ಶಿವಮೊಗ್ಗ ಗಲಭೆ ಹಿಂದೆ ಕಾಂಗ್ರೆಸ್‌ ಕೈವಾಡವಿದೆ: ಈಶ್ವರಪ್ಪ

ಬೆಂಗಳೂರು, ಆಗಸ್ಟ್‌ 16: ಶಿವಮೊಗ್ಗದಲ್ಲಿ ನಡೆದಿರುವ ಗಲಭೆ ಹಿಂದೆ ಕಾಂಗ್ರೆಸ್‌ನವರು ಇದ್ದಾರೆ. ಗಲಭೆ ಬಗ್ಗೆ ಕಾಂಗ್ರೆಸ್‌ನವರು ಖಂಡನೆ ವ್ಯಕ್ತಪಡಿಸಿಲ್ಲ. ಸಾವರ್ಕರ್ ಬ್ಯಾನರ್ ಹರಿದು ಹಾಕಿದವನು ಕಾಂಗ್ರೆಸ್‌ ಕಾರ್ಪೋರೇಟರ್ ಗಂಡ. ಆತನ ಹೆಂಡತಿ ಕಾಂಗ್ರೆಸ್‌ ಪಾಲಿಕೆ‌ ಸದಸ್ಯೆ ಆಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆರೋಪಿಸಿದ್ದಾರೆ.

ಆ ಕಾರ್ಪೋರೇಟರ್‌ ಗಂಡ ಮೂಲತಃ ಎಸ್‌ಡಿಪಿಐ ಕಾರ್ಯಕರ್ತ. ಕಾಂಗ್ರೆಸ್‌ನವರು ಯಾವಾಗಲೂ ಬಿಜೆಪಿಯವರು ಕೋಮುಗಲಭೆ ಸೃಷ್ಟಿಸುತ್ತಾರೆ ಎಂದು ಆರೋಪ ಮಾಡುತ್ತಾರೆ. ಆದರೆ ಕೋಮು ಗಲಭೆ ಸೃಷ್ಟಿಸುತ್ತಿರುವವರು ಕಾಂಗ್ರೆಸ್‌ ಕಾರ್ಪೋರೇಟರ್ ಆಗಿದ್ದಾನೆ. ಅವನ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬೇಕು. ಆದರೆ ಕಾಂಗ್ರೆಸ್‌ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲ್ಲ ಎಂದರು.

ಶಿವಮೊಗ್ಗ ಪ್ರಕರಣದಲ್ಲಿ 6 ಜನ ಗೂಂಡಾಗಳು ಪ್ರೇಮ್ ಸಿಂಗ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ. ಈಗ ಪ್ರೇಮ್ ಸಿಂಗ್ ಆಸ್ಪತ್ರೆಯಲ್ಲಿದ್ದಾನೆ. ಇಂದು ನಸುಕಿನಲ್ಲಿ ಈ ಘಟನೆ ಸಂಬಂಧ ಒಂದು ಫೈರಿಂಗ್ ಮಾಡಿದ್ದಾರೆ. ಈವರೆಗೆ ಮೂರು ಜನರನ್ನು ಬಂಧಿಸಲಾಗಿದೆ. ಇನ್ನೂ ಮೂರು ಜನ ಸಿಕ್ಕಿಲ್ಲ. ನಮ್ಮ ಶಿವಮೊಗ್ಗ ಶಾಂತಿಪ್ರಿಯರ ಊರು. ಹೊರಗಡೆಯಿಂದ ಬಂದ ಜನರಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದರು.

ಈಗ ಈ ಘಟನೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಈ ಘಟನೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ‌. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡ್ತಿದ್ದಾರೆ.

ಕೆಲವು ಮುಸಲ್ಮಾನ ಗೂಂಡಾಗಳಿಗೆ ನಾನ್ ಹೇಳ್ತೀನಿ. ಯಾರು ಗೂಂಡಾಗಳಿದ್ದಾರೆ ಅವರಿಗೆ ಕರೆದು ಮುಸ್ಲಿಂ ನಾಯಕರು ಬುದ್ದಿವಾದ ಹೇಳಬೇಕು. ಇಲ್ಲ ಅಂದರೆ ಅಂತ ಗೂಂಡಾಗಳನ್ನು ಸರ್ಕಾರ ನೋಡಿಕೊಳ್ಳುತ್ತದೆ. ಈ ಘಟನೆ ಮಾಡಿದ್ದು ಎಸ್‌ಡಿಪಿಐ ಕಾರ್ಯಕರ್ತ. ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯರು. ಎಸ್‌ಡಿಪಿಐ ನಿಷೇಧಿಸುವ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಅದು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರುತ್ತೇ ಅನ್ನೊ ನಂಬಿಕೆ ನಮ್ಮದು ಎಂದು ಈಶ್ವರಪ್ಪ ಹೇಳಿದರು.

