KS Eshwarappa: ಪ್ರತಿಸ್ಪರ್ಧಿ ರಾಘವೇಂದ್ರ ಪರ ಮತ ಯಾಚಿಸಿದ್ರಾ ಕೆ ಎಸ್ ಈಶ್ವರಪ್ಪ..? ಏನಿದು ಸುದ್ದಿ?
ಶಿವಮೊಗ್ಗ, ಮೇ. 07: ದೇಶದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಜೊತೆಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ಸಕತ್ ಕುತೂಹಲ ಕೆರಳಿಸಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಸಂಸದ ಬಿವೈ ರಾಘವೇಂದ್ರ ಅವರು ಈ ಕ್ಷೇತ್ರದಿಂದ ಮತ್ತೊಂದು ಬಾರಿ ಕಣಕ್ಕಿಳಿದಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ, ಚಲನಚಿತ್ರ ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಜೊತೆಗೆ ಪೈಪೋಟಿ ನೀಡಲಿದ್ದಾರೆ.

ರಾಘವೇಂದ್ರ ಪರ ಪ್ರಚಾರ ಮಾಡಿದ್ರಾ ಈಶ್ವರಪ್ಪ!?
ಇತ್ತೀಚೆಗೆ ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಅವರ ಹೇಳಿಕೆ ನೀಡಿದ್ದಾರೆ ಎಂದು ಆಶ್ಚರ್ಯಕರ ಸುದ್ದಿಯೊಂದು ಸಕತ್ ವೈರಲ್ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಮದ್ರ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ ಎಂದು ಈ ಸುದ್ದಿಯಲ್ಲಿ ಹೇಳಲಾಗಿದೆ. ಆದರೆ, ಇದನ್ನು ಈಶ್ವರಪ್ಪ ಬೆಂಬಲಿಗರು ಮತ್ತು ಅವರ ಪುತ್ರ ಕಾಂತೇಶ್ ಖಂಡಿಸಿದ್ದಾರೆ.
ಆ ಹೇಳಿಕೆಯಲ್ಲಿ ಇರುವುದು ಏನು ಎನ್ನುವುದಾದರೆ, "ಶಿವಮೊಗ್ಗದ ಪ್ರಜ್ಞಾವಂತ ಮತದಾರರಲ್ಲಿ ವಿನಂತಿ, ನಿಮಗೆಲ್ಲ ತಿಳಿದಿರುವಂತೆ ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಆ ನಡೆಗೆ ನಾನು ಈಗಲೂ ಬದ್ಧ. ನನಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಸಿಟ್ಟು, ಮನಸ್ತಾಪ ಇರುವುದು ನಿಜ ಆದರೆ ನಮ್ಮ ನಡುವೆ ಇರುವ ಮನಸ್ತಾಪ ವಿರೋಧಿಗಳಿಗೆ ಲಾಭ ಮಾಡಿಕೊಡಬಾರದು" ಎಂದು ತಿಳಿಸಿದ್ದಾರೆ.
"ನಾಳಿನ ದಿನ ನಡೆಯುವ ಚುನಾವಣೆ ಶಿವಮೊಗ್ಗ ಮಾತ್ರವಲ್ಲದೆ ಪೂರ್ತಿ ದೇಶದ ಚಿತ್ರಣವನ್ನು ಬದಲು ಮಾಡುವ ಚುನಾವಣೆ, ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ಭಾರತ ವಿಕಸಿತ ದೇಶವಾಗಿ ಬದಲಾಗುತ್ತಿದೆ ಇದು ಮುಂದುವರಿಯಬೇಕು ಎಂಬುದು ನನ್ನ ಜೀವನದ ಪರಮ ಆಶಯ. ನರೇಂದ್ರ ಮೋದಿಜೀ ಯವರ ಗೆಲುವು ಈ ದೇಶ ಹಾಗೂ ಧರ್ಮ ರಕ್ಷಣೆಗೆ ಅತ್ಯಗತ್ಯವಾಗಿದ್ದು ನಾಳಿನ ದಿನ ನಿಮ್ಮ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಿ ಬಿ. ವೈ ರಾಘವೇಂದ್ರರವರನ್ನು ಗೆಲ್ಲಿಸಿ ಮೋದಿ ಕೈ ಬಲ ಪಡಿಸಬೇಕು" ಎಂದಿದ್ದಾರೆ.
