ಪಾರ್ಕಿಂಗ್ ವಿಚಾರ; ವೈದ್ಯರ ಮೇಲೆ ಕುಮಾರ್ ಬಂಗಾರಪ್ಪ ಹಲ್ಲೆ ಯತ್ನ?
ಶಿವಮೊಗ್ಗ, ಜೂನ್ 02: ದಂತವೈದ್ಯ ಡಾ. ಎಚ್. ಇ. ಜ್ಞಾನೇಶ್ ಮೇಲೆ ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಪಿಸಿಸಿ ವೈದ್ಯ ಘಟಕದ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ. ಪ್ರದೀಪ್ ಡಿಮೆಲ್ಲೊ ಘಟನೆಗೆ ಆಕ್ಷೇಪ ವ್ಯಕ್ತಿಪಡಿಸಿದ್ದು, ಶಾಸಕರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸೊರಬ ತಾಲೂಕಿನ ಶಿರಾಳಕೊಪ್ಪ ರಸ್ತೆಯ ಕ್ಲಿನಿಕ್‌ನಲ್ಲಿ ಜ್ಞಾನೇಶ್ ದಂತವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಕುಮಾರ್ ಬಂಗಾರಪ್ಪ ವೈದ್ಯರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂಬುದು ಆರೋಪ.
ವೈದ್ಯರ ಮೇಲೆ ಈ ರೀತಿ ದರ್ಪ ತೋರಿಸುವ ಶಾಸಕರು ಸಾಮಾನ್ಯ ಜನರನ್ನು ಬಿಡುತ್ತಾರೆಯೇ?. ಇಂತಹ ಧೋರಣೆಗಳನ್ನು ಶಾಸಕರು ಕೈಬಿಡಬೇಕು, ಇಲ್ಲವಾದರೆ ರಾಜ್ಯದ್ಯಾಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.

ಕುಮಾರ್ ಬಂಗಾರಪ್ಪ ವರ್ತನೆ ಕೇವಲ ಜ್ಞಾನೇಶ್‌ಗೆ ಮಾತ್ರವಲ್ಲಿ ರಾಜ್ಯದ ವೈದ್ಯ ಸಮೂಹಕ್ಕೆ ನೋವುಂಟು ಮಾಡಿದೆ. ಹಾಗಾಗಿ ಶಾಸಕರು ಕೂಡಲೇ ವೈದ್ಯರ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿಗಳು ಇಂತಹ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಡಾ. ಎಚ್. ಇ. ಜ್ಞಾನೇಶ್ ಹೇಳಿದ್ದೇನು?; ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದ ನಾಲ್ಕೈದು ಕಾಂಪ್ಲೆಕ್ಸ್‌ಗೆ ಸೇರಿದ ಜಾಗದಲ್ಲಿ ನಾವು ಮಣ್ಣನ್ನು ಹಾಕಿ ಕಾರು ಪಾರ್ಕಿಂಗ್ ಮಾಡಲು ಸ್ಥಳ ಸಿದ್ಧಪಡಿಸಿಕೊಂಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಅದೇ ಜಾಗದಲ್ಲಿ ನಾನು ಕಾರು ಪಾರ್ಕ್ ಮಾಡುತ್ತಿದ್ದೆ. ಅದು ಯಾವುದೇ ಸಂಪರ್ಕ ಕಲ್ಪಿಸುವ ರಸ್ತೆಯಲ್ಲ, ಆಗಿದ್ದರಿಂದ ನಾನು ಕಾರನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಿದ್ದೆ ಎಂದು ವೈದ್ಯರು ಹೇಳಿದ್ದಾರೆ.

ಆ ರಸ್ತೆಯಲ್ಲಿ ಆ ದಿನ ಕಾರಿನ ಹಾರ್ನ್ ಶಬ್ಧ ಕೇಳಿ ಹೊರಬಂದೆ, ಶಾಸಕರ ಕಾರು ನಿಂತಿತ್ತು. ನಾನು ಅವರಿಗೆ ನಮಸ್ಕಾರ ಮಾಡಿ ಕಾರನ್ನು ತೆಗೆಯಲು ಮುಂದಾದೆ. ಆದರೆ ಶಾಸಕರು ನಿರಂತರವಾಗಿ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಲು ಶುರು ಮಾಡಿದರು. ಆದರೂ ನಾನು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಬಂದು, ಯಾಕೆ ಸರ್ ಬೈತೀದೀರಾ, ನಾನೊಬ್ಬ ವೈದ್ಯ ಸರಿಯಾಗಿ ಮಾತನಾಡಿ ಎಂದು ಕೇಳಿದೆ. ಆದರೂ ಅವರು ನೀನು ವೈದ್ಯನಾದರೆ, ಪುಕ್ಕಟೆ ಕೆಲಸ ಮಾಡುತ್ತೀಯಾ, ಜನರಿಂದ ದುಡ್ಡು ತೆಗೆದುಕೊಳ್ಳುವುದಿಲ್ಲವೇ?. ಯೂಸ್‌ಲೆಸ್ ಫೆಲೋ ಅಂತಾ ಬೈಯಲು ಶುರುಮಾಡಿದರು ಎಂದು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಬೈಯ್ದ ಮೇಲೂ ನಾನೇನು ಪ್ರತಿಕ್ರಿಯಿಸದೇ ಗೌರವ ಕೊಟ್ಟು ಮಾತನಾಡಿ ಸರ್, ನಾನು ಇಲ್ಲಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿ ಎಂದು ಹೇಳಿದೆ. ಸ್ವಲ್ಪ ದೂರ ಹೋದವರು ಮತ್ತೆ ವಾಪಸ್ ಬಂದು ನನ್ನ ಕ್ಲಿನಿಕ್ ಮೆಟ್ಟಿಲ ಬಳಿ ನಿಂತು ಹಲ್ಲೆ ಮಾಡುವ ರೀತಿಯಲ್ಲಿ ಬಂದು ಜೋರಾಗಿ ಮಾತನಾಡಿದರು. ಇದೆಲ್ಲಾಅಗತ್ಯವಿರಲಿಲ್ಲ, ಅವರ ಜೊತೆಗೆ ಯಾವುದೇ ವೈಷಮ್ಯವಿರಲಿಲ್ಲ, ಆದರೂ ಅವರು ನನ್ನೊಂದಿಗೆ ಆ ರೀತಿ ನಡೆದುಕೊಂಡ ರೀತಿ ತಪ್ಪು, ನಾನೊಬ್ಬ ವೈದ್ಯನಾಗಿ ಇದನ್ನು ಖಂಡಿಸುತ್ತೇನೆ ಎಂದು ಜ್ಞಾನೇಶ್ ತಿಳಿಸಿದ್ದಾರೆ.
ಕೇವಲ ಪಾರ್ಕಿಂಗ್ ವಿಚಾರಕ್ಕೆ ಶಾಸಕ ಸ್ಥಾನದಲ್ಲಿರುವ ಕುಮಾರ್ ಬಂಗಾರಪ್ಪ ಹಲ್ಲೆ ಮಾಡುವ ಮಟ್ಟಕ್ಕೆ ಮುಂದಾಗಿದ್ದಾರೆ. ಆದರೆ ಇದು ಯಾವುದೇ ವೈಷಮ್ಯದ ಮೇಲೆ ನಡೆದಿಲ್ಲ ಎಂದಿರುವ ವೈದ್ಯ ಡಾ. ಎಚ್. ಇ. ಜ್ಞಾನೇಶ್, ತಾವೂ ರೋಟರಿ ಸಂಸ್ಥೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಈ ಬೆಳವಣಿಗೆ ಸಹಿಸದೇ ಅವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ. ನನಗೂ ಅವರು ಏಕೆ ಆ ರೀತಿ ನಡೆದುಕೊಂಡರು ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲಿನ ಜನರೂ ಕೂಡ ಅದನ್ನೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications