ಶಿವಮೊಗ್ಗ : ಪರಿಸರ ಸ್ನೇಹಿ ಮನೆ ನೋಡಿ ಸಂತಸ ಪಟ್ಟ ಜಿಲ್ಲಾಧಿಕಾರಿಗಳು

ಶಿವಮೊಗ್ಗ, ಜೂನ್ 18 : ಶಿವಮೊಗ್ಗ ಜಿಲ್ಲಾಡಳಿತ ನೀಡುವ 'ಪರಿಸರ ಸ್ನೇಹಿ ಕುಟುಂಬ' ಪ್ರಶಸ್ತಿಯನ್ನು ಡಾ.ಶ್ರೀಪತಿ ಅವರು ಪಡೆದಿದ್ದಾರೆ. ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಶ್ರೀಪತಿ ಅವರ ಮನೆ ನೋಡಿ ಅಚ್ಚರಿ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಪರಿಸರ ದಿನಾಚರಣೆ ಅಂಗವಾಗಿ 'ಪರಿಸರ ಸ್ನೇಹಿ ಕುಟುಂಬ' ಎಂಬ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಜನರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಶಸ್ತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Dr Shripathi honored with environment awards by Shivamogga DC

ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಸ್ವತಃ ಮನೆಯನ್ನು ಪರಿಶೀಲನೆ ಮಾಡಿ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿಯನ್ನು ನೀಡುತ್ತಾರೆ. ಜೂನ್ ತಿಂಗಳ ಪ್ರಶಸ್ತಿಯನ್ನು ಡಾ.ಶ್ರೀಪತಿ ಅವರು ಪಡೆದಿದ್ದಾರೆ. ಶಿವಮೊಗ್ಗ ನಗರದಲ್ಲಿ ಮನೆಗೆ ಮಂಗಳವಾರ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟರು.

ಶಿವಮೊಗ್ಗದ ಎಲ್.ಬಿ.ಎಸ್.ನಗರದಲ್ಲಿರುವ ಡಾ.ಎಲ್‌.ಕೆ.ಶ್ರೀಪತಿ ಅವರ ಮನೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಲಾರ್ ವ್ಯವಸ್ಥೆ, ಘನತ್ಯಾಜ್ಯ ವಿಲೇವಾರಿ, ಮಳೆ ಕೊಯ್ಲು, ಗೋಬರ್ ಗ್ಯಾಸ್ ಮುಂತಾದ ವ್ಯವಸ್ಥೆಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು.

Dr Shripathi honored with environment awards by Shivamogga DC

ಡಾ.ಶ್ರೀಪತಿ ಅವರು ಇದುವರೆಗೂ ಮನೆಗೆ ಮಹಾನಗರ ಪಾಲಿಕೆ ನೀರಿನ ಸಂಪರ್ಕ ಪಡೆದಿಲ್ಲ. ಫ್ರಿಡ್ಜ್‌ಗೆ ಮಾತ್ರ ಮೆಸ್ಕಾಂ ವಿದ್ಯುತ್ ಪಡೆಯುತ್ತಿದ್ದಾರೆ. ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಅದನ್ನು ಗೃಹ ಬಳಕೆಗೆ ಉಪಯೋಗಿಸಿಕೊಳ್ಳುತ್ತಾರೆ.

ಜೆಎನ್‌ಎನ್‌ಸಿಇ ಕಾಲೇಜು ಉಪನ್ಯಾಸಕರಾಗಿರುವ ಡಾ.ಎಲ್.ಕೆ.ಶ್ರೀಪತಿ ಅವರ ಮನೆ ನೋಡಿ ಜಿಲ್ಲಾಧಿಕಾರಿಗಳು ಸಂತಸಪಟ್ಟರು. 'ಪರಿಸರ ಸ್ನೇಹಿ ಕುಟುಂಬ' ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+