ಡಾ. ಸುನೀಲ್ ಕುಮಾರ್ ಗೆ 'ಶ್ರೇಷ್ಠ ಕ್ಷೇತ್ರ ಪಶುವೈದ್ಯ' ಪ್ರಶಸ್ತಿ

ಶಿವಮೊಗ್ಗ, ಜೂನ್.22: ಭಾರತ ಸರ್ಕಾರದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಮಂತ್ರಾಲಯವು ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಗೋಕುಲ ಮಿಶನ್ 'ಶ್ರೇಷ್ಠ ಕ್ಷೇತ್ರ ಪಶುವೈದ್ಯ' ಪ್ರಶಸ್ತಿಯು ಪ್ರಸಕ್ತ ಸಾಲಿಗೆ ಡಾ.ಸುನಿಲ್ ಕುಮಾರ್ ಕೆ ಎಂ ಇವರಿಗೆ ಲಭಿಸಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ವಿಶ್ವ ಹಾಲು ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಕೇಂದ್ರ ಕೃಷಿ ಸಚಿವ ರಾಧಾಮೋಹನಸಿಂಗ್ ಅವರು ಡಾ.ಸುನಿಲ್ ಕುಮಾರ್ ಕೆ ಎಂ ಅವರಿಗೆ ಪ್ರಧಾನ ಮಾಡಿದರು.

ಡಾ.ಸುನಿಲ್ ಕುಮಾರ್ ಕೆಎಂ ಶಿಕಾರಿಪುರ ತಾಲೂಕು ಹೊಸೂರಿನ ಪಶುಚಿಕಿತ್ಸಾಲಯದಲ್ಲಿ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಶುವೈದ್ಯಕೀಯ ಔಷಧ ವೈದ್ಯಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಹೊಂದಿದ್ದಾರೆ.

Dr. Sunil Kumar got Shresta Kshetra Pashuvaidya award.

ಸುನಿಲ್ ಕುಮಾರ್ ಅವರು ಉತ್ತಮ ಯುವ ವಿಜ್ಞಾನಿ, ವೈಜ್ಞಾನಿಕ ಬರಹಗಾರ, ಎನ್ಎಸ್ಎಸ್ ಪಟು ಎಂದು ರಾಷ್ಟ್ರಪತಿಗಳ ಪುರಸ್ಕಾರ, ಕರ್ನಾಟಕ ಸರ್ಕಾರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಪಟು ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+