ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿಗಳ ತವರು ಜಿಲ್ಲೆಗೆ ಬಂದ ಕೋವಿಡ್ ಲಸಿಕೆ ಎಷ್ಟು?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 15: ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ಕೋವಿಡ್ ಲಸಿಕೆ ಶುಕ್ರವಾರ ಆಗಮಿಸಿದೆ. ಶನಿವಾರದಿಂದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ.

ಬೆಳಗಾವಿಯಿಂದ ಎರಡು ದಿನಗಳ ಹಿಂದೆ ಚಿತ್ರದುರ್ಗಕ್ಕೆ ಲಸಿಕೆ ಆಗಮಿಸಿತ್ತು. ಶುಕ್ರವಾರ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಲಸಿಕೆ ಬಂದಿದೆ. ಬಿಗಿ ಭದ್ರತೆಯಲ್ಲಿ ನಗರಕ್ಕೆ ಬಂದ ಕೋವಿಶೀಲ್ಡ್ ಲಸಿಕೆಗೆ ಅಧಿಕಾರಿಗಳು ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.

ಕೊರೊನಾ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಾ ಅಡ್ಡಪರಿಣಾಮ? ಕೊರೊನಾ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಾ ಅಡ್ಡಪರಿಣಾಮ?

ಚಿತ್ರದುರ್ಗದಲ್ಲಿರುವ ಪ್ರಾದೇಶಿಕ ಉಗ್ರಾಣದಿಂದ ಲಸಿಕೆಯನ್ನು ಶಿವಮೊಗ್ಗಕ್ಕೆ ತರಲಾಗಿದೆ. ಸುಮಾರು 45 ಸಾವಿರ ಡೋಸ್ ಲಸಿಕೆ ಆಗಮಿಸಿದೆ ಎಂಬ ಮಾಹಿತಿ ಇದೆ. ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್, ಜಿಪಂ ಸಿಇಒ ವೈಶಾಲಿ, ಡಿಎಚ್ಓ ರಾಜೇಶ್ ಸುರಗೀಹಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಲಸಿಕೆಗಳನ್ನು ಸಂಗ್ರಹ ಮಾಡಲಾಯಿತು.

 ಯಾರು ಯಾರಿಗೆ ಮೊದಲು ಲಸಿಕೆ ನೀಡಬೇಕು?; ಕೇಂದ್ರದಿಂದ ಬಂತು ಮಾರ್ಗಸೂಚಿ ಯಾರು ಯಾರಿಗೆ ಮೊದಲು ಲಸಿಕೆ ನೀಡಬೇಕು?; ಕೇಂದ್ರದಿಂದ ಬಂತು ಮಾರ್ಗಸೂಚಿ

Coronavirus Vaccine Come To Shivamogga From Chitradurga

ಲಸಿಕೆ ವಿತರಣೆ ಆರಂಭ; ಜನವರಿ 16ರ ಶನಿವಾರದಿಂದ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ, ಸಾಗರ ಹಾಗೂ ಸೊರಬಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಜನವರಿ 18ರಿಂದ ಜಿಲ್ಲೆಯಾದ್ಯಂತ 91 ಕೇಂದ್ರಗಳ ಪ್ರತಿ ಬೂತ್‌ನಲ್ಲಿಯೂ 100 ಜನರಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ.

 ಲಸಿಕೆ ಬಗ್ಗೆ ನಿಮ್ಮ ಅನುಮಾನ ವಿಜ್ಞಾನಿಗಳಿಗೆ ಅವಮಾನ... ಲಸಿಕೆ ಬಗ್ಗೆ ನಿಮ್ಮ ಅನುಮಾನ ವಿಜ್ಞಾನಿಗಳಿಗೆ ಅವಮಾನ...

45 ಸಾವಿರ ಡೋಸ್; ಶಿವಮೊಗ್ಗ ನಗರಕ್ಕೆ ಸುಮಾರು 45 ಸಾವಿರ ಡೋಸ್ ಕೋವಿಡ್ ಲಸಿಕೆ ಬಂದಿದೆ. 10 ಬಾಕ್ಸ್‌ಗಳಲ್ಲಿ ಬಂದಿರುವ ಲಸಿಕೆಯನ್ನು ಶನಿವಾರ 900 ಕೋವಿಡ್ ವಾರಿಯರ್ಸ್‌ಗಳಿಗೆ ನೀಡಲಾಗುತ್ತದೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಲಸಿಕಾ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಲಸಿಕೆ ನೀಡಲು ಆರಂಭಿಸಲಾಗುತ್ತದೆ.

6 ತಾಲೂಕುಗಳ ಆಸ್ಪತ್ರೆ, ಮೆಗ್ಗಾನ್ ಆಸ್ಪತ್ರೆ, ಶಿಕಾರಿಪುರದ ಚಿಕ್ಕಜೋಗಿಹಳ್ಳಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಶನಿವಾರ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ.

English summary
Shivamogga district received Coronavirus vaccine on Friday. Covid vaccine drive will be held from January 16, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X