ಸಾಗರದಿಂದ ಹಾಲಪ್ಪ ಸ್ಪರ್ಧೆ : ಬೇಳೂರು ಹೇಳುವುದೇನು?
ಶಿವಮೊಗ್ಗ, ಫೆಬ್ರವರಿ 26 : ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಬಿಜೆಪಿ ಅಭ್ಯರ್ಥಿ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಅವರ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಭಾನುವಾರ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಸಾಗರದಲ್ಲಿ ಹರತಾಳ ಹಾಲಪ್ಪ ಸ್ಪರ್ಧಿಸಲಿದ್ದಾರೆ. ಬೇಳೂರು ಗೋಪಾಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಅವರೊಂದಿಗೆ ಚರ್ಚೆ ಮಾಡುತ್ತೇನೆ' ಎಂದು ಹೇಳಿದ್ದರು.
ಸಾಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, 'ಟಿಕೆಟ್ ನೀಡುವುದು ಹೈಕಮಾಂಡ್. ಯಡಿಯೂರಪ್ಪ ಅವರು ಏಕೆ ಹೀಗೆ ಹೇಳಿದ್ದಾರೆ? ಎಂಬುದನ್ನು ನಾನು ಸಹ ತಿಳಿದುಕೊಳ್ಳಬೇಕಿದೆ' ಎಂದರು.

'ಯಾವ ಕಾರಣದಿಂದ ಹೀಗೆ ಹೇಳಿದ್ದಾರೋ ತಿಳಿದಿಲ್ಲ. ಸದ್ಯದಲ್ಲಿಯೇ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಟಿಕೇಟ್ ನೀಡುವ ವಿಚಾರ ಹೈಕಮಾಂಡ್ ಬಿಟ್ಟಿದ್ದು ಮತ್ತೆ ಯಾಕೆ ಈ ಗೊಂದಲವಾಯಿತೂ ಗೊತ್ತಿಲ್ಲ?' ಎಂದು ಹೇಳಿದರು.
ಪಕ್ಷ ಬಿಡುವ ಮಾತೇ ಇಲ್ಲ : 'ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲಾ, ಕಳೆದ ನಾಲ್ಕೂ ಮುಕ್ಕಾಲೂ ವರ್ಷದಿಂದ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದೇನೆ' ಎಂದು ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.












Click it and Unblock the Notifications