕ್ರೆಡಿಟ್‌ಗಳನ್ನು ಮಾನದಂಡವೆಂದು ಪರಿಗಣಿಸಲಾಗಿದ್ದು, ಮಗು ಈ ಹತ್ತನ್ನೂ ಮುಗಿಸುವ ತನಕ ಮುಂದಿನ ಪರಿಕಲ್ಪನೆಗೆ ಹೋಗುವಂತಿಲ್ಲ. ಈ ಮೌಲ್ಯಾಂಕನ ಮಾನದಂಡಗಳನ್ನು ಒಳಗೊಂಡಿದೆ.

* ಸ್ಮರಣೆ
* ಅರ್ಥ ಗ್ರಹಿಕೆ
* ತೀರ್ಮಾನಿಸುವಿಕೆ
* ಅನ್ವಯ
* ಜ್ಞಾನವಾಗಿ ಮಾರ್ಪಾಡಿಸುವಿಕೆ

ಸ್ಮರಣೆಯ ಮಾಪನ ಶೇಕಡಾ ಇಪ್ಪತ್ತಕ್ಕಿಂತ ಹೆಚ್ಚಿಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ವ್ಯಾಖ್ಯೆ ಕಲಿಯಲು ಪೋಷಕರು ಪ್ರೋತ್ಸಾಹಿಸುವುದಿಲ್ಲ. ಮಗುವಿನ ಕಲಿಕೆಯನ್ನು ಇಡಿಯಾಗಿ, ರಚನಾವಾದಿ ತತ್ವದ ರೀತಿಯಾಗಿ ಮೌಲ್ಯಮಾಪನ ಮಾಡುವಲ್ಲಿ ಯಶಸ್ವಿಯಾಗಿದೆ.

ತಾರತಮ್ಯವಿಲ್ಲದ ವಾತಾವರಣ
ವಿದ್ಯಾರ್ಥಿಗಳ ದೈಹಿಕ, ಶೈಕ್ಷಣಿಕ ಅಥವಾ ಸಾಮಾಜಿಕ ಕೌಶಲ್ಯಗಳ ಶಕ್ತಿ ಅಥವಾ ಮಿತಿಗಳನ್ನಾಧರಿಸಿ ತಾರತಮ್ಯ ಮಾಡುವುದಿಲ್ಲ. ಮುಖ್ಯವಾಗಿ ನಾವು ಮಕ್ಕಳ ಸಾಮರ್ಥ್ಯಗಳನ್ನಾಧರಿಸಿ ಕೆಲಸ ಮಾಡುವುದರ ಜೊತೆಗೆ ಅವರ ಮಿತಿಗಳನ್ನು ನಿಭಾಯಿಸುವ ರೀತಿಯನ್ನು ಕಲಿಸುತ್ತೇವೆ.

ಇವೆಲ್ಲವನ್ನೂ ಸಾಕಾರಗೊಳಿಸಲು ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ ಶಾಲಾ ಕಟ್ಟಡದ ವಾಸ್ತುಶಿಲ್ಪವೇ ಭಿನ್ನವಾಗಿದೆ. ನಾಲ್ಕು ಗೋಡೆಗಳ ಕೋಣೆಗಳು ಇಲ್ಲಿಲ್ಲ, ತೆರೆದ ಕಲಿಕಾ ವಾತಾವರಣವೇ ಇಲ್ಲಿರುವುದರಿಂದಲೇ ಇದು ಓಪನ್ ಮೈಂಡ್ಸ್ ಶಾಲೆ.

2020ರ ಶಿಕ್ಷಣ ನೀತಿಯ ಶಿಫಾರಸುಗಳು ಸಾಕಾರ
2020ರ ಶಿಕ್ಷಣ ನೀತಿಯ ಶಿಫಾರಸುಗಳು ನಮ್ಮ ಶಾಲೆಯಲ್ಲಿ ಸಾಕಾರಗೊಂಡಿವೆ. ಕಲಿಕೆ, ಮೌಲ್ಯಮಾಪನ, ಸಮಗ್ರ ಪ್ರಗತಿ ಪತ್ರ, ವ್ಯಕ್ತಿತ್ವ ವಿಕಸನ ಹಾಗೂ ತಾರತಮ್ಯವಿಲ್ಲದ ಶಾಲೆ ಇವಿಷ್ಟೂ ಅಂಶಗಳು ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನಲ್ಲಿ ಆಚರಣೆಯಲ್ಲಿವೆ.

ಬುನಾದಿ ಹಂತ- 3ರಿಂದ 8 ವರ್ಷಗಳು
ಈ ಅವಧಿಯಲ್ಲಿ ಮಗುವಿಗೆ 320 ಕೌಶಲ್ಯಗಳನ್ನು ಕಲಿಸುವ ಕೆಲಸ ಮಾಡುತ್ತೇವೆ. ಮುಖ್ಯವಾಗಿ ಫೈನ್ ಮೋಟಾರ್, ಗ್ರಾಸ್ ಮೋಟಾರ್, ಇಪಿಎಲ್, ಬೌದ್ಧಿಕತೆ, ಭಾಷೆ, ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ. ಇವೆಲ್ಲವನ್ನೂ ಮಾಂಟೆಸರಿ ಪದ್ಧತಿಯಲ್ಲಿ ಕಲಿಸುವುವಾದರೂ ಸಂಪೂರ್ಣ ಶಿಶು ಕೇಂದ್ರಿತ ತತ್ವಗಳನ್ನು ಅನುಸರಿಸುತ್ತೇವೆ.

* ಸಿದ್ಧತಾ ಹಂತ- 3ರಿಂದ 5ನೇ ಗ್ರೇಡ್
ಮಕ್ಕಳು ಪ್ರತಿ ಪಠ್ಯ ವಿಷಯದಲ್ಲೂ ಸುಮಾರು 96 ಕಾನ್ಸೆಪ್ಟ್ಸ್ (ಪರಿಕಲ್ಪನೆ)ಗಳು, ಭಾಷೆಯಲ್ಲಿ 50 ಪರಿಕಲ್ಪನೆಗಳನ್ನು ಈ ಮೂರು ವರ್ಷಗಳಲ್ಲಿ ಕಲಿಯುತ್ತಾರೆ. ಪಠ್ಯವಿಷಯಗಳಲ್ಲಿ 48 ಪರಿಕಲ್ಪನೆಗಳನ್ನು ಅಗತ್ಯ, ಇನ್ನುಳಿದ 48 ಹೆಚ್ಚುವರಿಯಾಗಿ HOTS ಕಲಿಯುತ್ತಾರೆ. ಅದೇ ರೀತಿ ಭಾಷೆಗಳಲ್ಲಿ 25 ಅಗತ್ಯ ಕಾರ್ಯಗಳು ಇನ್ನುಳಿದ, 25 ಪರಿಕಲ್ಪನೆಗಳು HOTS ಆಗಿ ಮಕ್ಕಳು ಸ್ವಯಂಭುವಾಗಿ ಕಲಿಯುತ್ತಾರೆ. ಅವರ ಕಲಿಕೆಯು ನಿರಂತರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.

ಮಧ್ಯಮ ಹಂತ- ಗ್ರೇಡ್ 6ರಿಂದ 8: ಸಹಭಾಗಿತ್ವದ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆ
ಸಹಭಾಗಿತ್ವದೊಂದಿಗೆ ಕಲಿಯಲು ಮತ್ತು ವಿಮರ್ಶಾತ್ಮಕ ಚಿಂತನೆಗೆ ಒಡ್ಡಲು NCERT ಪಠ್ಯಗಳನ್ನು ಅಳವಡಿಸಿಲಾಗಿದೆ. ಮಕ್ಕಳನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪುನೊಡಗೂಡಿದ ಮಕ್ಕಳು ಪಠ್ಯಪುಸ್ತಕದಲ್ಲಿರುವ ಮಾಹಿತಿಯನ್ನು ಸಂಶೋಧಿಸಿ, ಗ್ರಹಿಸಿ ಅರ್ಥೈಸಿಕೊಳ್ಳುವರು. ಆ ಪಾಠಗಳಿಂದ ಏನು ಕಲಿತಿದ್ದಾರೆ ಎಂಬುದನ್ನು ಮಕ್ಕಳು ಪ್ರಸ್ತುತಿಪಡಿಸುತ್ತಾರೆ. ಭಾಷೆಯ ಪಾಠಗಳನ್ನು ವಿಮರ್ಶಾತ್ಮಕವಾಗಿ ಓದುತ್ತಾ ತಮ್ಮ ಬುದ್ಧಿಶಕ್ತಿ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಮಾಧ್ಯಮಿಕ ಹಂತ- ಗ್ರೇಡ್ 9 ರಿಂದ 12: ಇತರರಿಗೆ ಪಾಠ ಹೇಳುವುದು
ಈ ಹಂತದಲ್ಲಿ ಮಕ್ಕಳಿಗೆ ಎಲ್ಲಾ ಸಂಪನ್ಮೂಲಗಳು ಮತ್ತು ಪ್ರಾಯೋಗಿಕ ಕಾರ್ಯಸ್ಥಳಗಳು ಲಭ್ಯವಿರುತ್ತವೆ. ಇಲ್ಲಿ ಮಕ್ಕಳು ಕಲಿತು, ತಾವೇ ಅರ್ಥಮಾಡಿಕೊಂಡ ಪಾಠವನ್ನು ಇತರೆ ಮಕ್ಕಳಿಗೆ, ಮಾರ್ಗದರ್ಶಕರಿಗೆ, ತಾವೇ ಶಿಕ್ಷಕರಾಗಿ ಹೇಳುತ್ತಾರೆ. ನಮ್ಮ ಮಾರ್ಗದರ್ಶಕರು ಕುಳಿತು ಮಕ್ಕಳ ಪಾಠವನ್ನು ಆಲಿಸಿ ಪಠ್ಯವನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ, ಗ್ರಹಿಸಿಕೊಂಡಿದ್ದಾರೆ ಎಂಬುದನ್ನು ಮೌಲ್ಯಮಾಪನ ಮಾಡುತ್ತಾರೆ. ಅಂತೆಯೇ ಭಾಷೆಯ ಬಳಕೆ, ನೀಡುವ ಉದಾಹರಣೆಗಳು ಹಾಗೂ ಮಗು ಎಷ್ಟರ ಮಟ್ಟಿಗೆ ಬೌದ್ಧಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂಬುದನ್ನೂ ಮಾಪಿಸುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಮಕ್ಕಳು ಇತರರಿಗೆ ಪಾಠ ಮಾಡುವಾಗ ಶೇಕಡಾ 90ರಷ್ಟು ಹೆಚ್ಚಿನದಾಗಿ ಕಲಿಯುತ್ತಾರೆ. ಹೀಗಾಗಿ ಮಕ್ಕಳು ಪರೀಕ್ಷೆಗಳಲ್ಲಿಯೂ ಚೆನ್ನಾಗಿ ಬರೆಯಬಲ್ಲರು.

CBSCE/IGCSE/IB ಇವುಗಳ ಉದ್ದೇಶಗಳನ್ನು ಸಮಂಜಸವಾಗಿ ಜಾರಿಗೆ ತರಲು ಈ ಕೆಳಕಂಡ ಫಲಿತಾಂಶಗಳು ಸಹಾಯಕ.

* ಶಿಶು ಕೇಂದ್ರಿತ ಶಿಕ್ಷಣ ಮಾದರಿಯಲ್ಲಿ ಮಕ್ಕಳ ಕಲಿಕೆಯ ನಿರಂತರ ಮೌಲ್ಯಮಾಪನ, ಮೇಲ್ವಿಚಾರಣೆ ತಂತಾನೆ ಜಾರಿಯಲ್ಲಿರುತ್ತದೆ.

* ಇತ್ತೀಚೆಗೆ ಬದಲಾದ ಪರೀಕ್ಷಾ ಮಾದರಿಗಳು ಹಾಗೂ ಪಠ್ಯಕ್ರಮಗಳನ್ನು ಓಪನ್ ಮೈಂಡ್ಸ್ ಮಾರ್ಗದಲ್ಲಿ ಸುಲಭವಾಗಿ ಅಳವಡಿಸಿ ಜಾರಿಗೊಳಿಸಬಹುದಾಗಿದೆ.

* ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿದ್ದು ಒತ್ತಡದಿಂದ ದೂರವಿರುತ್ತಾರೆ.

* ಸ್ವತಂತ್ರವಾದ ಚಿಂತನೆ, ತರ್ಕಶಕ್ತಿಯ ಕೌಶಲ್ಯವಿರುವ ಮಗು ಮುಂದಿನ ದಿನಗಳಲ್ಲಿ ನಾಯಕತ್ವದ ಪಾತ್ರವಹಿಸುತ್ತದೆ. ಅವರು ಭವಿಷ್ಯದ ದೇಶವನ್ನು ಉತ್ತಮವಾಗಿ ರೂಪಿಸಬಲ್ಲವರಾಗುತ್ತಾರೆ. ಆದ್ದರಿಂದ ನಾವು ಪ್ರತಿ ಮಗುವನ್ನೂ ನಾಯಕತ್ವದ ಹಿನ್ನೆಲೆಯಲ್ಲಿಯೇ ಸ್ವೀಕರಿಸುತ್ತೇವೆ.

ಹೆಚ್ಚಿನ ಮಾಹಿತಿಗಾಗಿ www.openminds.org ಸಂಪರ್ಕಿಸಿ

English summary
Foreign Education System's Open Minds World School will Inauguration In Shivamogga On April 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X