ಮುಸಲ್ಮಾನರು ಶಾಂತಿ ಬಯಸುತ್ತಿದ್ದಾರೆ

ಮುಸಲ್ಮಾನರು ಶಾಂತಿ ಬಯಸುತ್ತಿದ್ದಾರೆ

ಪೊಲೀಸರು ಶಾಂತಿ ಕಾಪಾಡಲು ನಿನ್ನೆ ಸ್ಯಾಂಪಲ್ ತೋರಿಸಿದ್ದಾರೆ. ಮುಂಚೆಯಿಂದಲೂ ಕೆಲ ಹಿರಿಯ ಮುಸಲ್ಮಾನರು ಶಾಂತಿ ಬಯಸುತ್ತಿದ್ದಾರೆ. ಅವರು ಯುವಕರಿಗೆ ಬುದ್ದಿಹೇಳಬೇಕು. ಯಾರು ಗೂಂಡಾಗಳಿದ್ದಾರೆ ಅವರಿಗೆ ಬುದ್ದಿ ಹೇಳಬೇಕು. ಇಲ್ಲ ಅಂದರೆ ಹಿಂದೂ ಸಮಾಜ ಅವರನ್ನು ನೋಡಿಕೊಳ್ಳುತ್ತೆ. ಸರ್ಕಾರ ಅವರಿಗೆ ಬುದ್ದಿ‌ ಕಲಿಸಲಿದೆ ಎಂದು ಹೇಳಿದರು.

ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ

ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ

ಎಸ್‌ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆಯಾಗಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಆದರೆ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಅವರು‌ ಕಾನೂನನ್ನು ಚೆನ್ನಾಗಿ ಅರಿತಿರುವರು

ಅವರು‌ ಕಾನೂನನ್ನು ಚೆನ್ನಾಗಿ ಅರಿತಿರುವರು

ಸರ್ಕಾರ ನಿರ್ವಹಣೆ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ಸಂಬಂಧ ಮಾತನಾಡಿದ ಈಶ್ವರಪ್ಪ, ಮಾಧುಸ್ವಾಮಿ ಈ ರೀತಿ ಹೇಳಿರೋದು ನಿಜಕ್ಕೂ ತಪ್ಪು

ಅವರು‌ ಕಾನೂನನ್ನು ಚೆನ್ನಾಗಿ ಅರಿತಿರುವವರು. ಅವರು ಈ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಾನು ಅವರ ಜೊತೆ ಈ ಬಗ್ಗೆ ಖಾಸಗಿಯಾಗಿ ಮಾತಾಡುತ್ತೇನೆ ಎಂದು ತಿಳಿಸಿದರು.

ಜವಾಹರಲಾಲ್ ನೆಹರು ದೇಶ ವಿಭಜನೆ ಮಾಡಿದರು

ಜವಾಹರಲಾಲ್ ನೆಹರು ದೇಶ ವಿಭಜನೆ ಮಾಡಿದರು

ಘಟನೆಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಾತಿ ಲೇಪನ ಹಚ್ಚಿದ್ದಾರೆ. ಜವಾಹರಲಾಲ್ ನೆಹರು ದೇಶ ವಿಭಜನೆ ಮಾಡಿದರು. ಹೀಗಾಗಿ ಸರ್ಕಾರಿ ಜಾಹೀರಾತಿನಲ್ಲಿ ಅವರ ಫೊಟೋ ತೆಗೆದಿದ್ದಾರೆ ಎಂದು ಸರ್ಕಾರದ ನಡೆಯನ್ನು ಈಶ್ವರಪ್ಪ ಸಮರ್ಥಿಸಿಕೊಂಡರು. ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ ಹಬ್ಬ ಮಾಡಲ್ವ? ಅದಕ್ಕೆ ನಾವು ಬೆಂಬಲ ಕೊಡಲ್ವಾ? ನಮ್‌ ಹಬ್ಬದ ತಂಟೆಗೆ ಬರಬೇಡಿ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯ ಆಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

Recommended Video

      BJP ಅವರದ್ದು ನಕಲಿ ದೇಶಭಕ್ತಿ, ಇವರಿಗೆ ಇತಿಹಾಸವೇ ಗೊತ್ತಿಲ್ಲ: ಬಿಜೆಪಿ ಮೇಲೆ ಸಿದ್ದು ಗರಂ | *Karnataka | Oneindia

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+