Get Updates
Get notified of breaking news, exclusive insights, and must-see stories!

ಭೋರ್ಗರೆಯುತ್ತಿದೆ ಜೋಗ, ಈ ಸೊಬಗ ನೋಡಲು ಬಾ ಬೇಗ!

Recommended Video

      ಆಹಾ..!ಸೌಂದರ್ಯಕ್ಕೆ ಮತ್ತೊಂದು ಹೆಸರು ಜೋಗ ಜಲಪಾತ..! | Oneindia Kannada

      ಶಿವಮೊಗ್ಗ, ಆಗಸ್ಟ್ 16: ಎಂತಹ ಅರಸಿಕನಲ್ಲಿಯೂ ಸೌಂದರ್ಯ ಆರಾಧನೆಯ ಭಾವ ಮೂಡಿಸುವ ಶಕ್ತಿ ಮಲೆನಾಡಿನ ಸೊಬಗಿನ ಜೋಗ ಜಲಪಾತಕ್ಕಿದೆ.

      ಬಿರು ಬೇಸಿಗೆಯಲ್ಲಿ ಸಣ್ಣ ಝರಿಯಂತೆ ನೀರು ಧುಮುಕಿದರೂ ಅದರ ಅಂದ ಪ್ರವಾಸಿಗರಿಗೆ ಮುದ ನೀಡುತ್ತದೆ. ಹೀಗಿರುವಾಗ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಪರಸ್ಪರ ಜಿದ್ದಿಗೆ ಬಿದ್ದವರಂತೆ ತುಂಬಿಕೊಂಡು ನೋಡಿದಷ್ಟೂ ನೋಡಬೇಕೆನಿಸುವ ದೃಶ್ಯ ಮೂಡಿಸಿದೆ.

      ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೋಗ ಜಲಪಾತ ತನ್ನ ವೈಭವವನ್ನು ಮರಳಿ ಪಡೆದುಕೊಂಡಿದೆ. ಲಿಂಗನಮಕ್ಕಿ ಜಲಾಶಯವು ಭರ್ತಿಯಾಗಿರುವುದರಿಂದ 22 ಸಾವಿರ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಹನ್ನೊಂದು ಗೇಟ್‌ಗಳ ಪೈಕಿ ಒಂಬತ್ತು ಗೇಟುಗಳನ್ನು ತೆರೆಯಲಾಗಿದೆ.

      glory of jog falls is back after four years

      ಭಾರತದ ಅತ್ಯಂತ ಎತ್ತರದ ಜಲಪಾತ ಎಂದು ಹೆಸರಾಗಿರುವ ಜೋಗದಲ್ಲಿ ಶರಾವತಿ 830 ಅಡಿ ಎತ್ತರದಿಂದ ಮೈದುಂಬಿಕೊಂಡು ನೆಲವನ್ನು ಮುತ್ತಿಕ್ಕುತ್ತಿದ್ದಾಳೆ.

      glory of jog falls is back after four years

      'ಮುಂಗಾರು ಮಳೆ' ಚಿತ್ರದಲ್ಲಿ ಜೋಗವನ್ನು ಸೆರೆಹಿಡಿದ ಬಗೆ ಅನನ್ಯ. ಅದರಿಂದ ಪ್ರೇರಣೆಗೊಂಡ ಅನೇಕರು ವಿವಿಧ ಕೋನಗಳಿಂದ ಜೋಗದ ಜನಸಿರಿಯನ್ನು ತಮ್ಮ ಕ್ಯಾಮೆರಾ, ಮೊಬೈಲ್ ಫೋನ್‌ಗಳನ್ನು ಚಿತ್ರಿಸುತ್ತಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಈ ವಿಡಿಯೋ ದೇಶದಾದ್ಯಂತ ವೈರಲ್ ಆಗುತ್ತಿದೆ.

      ಲಿಂಗನಮಕ್ಕಿ ಜಲಾಶಯದ ಗರಿಷ್ಠ ಸಾಮರ್ಥ್ಯ 1819 ಅಡಿ. ಮಲೆನಾಡಿನಲ್ಲಿ ಉತ್ತರ ಮಳೆಯಾಗುತ್ತಿರುವುದರಿಂದ ಜಲಾಶಯ ತುಂಬಿಕೊಳ್ಳುತ್ತಿದ್ದು, 1815 ಅಡಿ ನೀಡು ಸಂಗ್ರಹವಾಗಿದೆ. 1964 ರಲ್ಲಿ ಅಣೆಕಟ್ಟು ನಿರ್ಮಾಣವಾದ ಬಳಿಕ ಇದುವರೆಗೂ 13 ಬಾರಿ ಮಾತ್ರ ಜಲಾಶಯ ಭರ್ತಿಯಾಗಿದ್ದು, 2014ರಲ್ಲಿ ಕೊನೆಯ ಬಾರಿ ಜಲಾಶಯದ ಒಡಲು ತುಂಬಿಕೊಂಡಿತ್ತು.

      glory of jog falls is back after four years

      ವಿಪರೀತ ಮಳೆ, ಥಂಡಿ ವಾತಾವರಣ, ರಸ್ತೆ ಸಂಪರ್ಕದ ಸಮಸ್ಯೆಗಳ ಹೊರತಾಗಿಯೂ ಜೋಗದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಅತ್ತ ದೌಡಾಯಿಸುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+