ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕಾರಿಪುರದಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 08; ದೀಪಾವಳಿ ಹಬ್ಬದ ಬಳಿಕ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹೋರಿ ಬೆದರಿಸುವ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಶಿಕಾರಿಪುರದ ದೊಡ್ಡಕೇರಿಯಲ್ಲಿ ವಿಜೃಂಭಣೆಯಿಂದ ಹಬ್ಬ ನಡೆಯಿತು. ಅಕ್ಕಪಕ್ಕದ ಊರುಗಳಿಂದ ಸಾವಿರಾರು ಜನರು ಹಬ್ಬದಲ್ಲಿ ಪಾಲ್ಗೊಂಡಿದ್ದರು.

ರೈತಾಪಿ ವರ್ಗದ ಪ್ರಮುಖ ಹಬ್ಬವಾದ ಹೋರಿ ಬೆದರಿಸುವ ಸ್ಪರ್ಧೆಗೆ ದೊಡ್ಡಕೇರಿಯ ಗಿಡ್ಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಹಬ್ಬದಲ್ಲಿ ಪಾಲ್ಗೊಂಡ ಹೋರಿಗಳ ಅಲಂಕಾರ, ಅವುಗಳ ಓಟ ಕಂಡು ಸಾವಿರಾರು ಜನರು ಸಂತೋಷಪಟ್ಟರು.

ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು

ರೋಮಾಂಚಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿಗಳಿಗೆ ಬಗೆಬಗೆಯ ಅಲಂಕಾರ ಮಾಡಲಾಗಿತ್ತು. ಕಾಲ್ಗೆಜ್ಜೆ, ಬಲೂನು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಹೋರಿಗಳನ್ನು ಅಚ್ಚುಕಟ್ಟಾಗಿ ಅಲಂಕರಿಸಲಾಗಿತ್ತು.

ಹೋರಿ ಕದ್ದವನಿಗೆ ಬೆತ್ತಲೆ ಮೆರವಣಿಗೆ ಪ್ರಕರಣ; 9 ಮಂದಿ ಮೇಲೆ FIRಹೋರಿ ಕದ್ದವನಿಗೆ ಬೆತ್ತಲೆ ಮೆರವಣಿಗೆ ಪ್ರಕರಣ; 9 ಮಂದಿ ಮೇಲೆ FIR

Bull Taming Event Also Know As Hori Bedarisuva Spardhe At Shikaripura

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಹೋರಿಗಳ ಅಲಂಕಾರ ಕಣ್ತುಂಬಿಕೊಂಡರು. ದೊಡ್ಡ ಸಂಖ್ಯೆಯ ಜನರು ಸೇರಿದ್ದ ಜನರು ಹೋರಿಗೆ ಕಟ್ಟಿದ್ದ ಕೊಬ್ಬರಿ ಮೇಲೆ ಕಣ್ಣು ನೆಟ್ಟಿದ್ದರು. ಹೋರಿಯನ್ನು ಹಿಡಿದು, ಕೊಬ್ಬರಿ ಹರಿಯುವುದು ಸ್ಪರ್ಧೆಯಾಗಿದೆ.

ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!

ಹೋರಿಯ ಹೆಸರಿನ ಧ್ವಜ; ಸ್ಪರ್ಧೆಗೆ ಬಂದಿದ್ದ ಹೋರಿಗಳ ಹೆಸರಿನಲ್ಲಿ ಧ್ವಜವನ್ನು ಹಿಡಿದು ಯುವಕರು ಅಂಗಣದ ಸುತ್ತಲು ಸಂಭ್ರಮದಿಂದ ಓಡಾಡುತ್ತಿದ್ದರು. ಪ್ರತಿ ಹೋರಿಯು ಓಟಕ್ಕೆ ಇಳಿಯುತ್ತಿದ್ದಂತೆ ಅವುಗಳ ಮಾಲೀಕರು ಹೂವು ಹಾಕಿ ಸ್ವಾಗತಿಸುತ್ತಿದ್ದರು. ಇನ್ನು, ತಮ್ಮಿಷ್ಟದ ಹೋರಿಗಳು ಅಖಾಡಕ್ಕೆ ಇಳಿಯುತ್ತಿದ್ದಂತೆ ಜನರು ಜೋರಾಗಿ ಕೂಗಿ ಹುರುಪು ನೀಡುತ್ತಿದ್ದರು.

ದೀಪಾವಳಿ ಬಳಿಕ ಹಬ್ಬ; ಶಿವಮೊಗ್ಗ, ಹಾವೇರಿ ಜಿಲ್ಲೆಯ ಹಲವು ಭಾಗದಲ್ಲಿ ದೀಪಾವಳಿ ಬಳಿಕ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೆ. ಈ ಬಾರಿಯ ಸ್ಪರ್ಧೆಗೆ ಶುಕ್ರವಾರವೇ ಹಲವು ಕಡೆ ಚಾಲನೆ ಸಿಕ್ಕಿದೆ.

ಕರಾವಳಿ ಭಾಗದಲ್ಲಿ ಕಂಬಳ ನಡೆಯುವಷ್ಟು ವಿಜೃಂಭಣೆಯಿಂದ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಹಲವು ಗ್ರಾಮಗಳಲ್ಲಿ ಈ ಸ್ಪರ್ಧೆ ನಡೆದಿರಲಿಲ್ಲ.

Recommended Video

ಡೆಲ್ಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್ ಕೊಟ್ಟಿರೋ ಶ್ರೇಯಸ್ ಅಯ್ಯರ್ ಟಾರ್ಗೆಟ್ ಏನು? | Oneindia Kannada

English summary
Hori Bedarisuva Spardhe at Shivamogga district Shikaripura. Festival will be held at Shivamogga and Haveri after Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X