ಗಾಂಧಿ ಬಜಾರ್ ವ್ಯಾಪಾರಿಗಳಿಂದ ಸ್ವಯಂ ಲಾಕ್ ಡೌನ್
ಶಿವಮೊಗ್ಗ, ಜುಲೈ 12 : ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹಬ್ಬುತ್ತಿರುವುದರಿಂದ ಗಾಂಧಿ ಬಜಾರ್ ವ್ಯಾಪಾರಿಗಳು ಸ್ವಯಂ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಜುಲೈ 13ರಿಂದ ಆಗಸ್ಟ್ 12ರ ತನಕ ಈ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಗಾಂಧಿ ಬಜಾರ್ ವರ್ತರಕ ಸಂಘ (ರಿ.) ಸ್ವಯಂ ಪ್ರೇರಿತ ಬಂದ್ ಮಾಡುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗಾಂದಿ ಬಜಾರ್ ಮತ್ತು ಸುತ್ತಮುತ್ತಲಿನ ವರ್ತರಕರು ಸ್ವಯಂ ಪ್ರೇರಿತರವಾಗಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆ ತನಕ ಮಾತ್ರ ವ್ಯವಹಾರ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.
ಜುಲೈ 13 ರಿಂದ ಆಗಸ್ಟ್ 12ರ ತನಕ ಮಧ್ಯಾಹ್ನ 3 ಗಂಟೆಯ ಬಳಿಕ ಸ್ವಯಂ ಪ್ರೇರಿತ ಲಾಕ್ ಡೌನ್ ಜಾರಿಯಲ್ಲಿ ಇರಲಿದ್ದು, ಅಂಗಡಿಗಳನ್ನು ಮುಚ್ಚಲಾಗುತ್ತದೆ. ಇದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಸಹಕಾರ ನೀಡಬೇಕು ಎಂದು ವರ್ತಕರ ಸಂಘ ಮನವಿ ಮಾಡಿದೆ.

ವರ್ತಕರಿಗಾಗಿ ಹಲವು ಸೂಚನೆಗಳನ್ನು ಸಂಘ ನೀಡಿದೆ
* ಮಧ್ಯಾಹ್ನ 3 ಗಂಟೆಯ ನಂತರ ವ್ಯಾಪಾರ ಬಂದ್ ಮಾಡುವುದು
* ಔಷಧಿ ಮತ್ತು ಹಾಲಿನ ಅಂಗಡಿಯವರಿಗೆ ವಿನಾಯಿತಿ
* ಯಾವುದೇ ಕಾರಣಕ್ಕೂ ಫುಟ್‌ಪಾತ್ ವ್ಯಾಪಾರ ಮಾಡುವಂತಿಲ್ಲ
* ಅಂಗಡಿಯವರು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸುವುದು
* ಪ್ರತಿ ಮಂಗಳವಾರ ನಡೆಯುವ ಗಾಂಧಿ ಬಜಾರ್ ಸಂತೆ ರದ್ದು
* ಮಾಸ್ಕ್ ಹಾಕದ ಗ್ರಾಹಕರಿಗೆ ಅಂಗಡಿಯೊಳಗೆ ಪ್ರವೇಶವಿಲ್ಲ
ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 26 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 404ಕ್ಕೇ ಏರಿಕೆಯಾಗಿದೆ.











Click it and Unblock the Notifications