BJP vs BJP: ಬೆಳಗಾವಿಯಲ್ಲಿ ಸಭೆ ನಡೆಸಿದ ನಾಯಕರ ಕಡೆಗಣಿಸಿದರೆ ಬಿಜೆಪಿ ಇಬ್ಬಾಗ: ಈಶ್ವರಪ್ಪ ಭವಿಷ್ಯ
ಶಿವಮೊಗ್ಗ, ಆಗಸ್ಟ್ 12: ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಆಘಾತ ತಂದಿದೆ. ಅವರು ಪಕ್ಷದಲ್ಲಿ ಏನೇನು ಅನುಭವಿಸಿದ್ದಾರೆ ಎಂಬುದನ್ನು ಹೇಳಿಕೊಂಡಿಲ್ಲ. ಬದಲಾಗಿ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಇದು ನಡೆದಿದ್ದೆ ಆದಲ್ಲಿ ಬಿಜೆಪಿ ಗಲ್ಲಿ ಗಲ್ಲಿಗಳಲ್ಲಿ, ತಾಲೂಕು ಮಟ್ಟದಲ್ಲಿ ಇಬ್ಬಾಗವಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೇ ಸಭೆ ಸೇರಿದ 12 ನಾಯಕರ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ಸಭೆ ಸೇರಿದ ನಾಯಕರಲ್ಲಿ ಹಲವರು ಆರ್‌ಎಸ್‌ಎಸ್ ಸಂಘಟನೆಯಲ್ಲಿದ್ದವರು. ಬಿಜೆಪಿಯನ್ನು ಕಟ್ಟಿದವರು. ಪಕ್ಷದಲ್ಲಿ ತಮಗೆ ