Bhadra Reservoir: 10 ದಿನಗಳಿಂದ ಡ್ಯಾಂ ನೀರು ಸೋರಿಕೆಗೆ ಮುಕ್ತಿ: ಅಪ್ಡೇಟ್ ಕೊಟ್ಟ ಡಿಕೆ ಶಿವಕುಮಾರ್
ಬೆಂಗಳೂರು, ಜುಲೈ 08: ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಲಾಶಯಗಳು ತುಂಬಿಕೊಳ್ಳುತ್ತಿವೆ. ಇದೇ ವೇಳೆ ಶಿವಮೊಗ್ಗ ಜಿಲ್ಲೆಯ ಭದ್ರಾ ಡ್ಯಾಂ ಮಾತ್ರ ಸಾವಿರಾರು ಕ್ಯೂಸೆಕ್ ನೀರು ಸೋರಿಕೆ ವಿಚಾರವಾಗಿ ಸುದ್ದಿಯಾಗಿತ್ತು. ಇದೀಗ ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.
ಮೂರು ದಿನಗಳ ಸತತ ಕಾರ್ಯಾಚರಣೆ ಮೂಲಕ ಲಕ್ಕವಳ್ಳಿ ಬಳಿ ಭದ್ರಾ ಡ್ಯಾಂನ ಸ್ಲೂಯಿಸ್ ಗೇಟ್‌ನಲ್ಲಿ ಆಗುತ್ತಿದ್ದ ನೀರಿನ ಸೋರಿಕೆಯನ್ನು ನಿಲ್ಲಲಾಗಿದೆ. ರೈತರ ಆತಂಕ ನಿವಾರಿಸಿದ ಕರ್ನಾಟಕ ನೀರಾವರಿ ನಿಗಮದ ಸಿಬ್ಬಂದಿ, Dam safety review panel ಹಾಗೂ Dam safety organization ತಂಡದ ತಜ್ಞರು ಹಾಗೂ ಮುಳುಗು ತಜ್ಞರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣ (ಎಕ್ಸ್) ದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ನಿಮ್ಮ ಶ್ರಮ ಹಾಗೂ ಅನುಭವದಿಂದಾಗಿ ಸಂಭವನೀಯ ಅಪಾಯವೊಂದು ತಪ್ಪಿದೆ. ಸಂಕಷ್ಟದ ಸಮಯದಲ್ಲಿ ನೀರಾವರಿ ಇಲಾಖೆ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ ಎಂದು ಅವರು ತಜ್ಞರು ಕಾರ್ಯ ಶ್ಲಾಘಿಸಿದ್ದಾರೆ.
8-10 ದಿನಗಳಿಂದ ಡ್ಯಾಂ ನೀರು ಸೋರಿಕೆ.!
ಕಳೆದ ಸುಮಾರು ಎಂಟತ್ತು ದಿನಗಳಿಂದಲೂ ಭದ್ರಾ ಅಣೆಕಟ್ಟಿನ ಸ್ಲೊಯಿಸ್ (ರಿವರ್) ಗೇಟ್‌ನಿಂದ ನಿರಂತರವಾಗಿ ನೀರು ಸೋರಿಕೆ ಆಗುತ್ತಿತ್ತು. ಸಾವಿರಾರು ಕ್ಯೂಸೆಕ್ ನೀರು ಮಳೆಗಾಲದಲ್ಲೂ ವ್ಯರ್ಥಯವಾಗುತ್ತಿದೆ. ಹೀಗಾದರೆ ಮುಂದೆ ಬೇಸಿಗೆಯಲ್ಲಿ ನಮ್ಮ ಕಥೆ ಏನು ಎಂದು ರೈತರು ಆತಂಕಗೊಂಡಿದ್ದರು.

ಹೀಗೆ ನೀರು ವ್ಯರ್ಥವಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಬೇಸಿಗೆ ವೇಳೆ ಗೇಟ್ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಈ ರೀತಿ ನೀರು ಪೋಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯಲು, ನೀರಾವರಿ, ಧನಕರುಗಳು ಸೇರಿದಂತೆ ಬಹು ಉಪಯೋಗಕ್ಕೆ ನೀರಿಲ್ಲದ ಬಣಗುಣಬೇಕಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಮೂರು ದಿನಗಳ ಕಾರ್ಯಕ್ಕೆ ಶ್ಲಾಘನೆ
ಇದರ ಬೆನ್ನಲ್ಲೆ ಎಚ್ಚೆತ್ತ ಜಲಾಶಯಗಳ ತಜ್ಞರು, ಅಧಿಕಾರಿಗಳ ತಂಡದ ಸದಸ್ಯರೆಲ್ಲರು ಕೂಡಿಕೊಂಡು ಜುಲೈ 05ರಿಂದ ಗೇಟ್ ದುರಸ್ತಿ ಕಾರ್ಯ ನಡೆಸಿದ್ದಾರೆ. ಇದರ ಪರಿಣಾಮ ಡ್ಯಾಂನ ಗೇಟ್‌ನಿಂದ ಸೋರಿಕೆಯಾಗುತ್ತಿದ್ದ ನೀರು ಬಂದ್ ಆಗಿದೆ. ಯಾವುದೇ ಸೋರಿಕೆ ಆಗದಂತೆ ದುರಸ್ತಿ ಮಾಡಲಾಗಿದೆ. ಇದಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಸ್ಥಳೀಯರು, ಮುಖ್ಯವಾಗಿ ರೈತರು ಅಧಿಕಾರಿಗಳ ಕಾರ್ಯ ಶ್ಲಾಘಿಸಿದ್ದಾರೆ.












Click it and Unblock the Notifications