ಸಿಡಿ ವಿಚಾರದ ತನಿಖೆ; ಸರ್ಕಾರಕ್ಕೆ ಡಿ. ಕೆ. ಶಿವಕುಮಾರ್ ಪ್ರಶ್ನೆ

ಶಿವಮೊಗ್ಗ, ಮಾರ್ಚ್ 14; "ಅದು ಯಾವ ಸಿಡಿ ನೋಡೋಣ. ಮಂತ್ರಿ ಕೂಡ ಅಧಿಕೃತವಾಗಿ ಸಿಡಿ ವಿಚಾರ ಹೇಳಿದ್ದಾರೆ. ಅದರ ತನಿಖೆ ಯಾಕಾಗುತ್ತಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು.

ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯುವತಿ ವಿಡಿಯೋ ಕುರಿತು ಪತ್ರಿಕೆಗಳಲ್ಲಿ ಓದಿದ್ದೇನೆ. ಪೊಲೀಸರು, ಮಹಿಳಾ ಆಯೋಗದವರು ತನಿಖೆ ನಡೆಸಬೇಕು" ಎಂದರು.

"ರಮೇಶ್ ಜಾರಕಿಹೊಳಿ ಜೊತೆಯಲ್ಲಿ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿರುವ ಯುವತಿ ಬಿಡುಗಡೆ ಮಾಡಿರುವ ವಿಡಿಯೋವನ್ನು ನಾನು ನೋಡಿಲ್ಲ. ಆ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾತನಾಡುತ್ತೇನೆ" ಎಂದು ತಿಳಿಸಿದರು.

CD Case Probe DK Shivakumar Question To Govt

ಸ್ವಯಂ ಪ್ರೇರಿತ ದೂರು; "ಸಿಡಿ ವಿಚಾರವಾಗಿ ಬಿಜೆಪಿಯ ಹಲವರು ಮಾತನಾಡಿದ್ದಾರೆ. ಯತ್ನಾಳ್, ವಿಶ‍್ವನಾಥ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲವನ್ನು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ತನಿಖೆ ನಡೆಸಬಹುದಿತ್ತು. ಆದರೆ ಈ ತನಕ ತನಿಖೆಯಾಗಿಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

"ಒಂದು ವೇಳೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಆಗುವುದಿಲ್ಲ ಎಂದರೆ ನಾವೇ ದೂರು ಕೊಡಿಸುತ್ತೇವೆ. ಅದು ಯಾವ ಸಿಡಿ ನೋಡೋಣ. ಮಂತ್ರಿ ಕೂಡ ಅಧಿಕೃತವಾಗಿ ಸಿಡಿ ವಿಚಾರ ಹೇಳಿದ್ದಾರೆ. ಅದರ ತನಿಖೆ ಯಾಕಾಗುತ್ತಿಲ್ಲ?" ಎಂದರು.

ಷಡ್ಯಂತ್ರಗಳು; "ನಮ್ಮ ಮೇಲೆ ಹಿಂದಿನಿಂದ ಷಡ್ಯಂತ್ರಗಳು ನಡೆದುಕೊಂಡು ಬಂದಿದೆ. ಅದು ಮುಂದುವರೆಯುತ್ತಿದೆ, ಮುಂದುವರೆಲಿ. ರಮೇಶ್ ಜಾರಕಿಹೊಳಿ ಅವರು ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಒಮ್ಮೆ ಹೇಳಿದರು. ನಂಗೆ ಗೊತ್ತೇ ಇಲ್ಲ ಎಂದಿದ್ದರು. ಈಗ ಅವರೆ ಎಲ್ಲವನ್ನು ಹೇಳುತ್ತಿದ್ದಾರೆ" ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+