ಐಎಎಸ್ ಅಧಿಕಾರಿಗೆ 1 ರೂ. ದಂಡ ವಿಧಿಸಿದ ಶಿವಮೊಗ್ಗ ನ್ಯಾಯಾಲಯ
ಶಿವಮೊಗ್ಗ, ಜನವರಿ 12 : ಅಪರೂಪದ ಪ್ರಕರಣವೊಂದಕ್ಕೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸಾಕ್ಷಿಯಾಗಿದೆ. 1 ರೂ. ಮಾನನಷ್ಟ ಮೊಕದ್ದಮೆಯ ಅರ್ಜಿ ಇತ್ಯರ್ಥ ಪಡಿಸಿರುವ ನ್ಯಾಯಾಲಯ 1 ರೂ. ನಷ್ಟವನ್ನು ನೀಡುವಂತೆ ಐಎಎಸ್ ಅಧಿಕಾರಿಗೆ ಆದೇಶ ನೀಡಿದೆ.
ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ, ಪ್ರಸ್ತುತ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ. ಪೊನ್ನುರಾಜ್ ಮಾನನಷ್ಟ ಮೊಕದ್ದಮೆಯೊಂದರಲ್ಲಿ 1 ರೂ. ದಂಡವನ್ನು ಪಾವತಿ ಮಾಡಬೇಕು. ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ಮೊಕದ್ದಮೆ ದಾಖಲಿಸಿದ್ದರು.
ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ವಿ. ಪೊನ್ನುರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮಾನನಷ್ಟದಿಂದಾಗಿ ಆಗಿರುವ ಹಾನಿಗೆ 1 ರೂ. ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ನ್ಯಾಯಾಲಯ ಅಧಿಕಾರಿ ಪರವಾಗಿ ತೀರ್ಪು ನೀಡಿದೆ.

ಪ್ರಕರಣದ ವಿವರ : ಶಿವಮೊಗ್ಗದ ವಿನೋಬನಗರದ ನಿವಾಸಿ ಕೆ. ಶಿವಪ್ಪ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಐಎಎಸ್ ಅಧಿಕಾರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 6 ವರ್ಷಗಳ ಕಾಲ ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪು ನೀಡಿದೆ.
ಕೆ. ಶಿವಪ್ಪ ವಿರುದ್ಧ 2011ರ ಏಪ್ರಿಲ್ 5ರಂದು ಶಿವಮೊಗ್ಗದ ಎ. ಎಂ. ಮಹದೇವಪ್ಪ ಅಂದಿನ ಜಿಲ್ಲಾಧಿಕಾರಿ ವಿ. ಪೊನ್ನುರಾಜ್‌ಗೆ ದೂರು ನೀಡಿದ್ದರು. ಕೆ. ಶಿವಪ್ಪ ನಿವೃತ್ತರಾದರೂ ಕಂದಾಯ ಇಲಾಖೆಯ ಸಾರ್ವಜನಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ದೂರಾಗಿತ್ತು.
ವಿ. ಪೊನ್ನುರಾಜ್ ಈ ದೂರಿನ ವಿಚಾರಣೆ ನಡೆಸದೇ, ಶಿವಪ್ಪಗೆ ಯಾವುದೇ ನೋಟಿಸ್ ನೀಡದೆ ಆದೇಶವೊಂದನ್ನು ಹೊರಡಿಸಿದ್ದರು. ಅದರ ಪ್ರಕಾರ ಶಿವಪ್ಪ ಯಾವುದೇ ಇಲಾಖೆಗಳಿಗೆ ಹೋಗಬಾರದೆಂದು ನಿರ್ಬಂಧಿಸಲಾಗಿತ್ತು. ಇಲ್ಲಾ ಇಲಾಖೆಗಳಲ್ಲೂ ಈ ಕುರಿತ ಸುತ್ತೋಲೆ ಹಾಕಲಾಗಿತ್ತು.
ತಮ್ಮ ಅವರಿಗೆ ತರದೆ ಸುತ್ತೋಲೆ ಹೊರಡಿಸಿದ್ದರ ಸಂಬಂಧ ಶಿವಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಪ್ರತಿವಾದ ಮಾಡದೇ ಪೊನ್ನುರಾಜ್ ಆದೇಶ ವಾಪಸ್ ಪಡೆದಿದ್ದರು. ಈ ಸುತ್ತೋಲೆಯಿಂದ ತಮ್ಮ ಮಾನನಷ್ಟವಾಗಿದೆ ಎಂದು ಶಿವಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 1 ರೂ. ಪಾವತಿ ಮಾಡಬೇಕು ಎಂದು ಕೋರಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಐಎಎಸ್ ಅಧಿಕಾರಿ ಪೊನ್ನುರಾಜ್ 60 ದಿನದೊಳಗೆ 1 ರೂ. ಮಾನನಷ್ಟ ಮೊಕದ್ದಮೆಯ ನಷ್ಟವನ್ನು ಶಿವಪ್ಪಗೆ ನೀಡಬೇಕು ಎಂದು ಆದೇಶ ನೀಡಿದೆ.












Click it and Unblock the Notifications