ಕೊರೊನಾ ಎಫೆಕ್ಟ್: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್!

ಶಿವಮೊಗ್ಗ, ಮಾರ್ಚ್ 03: ಬೆಂಗಳೂರಿನಲ್ಲಿ ನಿನ್ನೆ ಟೆಕ್ಕಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಹೀಗಾಗಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ವಾರ್ಡ್ ತೆರೆಯಲು ಆರೋಗ್ಯ ಇಲಾಖೆ ಆದೇಶಿಸಿದೆ.

ಅದರಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಗೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. 6 ಬೆಡ್, ಪ್ರತ್ಯೇಕ ವೈದ್ಯರು ಹಾಗೂ ಔಷಧಿಗಳನ್ನು ಅಲ್ಲೇ ಇರಿಸಲಾಗಿದೆ.

ಈ ಕುರಿತು ಮಾತನಾಡಿದ ಪ್ರಭಾರ ಜಿಲ್ಲಾ ಆರೋಗ್ಯ ಅಧೀಕ್ಷಕ ಸಜ್ಜನ್ ಮಂಜುನಾಥ್ ಜ್ವರ, ತಲೆನೋವು, ಮೊದಲಾದ ಲಕ್ಷಣಗಳು ಕೊರೊನಾ ವೈರಸ್ ನ ಲಕ್ಷಣಗಳಾಗಿವೆ ಎಂದರು.

Corona Effect: Separate Ward At Meggan Hospital In Shivamogga

ಕಾಯಿಲೆ ಕಾಣಿಸಿಕೊಂಡ ವ್ಯಕ್ತಿಗಳ ರಕ್ತ ಪರೀಕ್ಷೆ ನಡೆಸಿ ನಂತರ ಇಲ್ಲಿನ ವಾರ್ಡ್ ನಲ್ಲಿ ಇರಿಸಲಾಗುವುದು. ಈ ರೋಗಕ್ಕೆ ಪ್ರತ್ಯೇಕ ವಾರ್ಡ್ ನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಈ ರೋಗದ ಬಗ್ಗೆ ಭಯಪಡುವುದು ಬೇಡ ಎಂದು ತಿಳಿಸಿದರು.

Corona Effect: Separate Ward At Meggan Hospital In Shivamogga

ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ತಳಮಟ್ಟದಲ್ಲಿದೆ, ಅಷ್ಟರ ಮಟ್ಟಿಗೆ ಭಾರತ ದೇಶದಲ್ಲಿ ಜನ ಸೇಫ್ ಆಗಿದ್ದೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+