• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರನಟ, ರಂಗಕರ್ಮಿ, ಪತ್ರಕರ್ತ ಮೈ.ನಾ ಸುಬ್ರಹ್ಮಣ್ಯ ಕೊರೊನಾಗೆ ಬಲಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 13: ಕೊರೊನಾ ವೈರಸ್ ಅಟ್ಟಹಾಸಕ್ಕೆ ಶಿವಮೊಗ್ಗದ ರಂಗಭೂಮಿ ಕಲಾವಿದ, ಪತ್ರಕರ್ತ, ಚಿತ್ರನಟರೂ ಆಗಿದ್ದ ಮೈ.ನಾ ಸುಬ್ರಹ್ಮಣ್ಯ ಅವರು ಇಂದು ಸಾವನ್ನಪ್ಪಿದ್ದಾರೆ.

   Corona vaccine ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ | Oneindia Kannada

   ಟೆಲೆಕ್ಸ್ ಪತ್ರಿಕೆ ಸಂಸ್ಥಾಪಕರಾಗಿದ್ದ ಮೈ.ನಾ ಸುಬ್ರಹ್ಮಣ್ಯಗೆ ಕಳೆದ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ಪಾಸಿಟಿವ್ ವರದಿ ಬಂದಿತ್ತು. ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದ ಇವರು ಇಂದು ಸಾವನ್ನಪ್ಪಿದ್ದಾರೆ.

   ಶಿವಮೊಗ್ಗದಲ್ಲಿ ಉತ್ತಮ ಮಳೆ: 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆಶಿವಮೊಗ್ಗದಲ್ಲಿ ಉತ್ತಮ ಮಳೆ: 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

   ಮಸಣದ ಮಕ್ಕಳು ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ, ಇತ್ತೀಚಿನ ಸೀತಾ ಧಾರವಾಹಿ, ಬಯಲು ಸೀಮೆ ಕಟ್ಟೆಪುರಾಣ, ಕಡಿದಾಳ್ ಶ್ಯಾಮಣ್ಣ, ಸುಣ್ಣ ಹಚ್ಚಿದ ಸಮಾಧಿಗಳು, ಶಾಲಾ ಭಂಜಿಕೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.

   ಹಾಸ್ಯ ಕಲಾವಿದರಾಗಿದ್ದ ಸುಬ್ರಹ್ಮಣ್ಯ ಅವರು, ರಂಗಭೂಮಿ ಕಲಾವಿದ ಒಕ್ಕೂಟದ ಸಹ ಕಾರ್ಯದರ್ಶಿ, ನಿರ್ದೇಶಕರಾಗಿದ್ದರು. ನಮ್ ಟೀಂ, ಅಭಿನಯ, ಹೊಂಗಿರಣ, ಕಲಾಜ್ಯೋತಿ, ಸೂತ್ರಧಾರ ಸೇರಿದಂತೆ ಹಲವು ನಾಟಕಗಳ ತಂಡದಲ್ಲಿ ಅಭಿನಯಿಸಿದ್ದರು.

   ಒಂದು ತಮಿಳು ಚಲನಚಿತ್ರದಲ್ಲಿಯೂ ಸಹ ನಟಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವಮೊಗ್ಗ ನಗರದ ಕುವೆಂಪು ರಂಗಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮೊದಲು ಥಿಯೇಟರ್ ಪ್ರದರ್ಶನ ಮೈನಾಸುರವರದ್ದಾಗಿತ್ತು.

   ಇವರ ಅಗಲಿಕೆಯಿಂದ ರಂಗಭೂಮಿ ಬರಿದಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾರಾ ಮೈನಾಸು ಮತ್ತು ಚೈತ್ರ ಮೈನಾಸು ಇಬ್ಬರು ಇವರ ಮಕ್ಕಳಾಗಿದ್ದು, ಇಬ್ಬರೂ ಸಹ ಚಲನಚಿತ್ರ ನಟಿಯರಾಗಿದ್ದಾರೆ.

   English summary
   Shivamogga's theater artist, journalist and filmmaker Myna Subramanya has died today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X