• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ವರ್ಗಾವಣೆ

|

ಶಿವಮೊಗ್ಗ, ಆಗಸ್ಟ್ 06 : ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಎ.ದಯಾನಂದರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

ಮಂಗಳವಾರ ಕೆ. ಎ. ದಯಾನಂದರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಸಕ್ಕರೆ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ದಯಾನಂದರನ್ನು ನೇಮಿಸಲಾಗಿದೆ.

ಜಿಲ್ಲೆಗೆ ಬಂದ ಐದು ತಿಂಗಳಲ್ಲೇ ಮೊದಲ ಮಹಿಳಾ ಎಸ್ಪಿ ವರ್ಗಾವಣೆಜಿಲ್ಲೆಗೆ ಬಂದ ಐದು ತಿಂಗಳಲ್ಲೇ ಮೊದಲ ಮಹಿಳಾ ಎಸ್ಪಿ ವರ್ಗಾವಣೆ

ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಶಿವಕುಮಾರ್ ಕೆ. ಬಿ. ನೇಮಕವಾಗಿದ್ದಾರೆ. ಶಿವಕುಮಾರ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣ

ಕೆಎಎಸ್ ಅಧಿಕಾರಿಯಾಗಿದ್ದ ಕೆ. ದಯಾನಂದ ಬಳಿಕ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. 2018ರ ಆ.7ರಂದು ಅವರು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಒಂದು ವರ್ಷದಲ್ಲಿಯೇ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸೈಕಲ್ ಓಡಿಸಿ ಒದೆ ತಿಂದಿದ್ದ ಮಗಳು ಅರುಣಾದೇವಿ ಕಂಡಂತೆ ಅಪ್ಪ, ಯಡಿಯೂರಪ್ಪಸೈಕಲ್ ಓಡಿಸಿ ಒದೆ ತಿಂದಿದ್ದ ಮಗಳು ಅರುಣಾದೇವಿ ಕಂಡಂತೆ ಅಪ್ಪ, ಯಡಿಯೂರಪ್ಪ

ಶಿವಕುಮಾರ್ ಕೆ.ಬಿ. 2010ನೇ ಬ್ಯಾಚ್ ಐಎಎಸ್ ಅಧಿಕಾರಿ. ತಮಿಳುನಾಡು ಮೂಲದ ಶಿವಕುಮಾರ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿ.ಟೆಕ್ ಪದವಿಯನ್ನು ಪಡೆದಿರುವ ಅವರು, ವಿಜಯಪುರ ಮತ್ತು ಮೈಸೂರು ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ತವರು ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಗೆ ಮಾಡಿದ್ದರು. ಶಿವಮೊಗ್ಗ ಎಸ್ಪಿ ಡಾ. ಎಂ.ಅಶ್ವಿನಿ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಪಾಲಿಕೆ ಉಪ ಆಯುಕ್ತ ಸಹನಾ (ಕೆಎಎಸ್) ಅವರನ್ನು ವರ್ಗಾವಣೆ ಮಾಡಲಾಗಿತ್ತು.

English summary
Deputy Commissioner of Shivamogga K.A.Dayanand was transferred. K.B.Shivkumar appointed as new deputy commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X