• search
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡ ಚಟುವಟಿಕೆಗಳಿಗೆ ವೇದಿಕೆಯಾದ ಶಿವಮೊಗ್ಗದ 'ಸಾಹಿತ್ಯ ಅಂಗಳ'

By Gururaj
|

ಶಿವಮೊಗ್ಗ, ಜುಲೈ 02 : 'ಸಾಹಿತ್ಯ ಕಟ್ಟುವಿಕೆಯಲ್ಲಿನ ಶ್ರಮವನ್ನು ಅದೆಷ್ಟು ಮನಸುಗಳು ಆಸ್ವಾದಿಸಿಕೊಳ್ಳುತ್ತದೆ. ಅದೇ ಸಾಹಿತ್ಯದ ಅಕ್ಷರಗಳನ್ನು ಓದುವ ಓದುಗರು ಅರ್ಥೈಸಿಕೊಳ್ಳದೇ ಬರಿಗಣ್ಣಿನಲ್ಲಿ ಓದಿದರೇ ಅದು ಅನರ್ಥದ ಓದು ಎಂದಾಗುತ್ತದೆ' ಎಂದು ಡಾ.ಸರ್.ಎಂ.ವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ಹೊಸೆಳ್ಳೆರ್ ಹೇಳಿದರು.

ಶಿವಮೊಗ್ಗದ ಡಾಲರ್ಸ್ ಕಾಲೋನಿ, ಕೃಷಿನಗರದಲ್ಲಿ ಶನಿವಾರ ಗಾರಾ.ಟ್ರಸ್ಟ್ ಹಾಗೂ ಗಾರಾ.ಪ್ರಕಾಶನ ಸಂಸ್ಥೆಗಳು ಹಮ್ಮಿಕೊಂಡಿದ್ದ 'ಸಾಹಿತ್ಯ ಅಂಗಳ' ಉದ್ಘಾಟನೆ ಹಾಗೂ ಶಾಶ್ವತ ಕನ್ನಡ ಧ್ವಜಸ್ತಂಭದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.

ಶಿವಮೊಗ್ಗ ಕನ್ನಡ ಶಾಲೆಯಲ್ಲಿ ಕುರ್ ಆನ್ ಬೋಧಿಸಿದರೆ ಶಿಕ್ಷಕಿ?

'ಸಾಹಿತ್ಯದ ಅಕ್ಷರಗಳನ್ನು ಓದುವ ಓದುಗರು ಅರ್ಥೈಸಿಕೊಳ್ಳದೇ ಬರಿಗಣ್ಣಿನಲ್ಲಿ ಓದಿದರೇ ಅದು ಅನರ್ಥದ ಓದು ಎಂದಾಗುತ್ತದೆ. ಪ್ರತಿ ಓದುಗನು ಲೇಖಕನ ಸಾಲುಗಳನ್ನು ಮನನ ಮಾಡಿಕೊಂಡರೇ ಅದುವೇ ಸಾರ್ಥಕತೆ' ಎಂದು ಡಾ.ಶೈಲಜಾ ಹೊಸೆಳ್ಳೆರ್ ತಿಳಿಸಿದರು.

ಸಚಿವ ಜಿಟಿ ದೇವೇಗೌಡರ ಕನ್ನಡ ಮಾತಿಗೆ ಓದುಗರು ಹೀಗಂತಾರೆ

'ಇಂತಹದೊಂದು ಕಾರ್ಯಕ್ರಮದಲ್ಲಿ ಕನ್ನಡದ ಧ್ವಜಾರೋಹಣದ ಮಾಡುವ ಅವಕಾಶ ಸಿಕ್ಕಿದ್ದು ಸಾರಸ್ವತಾ ಲೋಕಕ್ಕೆ ಋಣಿ ಎಂದೇ ಹೇಳಬಹುದು. ಯಾರು ಮಾಡಬೇಕಿತ್ತೋ ಅವರಿಗೆ ಸಿಗದ ಭಾಗ್ಯ ಇಂದು ನನ್ನದಾಗಿದೆ ಇದೇ ಬಯಸದೇ ಬಂದ ಭಾಗ್ಯ' ಎಂದು ಸಂತಸ ವ್ಯಕ್ತಪಡಿಸಿದರು.

