ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ರಿಂಗ್ ರೋಡ್ ಗೆ ಗ್ರೀನ್ ಸಿಗ್ನಲ್ ನೀಡಿದ ರೈಲ್ವೆ ಇಲಾಖೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 26: ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ರಿಂಗ್ ರೋಡ್ ಸಂಚಾರಕ್ಕೆ ಕೊನೆಗೂ ಮುಕ್ತವಾಗಿದೆ. ರೈಲ್ವೆ ಇಲಾಖೆ ರಸ್ತೆ ಸಂಚಾರಕ್ಕೆ ಒಪ್ಪಿಗೆ ನೀಡಿದೆ.

ಶಿವಮೊಗ್ಗದ ವಿನೋಬ ನಗರ, ಬ್ಲಡ್ ಬ್ಯಾಂಕ್ ಮೂಲಕ ಕೆಇಬಿ ವೃತ್ತಕ್ಕೆ ಸಂಪರ್ಕಿಸುವ ರಿಂಗ್ ರಸ್ತೆಯಲ್ಲಿನ ಜಾಗ ತಮ್ಮದೆಂದು ರೈಲ್ವೆ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದಾಗಿ ರಿಂಗ್ ರಸ್ತೆ ಅಪೂರ್ಣಗೊಂಡಿತ್ತು.

 ಪಿಎಸ್ ಐ ವರ್ಗಾವಣೆ ವಿಚಾರ; ಬಿಜೆಪಿ ವಿರುದ್ಧ ಮತ್ತೊಂದು ಆರೋಪ ಮಾಡಿದ ಗೂಳಿಹಟ್ಟಿ ಪಿಎಸ್ ಐ ವರ್ಗಾವಣೆ ವಿಚಾರ; ಬಿಜೆಪಿ ವಿರುದ್ಧ ಮತ್ತೊಂದು ಆರೋಪ ಮಾಡಿದ ಗೂಳಿಹಟ್ಟಿ

ರಿಂಗ್ ರೋಡ್ ಗೆ ರೈಲೆ ಇಲಾಖೆ ಅಡ್ಡಗಾಲು ಹಾಕಿದ್ದು ತಮ್ಮ ಜಾಗವೆಂದು ಹೇಳಿಕೊಂಡು ಭಾರಿ ಗಾತ್ರದ ವಾಹನಗಳ ಸಂಚಾರವನ್ನು ತಡೆಗಟ್ಟಿ ಕೇವಲ ಲಘು ವಾಹನಗಳ ಮತ್ತು ದ್ವಿಚಕ್ರ ಸಂಚಾರಕ್ಕೆ ಒಪ್ಪಿಗೆ ನೀಡಿತ್ತು. ಭಾರಿ ವಾಹನಗಳು ಸವಳಂಗ ರಸ್ತೆಯ ಮೂಲಕ ಶಿವಮೂರ್ತಿ ವೃತ್ತ ಹಾಗೂ ಕೋರ್ಟ್ ವೃತ್ತದ ಮೂಲಕ ಸಂಚರಿಸುವಂತಾಗಿತ್ತು.

Department of Railway Gave Green Signal to Ring Road In Shivamogga

ಇದೀಗ ಸಂಸದ ಬಿ.ವೈ.ರಾಘವೇಂದ್ರರವರ ಮನವಿ ಮೇರೆಗೆ ರೈಲ್ವೆ ಇಲಾಖೆಯ ಹುಬ್ಬಳ್ಳಿಯ ಡಿಆರ್ ಎಂ ಎ.ಕೆ.ಸಿಂಗ್, ಮೈಸೂರು ವಿಭಾಗದ ಅಪರ್ಣ ಗರ್ಗ್, ರಾಜೀವ್ ಅಗರ್ ವಾಲ್ ಮೊದಲಾದವರನ್ನು ಒಳಗೊಂಡ ತಂಡದ ನಿಯೋಗ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ ರಿಂಗ್ ರಸ್ತೆಗೆ ಅಸ್ತು ಎಂದಿದೆ.

ಕಲ್ಲೊಡ್ಡು ಯೋಜನೆ ವಿರೋಧಿಸಿ ಸಿಎಂ ವಿರುದ್ಧ ಸ್ವಜಿಲ್ಲೆಯಲ್ಲೇ ಆಕ್ರೋಶಕಲ್ಲೊಡ್ಡು ಯೋಜನೆ ವಿರೋಧಿಸಿ ಸಿಎಂ ವಿರುದ್ಧ ಸ್ವಜಿಲ್ಲೆಯಲ್ಲೇ ಆಕ್ರೋಶ

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಈ ರಿಂಗ್ ರಸ್ತೆಗೆ ಬದಲಾಗಿ ರೈಲ್ವೆಗೆ ಇತರೆಡೆ ಭೂಮಿ ನೀಡಲಾಗುವುದು. ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ನಿರ್ಮಾಣ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನ ಸಹ ಒದಗಿಸಲು ಇಲಾಖೆ ಅಸ್ತು ಎಂದಿದೆ ಎಂದರು.

English summary
The Ring Road, which had been restricted for heavy vehicles finally open to traffic. The Railway Department has agreed to road traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X