ಶಿವಮೊಗ್ಗದಲ್ಲಿ ಸೆಪ್ಟಂಬರ್ 9ರಂದು ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ
ಶಿವಮೊಗ್ಗ, ಆಗಸ್ಟ್.31: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 9 ರಂದು ಬೆಳಗ್ಗೆ 9 ಗಂಟೆಗೆ ಕುವೆಂಪು ರಂಗ ಮಂದಿರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಆಯೋಜಿಸಿದೆ.
ಭಾಗವಹಿಸುವವರು ಕಡ್ಡಾಯವಾಗಿ ಸೆಪ್ಟಂಬರ್ 01ರಂದು ನೀಡಲಾಗುವ ಪಾಸ್ ಗಳನ್ನು ಪಡೆಯಬೇಕಾಗಿದ್ದು, ಪಾಸ್ ಇದ್ದರೆ ಮಾತ್ರ ಪ್ರವೇಶವಿರುತ್ತದೆ. ಆಸಕ್ತರು ಪಾಸ್ ಗಳನ್ನು ಸಾಗರ ರಸ್ತೆಯಲ್ಲಿರುವ ಪಂಪ ನಗರದ ಗುತ್ಯಪ್ಪ ಕಾಲೋನಿ ಬಳಿ ಇರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಪಡೆಯಬಹುದಾಗಿದೆ.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾಧಿಕಾರಿ ದಯಾನಂದ, ಬೆಂಗಳೂರು ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್, ಪೊಲೀಸ್ ವರಿಷ್ಟಾಧಿಕಾರಿ ಅಭಿನವ್ ಕರೆ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಭಾಗವಹಿಸುವರು.

ಬೆಳಗ್ಗೆ 9.30ರಿಂದ 10ರವರೆಗೆ ನೋಂದಣಿ, 10ರಿಂದ 11.30ರವರೆಗೆ ಉದ್ಘಾಟನೆ, ಬಳಿಕ ಯುಪಿಎಸ್ ಸಿ, ಕೆಪಿಎಸ್ ಸಿ ಪೂರ್ವಭಾವಿ ಪರೀಕ್ಷೆಗಳ ತಯಾರಿ, ಮುಖ್ಯ ಪರೀಕ್ಷೆಗಳ ತಯಾರಿ, ನೆನಪಿನ ಶಕ್ತಿ ತಂತ್ರಗಳು, ಸಂದರ್ಶನದ ಸಿದ್ಧತೆ, ಪ್ರಶ್ನೋತ್ತರ ಹಾಗೂ ಸಂವಾದ ನಡೆಯಲಿವೆ.












Click it and Unblock the Notifications