ಆಹ್ವಾನ ಪತ್ರಿಕೆ ಕವಿತೆ

ಆಹ್ವಾನ ಪತ್ರಿಕೆ ಕವಿತೆ

ಮೊದಲಿಗೆ ಸಾಹಿತ್ಯ ಅಂಗಳದ ಉದ್ಘಾಟನೆಗೆ ಆಹ್ವಾನಿಸಿದ ಆಹ್ವಾನ ಪತ್ರಿಕೆಯಲ್ಲಿ ಕವಿತೆಯೊಂದು ಮುದ್ರಿತವಾಗಿದೆ. ಕವಿತೆಯಲ್ಲಿ ಅಭಿವ್ಯಕ್ತಿಗೊಳಿಸಿದ ಸಾಲುಗಳನ್ನು ಅರ್ಥಮಾಡಿಕೊಂಡರೇ ಗಾ.ರಾ.ಶ್ರೀನಿವಾಸರವರ ಬರಹಗಳಿಗಿರುವ ಆಳಗಳು ಅರಿವಿಗೆ ಬರುತ್ತದೆ. 'ಎದೆ ಸಮಾದಿಯೊಳಗೆ ಭಾವ ಲಗ್ಗೆಗಳ ಬುಗ್ಗೆಗಳನ್ನೆಬ್ಬಿಸಿ ಅರಿವು ದಿಟಗಳ ದಿಸೆಗೆ ಲಗಾಮು ಕಟ್ಟವ ಅಕ್ಷರಗಳೇ ಕವಿತೆ' ಎನ್ನುವ ಸಾಲುಗಳು ಅವರ ಬರಹಕ್ಕೆ ಹಿಡಿತಗಳಿವೆ, ಜ್ಞಾನ ಸಮಾದಿಯೊಳಗೆ ವಿಹರಿಸುತ್ತದೆ ಎಂದು ಡಾ.ಶೈಲಜಾ ಹೊಸೆಳ್ಳೆರ್ ತಿಳಿಸಿದರು.

ಸಮಾಜವನ್ನು ಎಚ್ಚರಿಸುತ್ತಲಿವೆ

ಸಮಾಜವನ್ನು ಎಚ್ಚರಿಸುತ್ತಲಿವೆ

ಆದಿ ಕಾಲದಿಂದಲೂ ರಚಿತವಾದ ಅಕ್ಷರಗಳು ಕ್ರಾಂತಿ ಎಬ್ಬಿಸುತ್ತಲೇ ಇದೆ. ಅಂತಹವರ ಬರಹಗಳು ಇಂದಿಗೂ ಸಮಾಜವನ್ನು ಎಚ್ಚರಿಸುತ್ತಲೇ ಇದೆ. ಸಾಹಿತ್ಯ ಅಂಗಳದ ಕುರಿತಾಗಿ ತಿಳಿದುಕೊಂಡಾಗ ಈ ಅಂಗಳ ನಾಡಿನ ಉದ್ದಗಲಕ್ಕೂ ಪರಿಚಿತವಾಗಲಿದೆ. ಅದರ ಮುನ್ನುಡಿಗೆ ನಾ ಸಾಕ್ಷಿಯಾಗಿರುವುದು ಅತೀವ ಸಂತಸವಾಗಿದೆ ಎಂದು ಡಾ.ಶೈಲಜಾ ಹೊಸೆಳ್ಳೆರ್ ಹೇಳಿದರು.

ಸಾಹಿತ್ಯ ಕಟ್ಟುವಿಕೆ ಕಠಿಣ

ಸಾಹಿತ್ಯ ಕಟ್ಟುವಿಕೆ ಕಠಿಣ

ಜನಪದ ಕಲಾ ಪರಿಷತ್ ಅಧ್ಯಕ್ಷರಾದ ಡಿ. ಮಂಜುನಾಥ್ ಮಾತನಾಡಿ ಈ ಹೊತ್ತಿನ ಕಾಲಮಾನದಲ್ಲಿ ಸಾಹಿತ್ಯ ಕಟ್ಟುವಿಕೆಯ ಪಾತ್ರ ಬಹಳ ಕಠೀಣವಾಗಿದೆ , ಇದಕ್ಕೆ ಓದುಗರ ನಿಜದ ಸಾಹಿತ್ಯಸಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಇದನ್ನು ಜಾಗೃತಗೊಳಿಸುತಲಿ ಸಾಹಿತ್ಯ ಲೋಕ ಅದರ ಜೀವಂತಿಕೆಯನ್ನು ಗಟ್ಟಿಗೊಳಿಸುತ್ತಿದೆ ಎಂದು ಹೇಳಿದರು.

ಪ್ರಕಾಶನ ಉದ್ಯಮವಾಗಿದೆ

ಪ್ರಕಾಶನ ಉದ್ಯಮವಾಗಿದೆ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಬಿ ಶಂಕರಪ್ಪನವರು ಮಾತನಾಡಿ, 'ಲೇಖಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಪ್ರಕಾಶಕರು ಉದ್ಯಮವಾಗಿ ಪರಿವರ್ತಿತಗೊಳಿಸಿರುವುದರಿಂದಲೇ ಸದಭಿರುಚಿಯ ಕೃತಿಗಳು ವಿಮರ್ಶೆಗೊಳಗಾಗದೇ ತನ್ನ ವಾಸ್ತವ ವೈಭವತೆಯ ಸಾರವನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿ ಲೇಖಕರ ಉತ್ತಮ ಬರಹಗಳನ್ನು ಉಳಿಸುವುದನ್ನು ಇಂತಹ 'ಸಾಹಿತ್ಯ ಅಂಗಳ' ಮುಂದಾಗಲಿ' ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sir.M.Visvesvaraya college principle Dr.Shylaja Hossaler inaugurated Sahithya Angala in Shivamogga, Karnataka. Ga Ra trust set up the Sahithya Angala for the Kannada activities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more