ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ನಿಷೇಧ: ಬದಲಿ ಮಾರ್ಗ ಬಳಸಲು ಕ್ರಮ
ಶಿವಮೊಗ್ಗ, ಸೆಪ್ಟೆಂಬರ್ 9: ಜಿಲ್ಲೆಯ ತೀರ್ಥಹಳ್ಳಿ-ಉಡುಪಿ ರಸ್ತೆ ಆಗುಂಬೆ ಘಾಟಿಯ ಮಾರ್ಗವು ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಭಾರ ತಡೆಯುವ ಕ್ಷಮತೆ ಕ್ಷೀಣಿಸುತ್ತಿದೆ.
Recommended Video
Sanjjanaa ಕಳೆದ ಮಾನಕ್ಕೆ 10 ಕೋಟಿ ಹಣ ಕೇಳಿದ ಸಂಬರಗಿ | Oneindia Kannada
ರಾಷ್ಟ್ರೀಯ ಹೆದ್ದಾರಿ-166ಎ ರಲ್ಲಿ ರಸ್ತೆಯ ಬದಿ ಮಣ್ಣು ಕುಸಿತವಾಗುವ ಸಂಭವವಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯವಾಗಿ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಸತತ ಹಾಗೂ ಭಾರಿ ಮಳೆಯಾಗುವ ಸಂದರ್ಭದಲ್ಲಿ ವಾಹನಗಳ ಮಾರ್ಗ ಬದಲಾವಣೆಯ ವಿವರ: 12 ಟನ್ ಅಧಿಕ ಭಾರದ ವಾಹನಗಳು ಶಿವಮೊಗ್ಗ-ತೀರ್ಥಹಳ್ಳಿ - ಆಗುಂಬೆ- ಶೃಂಗೇರಿ- ಕೆರೆಕಟ್ಟೆ- ಕಾರ್ಕಳ- ಉಡುಪಿ- ಮಂಗಳೂರು ಅಥವಾ ಶಿವಮೊಗ್ಗ-ತೀರ್ಥಹಳ್ಳಿ - ಮಾಸ್ತಿಕಟ್ಟೆ - ಹುಲಿಕಲ್ - ಹೊಸಂಗಡಿ - ಸಿದ್ಧಾಪುರ - ಉಡುಪಿ ಮಾರ್ಗಗಳ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.












Click it and Unblock the Notifications