ಪುತ್ರನ ವಿವಾಹಕ್ಕೆ ಎಚ್. ಕೆ. ಕುಮಾರಸ್ವಾಮಿ ಆಮಂತ್ರಿಸಿದ ಬಿ. ವೈ. ರಾಘವೇಂದ್ರ
ಶಿವಮೊಗ್ಗ, ಮಾರ್ಚ್ 26: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ವಿವಾಹದ ತಯಾರಿ ಆರಂಭಿಸಿದ್ದಾರೆ. ವಿವಿಧ ಪಕ್ಷದ ನಾಯಕರಿಗೆ ಅವರು ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಲು ಪ್ರಾರಂಭಿಸಿದ್ದಾರೆ. ಜೂನ್‌ನಲ್ಲಿ ಬೆಂಗಳೂರಿನಲ್ಲಿ ಸುಭಾಷ್ ಮತ್ತು ಶ್ರಾವಣಾ ವಿವಾಹ ನಡೆಯಲಿದೆ. ಸೋಮವಾರ ನಿಶ್ಚಿತಾರ್ಥ ಕಲಬುರಗಿಯಲ್ಲಿ ನಡೆದಿದೆ.
ದೆಹಲಿ ಪ್ರವಾಸದಲ್ಲಿರುವ ಸಂಸದ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ಮತ್ತು ಶ್ರಾವಣಾ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರಿಗೆ ನೀಡಿದರು. ಅನಿತಾ ಕುಮಾರಸ್ವಾಮಿ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಕುರಿತು ಎಚ್. ಡಿ. ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸದಸ್ಯರಾದ ಶ್ರೀ ಬಿ. ವೈ. ರಾಘವೇಂದ್ರ ಅವರು ಕುಟುಂಬ ಸಮೇತವಾಗಿ ನವದೆಹಲಿಯ ನನ್ನ ನಿವಾಸಕ್ಕೆ ಆಗಮಿಸಿ ತಮ್ಮ ಸುಪುತ್ರನ ವಿವಾಹ ಮಹೋತ್ಸವಕ್ಕೆ ಆಮಂತ್ರಿಸಿದರು. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ' ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಜೂನ್ ತಿಂಗಳಿನಲ್ಲಿ ಬಿ. ವೈ. ರಾಘವೇಂದ್ರ ಪುತ್ರ ಸುಭಾಷ್ ಮತ್ತು ಶ್ರಾವಣಾ ವಿವಾಹ ಬೆಂಗಳೂರಿನಲ್ಲಿ ನಡೆಯಲಿದೆ. ನಿಶ್ಚಿತಾರ್ಥ ಸೋಮವಾರ ಮುಕ್ತಾಯಗೊಂಡ ಬಳಿಕ ರಾಘವೇಂದ್ರ ಅವರು ವಿವಿಧ ಪಕ್ಷದ ನಾಯಕರನ್ನು ವಿವಾಹಕ್ಕೆ ಆಮಂತ್ರಿಸುವ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಕಲಬುರಗಿ ಜೊತೆ ಸಂಬಂಧ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊಮ್ಮಗನ ವಿವಾಹಕ್ಕಾಗಿ ಮತ್ತೊಮ್ಮೆ ಕಲಬುರಗಿ ಜೊತೆ ಸಂಬಂಧ ಬೆಳೆಸಿದ್ದಾರೆ. ಯಡಿಯೂರಪ್ಪ ಮೊಮ್ಮಗ ಸುಭಾಷ್ ಮತ್ತು ಶ್ರಾವಣಾ ವಿವಾಹ ನಿಶ್ಚಿತಾರ್ಥ ಸೋಮವಾರ ಕಲಬುರಗಿಯ ಖಾಸಗಿ ಹೋಟೆಲ್‌ನಲ್ಲಿ ನಡೆದಿತ್ತು. ಬಿ. ಎಸ್. ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವಾರು ನಾಯಕರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು.
ಸುಭಾಷ್ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ದಂಪತಿಯ ಪುತ್ರಿ ಶ್ರಾವಣಾ ಅವರನ್ನು ವಿವಾಹವಾಗುತ್ತಿದ್ದಾರೆ. ಈ ನಿಶ್ಚಿತಾರ್ಥದ ಮೂಲಕ ಯಡಿಯೂರಪ್ಪ ಕುಟುಂಬ ಕಲಬುರಗಿ ಜೊತೆ ಮತ್ತೆ ಸಂಬಂಧ ಬೆಳೆಸಿದೆ. ಬಿ. ವೈ. ವಿಜಯೇಂದ್ರ ಅವರ ಪತ್ನಿ ಕೂಡ ಕಲಬುರಗಿ ಮೂಲದವರು.
ಮಾಧ್ಯಮಗಳ ಜೊತೆ ಕಲಬುರಗಿಯಲ್ಲಿ ಭಾನುವಾರ ಮಾತನಾಡಿದ್ದ ಬಿ. ಎಸ್. ಯಡಿಯೂರಪ್ಪ, "ಈಗಾಗಲೇ ಸೊಸೆ ಬಿ. ವೈ. ವಿಜಯೇಂದ್ರ ಪತ್ನಿ ಕಲಬುರಗಿಯವರೇ ಆಗಿದ್ದಾರೆ. ಈಗ ಮೊಮ್ಮಗನಿಗೆ ಸಹ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಅವರ ಸುಪುತ್ರಿಯೊಂದಿಗೆ ವಿವಾಹ ನಿಶ್ಚಿಯವಾಗಿದೆ" ಎಂದು ಹೇಳಿದ್ದರು.
ಸಂಸದ ಬಿ. ವೈ. ರಾಘವೇಂದ್ರ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಪುತ್ರನ ವಿವಾಹಕ್ಕೆ ಆಮಂತ್ರಿಸಬೇಕಿದೆ. ಜೊತೆಗೆ ಕ್ಷೇತ್ರದ ಕೆಲಸಗಳನ್ನು ಸಹ ನೋಡಿಕೊಳ್ಳಬೇಕಿದೆ. ಆದ್ದರಿಂದ ಮಾರ್ಚ್ ಅಂತ್ಯದಲ್ಲಿಯೇ ವಿವಾಹ ಸಮಾರಂಭದ ಆಮಂತ್ರಣ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದ್ದರಿಂದ ಎರಡೂ ಪಕ್ಷದ ನಾಯಕರನ್ನು ವಿವಾಹಕ್ಕೆ ಬಿ. ವೈ. ರಾಘವೇಂದ್ರ ಆಮಂತ್ರಿಸಲಿದ್ದಾರೆ. ಮಂಡ್ಯ ಸಂಸದ, ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿದ್ದ ಕಾರಣ ಬುಧವಾರ ಅವರನ್ನು ಭೇಟಿ ಮಾಡಿ ಪುತ್ರನ ವಿವಾಹದ ಆಮಂತ್ರಣ ನೀಡಿದ್ದಾರೆ.












Click it and Unblock the Notifications