Shivamogga Airport: ಪ್ರಧಾನಿ ಮೋದಿ ಭೇಟಿಗೂ ಮುನ್ನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಪ್ರಯೋಗ , ವಿಡಿಯೋ ವೈರಲ್‌

ಉದ್ಘಾಟನೆಗೂ ಮೊದಲೇ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ವಾಯು ಸೇನೆಯ ವಿಮಾನವೊಂದು ಬಂದಿಳಿದಿದ್ದು, ಇದನ್ನು ನೋಡಿದ ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ, ಫೆಬ್ರವರಿ, 21: ಶಿವಮೊಗ್ಗದ ಸೋಗಾನೆ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 27ರಂದು ಉದ್ಘಾಟಿಸಲಿದ್ದಾರೆ. ಹಾಗೆಯೇ ಮೋದಿಯವರ ವಿಮಾನವೇ ಮೊದಲು ಇಲ್ಲಿ ಲ್ಯಾಂಡ್‌ ಆಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಇತ್ತೀಚೆಗಷ್ಟೇ ಮಾಹಿತಿಯನ್ನು ನೀಡಿದ್ದರು. ಆದರೆ ಇದೀಗ ಉದ್ಘಾಟನೆಗೂ ಮೊದಲೇ ಮಂಗಳವಾರ (ಫೆಬ್ರವರಿ 21) ಮಧ್ಯಾಹ್ನ ಈ ವಿಮಾಣ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿದಿದೆ.

ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ. ವಾಯು ಸೇನೆಯ ಬೋಯಿಂಗ್ 737 - 7HI ಮಾದರಿಯ ವಿಮಾನ ಆಗಮಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ವಿಮಾನ ದೆಹಲಿಯಿಂದ ಹೊರಟಿದ್ದು, 2:30ಕ್ಕೆ ಶಿವಮೊಗ್ಗದಲ್ಲಿನ ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಬೋಯಿಂಗ್ ವಿಮಾನ ಬರುತ್ತಿಂದತೆಯೇ ಅಲ್ಲಿನ ಸುತ್ತಮುತ್ತಲಿನ ಪ್ರದೇಶದ ಜನರು ಕಿಕ್ಕಿರಿದು ಆಗಮಿಸಿದ್ದಾರೆ. ಹಾಗೆಯೇ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಗ್ರಾಮದ ಜನರು ವಿಮಾನವನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

Flight trials underway at Shivamogga Airport ahead of PM Modis visit on February 27

ಕನ್ನಡವೇ ಮಾಯ, ಜನಾಕ್ರೋಶ

ಮಲೆನಾಡಿನ ಭಾಗದಲ್ಲಿ ರಾಜ್ಯ ಸರ್ಕಾರದಿಂದ ಹೊಸ ವಿಮಾನ ನಿಲ್ದಾಣವು ಲೋಕಾರ್ಪಣೆಗೆ ಸಿದ್ಧವಾಗಿದೆ. ಆದರೆ ಈ ವಿಮಾನ ನಿಲ್ದಾಣದ ಒಳಗಡೆ ಕನ್ನಡ ಕಣ್ಮರೆಯಾಗಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಮಾನ ನಿಲ್ದಾಣವು ಕೆಲವೇ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿದೆ. ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ಕಾಳಜಿ ವಹಿಸಿ ಈ ನಿಲ್ದಾಣ ಸ್ಥಾಪಿಸಿದೆ ಎನ್ನಲಾಗಿದೆ. ಆದರೆ ಈ ವಿಮಾನ ನಿಲ್ದಾಣ ಕನ್ನಡ ಭಾಷೆ ವಿಚಾರದಲ್ಲಿ ರಾಜ್ಯ ಸರ್ಕಾರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡ ನೆಲದಲ್ಲಿ ನಿರ್ಮಾಣವಾದ ಈ ವಿಮಾನ ನಿಲ್ದಾಣದ ಒಳಗಡೆ ಕನ್ನಡ ನಾಮಫಲಕಗಳು ಒಂದೂ ಇಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ. ಇನ್ನು ಜನರ ಆಕ್ರೋಶ ನಂತರ ಈ ವಿಮಾಣ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲು ನಿರ್ಧರಿಸಲಾಗಿದೆ.

Flight trials underway at Shivamogga Airport ahead of PM Modis visit on February 27

ಇಂತಹ ರಾಷ್ಟ್ರಕವಿ ಅವರ ಹೆಸರಿರುವ ವಿಮಾನ ನಿಲ್ದಾಣದಲ್ಲಿ ಕನ್ನಡ ನಾಮ ಫಲಕವೇ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸುವ ಮೂಲಕ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಸಿಗಬೇಕು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+