• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮ ಮಂದಿರಕ್ಕೆ ಅಡಿಗಲ್ಲು: ಸಿಹಿ ವಿತರಿಸಿ ಯುವ ಕಾಂಗ್ರೆಸ್ ಸಂಭ್ರಮಾಚರಣೆ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 05: ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯು ಸಮಸ್ತ ಭಾರತೀಯರು ಹೆಮ್ಮೆ ಪಡುವ ಸಂತಸದ ಕ್ಷಣ, ಈ ಶುಭಗಳಿಗೆಗಾಗಿ ಪರಿಶ್ರಮಿಸಿದ ಎಲ್ಲಾ ರಾಜಕೀಯ ನೇತಾರರಿಗೂ, ನ್ಯಾಯಾಂಗದ ಪ್ರತಿನಿಧಿಗಳಿಗೂ, ಕಾರ್ಯಾಂಗದ ಎಲ್ಲಾ ಅಧಿಕಾರಿಗಳಿಗೂ, ನಿಷ್ಪಕ್ಷಪಾತ ನಡವಳಿಕೆಯ ಮಾಧ್ಯಮ ಮಿತ್ರರಿಗೂ ಹಾಗೂ ವಿಶೇಷವಾಗಿ ದೇಶದ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಮತ್ತು ದೇಶದ ಹಿರಿಯ ನಾಯಕ ಎಲ್.ಕೆ ಅಡ್ವಾಣಿಯವರಿಗೆ ಅಭಿನಂದಿಸಿದರು.

ಶಿವಮೊಗ್ಗ: ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಂಘ ಪರಿವಾರದ ವಿಶೇಷ ಪೂಜೆಶಿವಮೊಗ್ಗ: ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಂಘ ಪರಿವಾರದ ವಿಶೇಷ ಪೂಜೆ

ಅಯೋಧ್ಯೆಯಲ್ಲಿ ರಾಮಮಂದಿರ ಕಾಂಗ್ರೆಸ್ಸಿನ ಹೆಬ್ಬಯಕೆ, ರಾಮ ಮಂದಿರವು ರಾಜೀವ್ ಗಾಂಧಿ ಅವರ ಕನಸು, ಸರ್ವಧರ್ಮ ಸಮನ್ವಯದ ಬಲಿಷ್ಠ ಭಾರತ ರೂಪುಗೊಳ್ಳಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಅಭಿಲಾಷೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಪ್ರವೀಣ್ ಕುಮಾರ್, ನಗರಾಧ್ಯಕ್ಷ ಎಚ್.ಪಿ ಗಿರೀಶ್, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಟಿ.ವಿ ರಂಜಿತ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶರವಣ, ಡಿ.ಆರ್ ಗಿರೀಶ್, ಪುಷ್ಪಕ್ ಕುಮಾರ್ ಇದ್ದರು.

English summary
Shivamoga District Youth Congress celebrated the occasion with a floral tribute to the portrait of Srirama in the city's Shivappa Nayaka circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X