ಸಾಗರ ಕ್ಷೇತ್ರಕ್ಕೆ ಹರತಾಳು ಹಾಲಪ್ಪ ಅಭ್ಯರ್ಥಿ, ಫೇಸ್ ಬುಕ್ ನಲ್ಲಿ ಘೋಷಣೆ
ಶಿವಮೊಗ್ಗ, ಫೆಬ್ರವರಿ 16: ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಲಾಗಿದೆ. ಹರತಾಳು ಹಾಲಪ್ಪ ಅಭಿಮಾನಿಗಳು ಈ ಪೋಸ್ಟ್ ಹಾಕಿದ್ದಾರೆ. ಹರತಾಳು ಹಾಲಪ್ಪ ಅಭಿಮಾನಿ ಬಳಗದಿಂದ ಈ ರೀತಿಯ ಪೋಸ್ಟ್ ಮಾಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹಾಲಪ್ಪ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಈ ಪೋಸ್ಟ್ ಹರಿದಾಡುತ್ತಿದೆ. ಇದೇ ವೇಳೆ ಪರ- ವಿರೋಧ ಚರ್ಚೆಗೆ ಕೂಡ ಕಾರಣವಾಗಿದೆ. ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ರುದ್ರೇಗೌಡರಿಗೆ ನೀಡಬೇಕು ಎಂದು ಈಚೆಗೆ ಒತ್ತಾಯ ಕೇಳಿಬಂದಿತ್ತು.

ಆ ನಂತರ ಪತ್ರಿಕಾಗೋಷ್ಠಿ ನಡೆಸಿದ್ದ ಈಶ್ವರಪ್ಪ ಅವರು, ರುದ್ರೇಗೌಡರ ಬಣದಿಂದ ತಮ್ಮ ವಿರುದ್ಧ ಕೇಳಿಬಂದ ಮಾತಿಗೆ ತೀವ್ರವಾಗಿ ನೊಂದುಕೊಂಡು, ಕಣ್ಣೀರು ಹಾಕಿದ್ದರು. ಇದೀಗ ಸಾಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಇಬ್ಬರ ಮಧ್ಯೆ ಪೈಪೋಟಿ ಇದೆ.












Click it and Unblock the Notifications