"ನನಗೆ ತಿಳಿದಿದೆ ನಿಮಗೆ ನನ್ನ ಮೇಲೆ ಅಪಾರ ಗೌರವ ಇದೆ. ಆದರೆ ದೇಶದ ಹಿತದೃಷ್ಟಿಯಿಂದ ನೀವು ಬಿಜೆಪಿಗೆ ಮತ ನೀಡುವಿರಿ ಎಂದು, ನನಗೆ ಪಕ್ಷದ ಕೆಲವರ ಮೇಲೆ ಬೇಸರ ಮನಸ್ತಾಪವಿದೆ ಅದನ್ನೆಲ್ಲ ನಾನು ಹಾಗೂ ಪಕ್ಷದ ಹಿರಿಯ ಮುಖಂಡರು ಸೇರಿ ಮುಂದಿನ ದಿನದಲ್ಲಿ ಬಗೆಹರಿಸಿ ಜೊತೆಯಾಗಿ ಸಾಗುವ ಸಂಕಲ್ಪ ಮಾಡುತ್ತೇವೆ - ಕೆ. ಎಸ್. ಈಶ್ವರಪ್ಪ" ಎಂದು ಈ ಹೇಳಿಕೆ ಸಕತ್ ವೈರಲ್ ಆಗುತ್ತಿದೆ.
ಚುನಾವನೆಗೂ ಮುನ್ನವೇ ಸೋಲೊಪ್ಪಿಕೊಂಡ ರಾಘವೇಂದ್ರ!
ಈಶ್ವರಪ್ಪ ಹೇಳಿಕೆ ಎಂದು ಫೇಕ್ ನ್ಯೂಸ್ ಹರಡಲಾಗುತ್ತಿದೆ ಎಂದು ಈಶ್ವರಪ್ಪ ಅವರ ಪುತ್ರ ಕಾಂತೇಶ್ ಕಿಡಿ ಕಾರಿದ್ದಾರೆ. "ಎದುರಾಳಿಯನ್ನು ಯುದ್ಧದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಗೊತ್ತಾದಮೇಲೆ ವೈರಿ ಪಡೆಯ ಏಕೈಕ ಅಸ್ತ್ರವೇ ಸುಳ್ಳು ವದಂತಿ ಹಾಗು ಅಪಪ್ರಚಾರ.. ಯಾವುದೋ ಹಳೆಯ ಸುದ್ದಿಯನ್ನು ಇಂದಿನ ಸುದ್ದಿಯಂತೆ ಬಿಂಬಿಸಿ ಮತದಾರರಲ್ಲ ಗೊಂದಲ ಸೃಷ್ಟಿಸುತ್ತಿರುವ ಕುತಂತ್ರಿಗಳೆ.... ಇಲ್ಲಿಗೆ ನಿಮ್ಮ ಆಟ ಮುಗಿಯಿತು..... ಮಾನ್ಯ ಈಶ್ವರಪ್ಪನವರು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನಯೇ ಬರುವುದಿಲ್ಲ .... ಏಕೆಂದರೆ ಈಶ್ವರಪ್ಪನವರಿಗೆ ಗೆಲುವು ಶತಸಿದ್ಧ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.
"ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡ ಬಿ.ವೈ ರಾಘವೇಂದ್ರ.ಕೊನೆಗೂ ಈಶ್ವರಪ್ಪ ಅವರು ಮಾತಾಡಿದ ಹಳೆಯ ವಿಡಿಯೋ ತುಣುಕನ್ನು ಹರಿಬಿಟ್ಟು ಹತಾಶೆಗೊಂಡು ಸೋಲೊಪ್ಪಿಕೊಂಡ ಬಿಜೆಪಿ ಶಿವಮೊಗ್ಗ ಐ ಟಿ ಸೆಲ್" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ ಈಶ್ವರಪ್ಪ ಬೆಂಬಲಿಗರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications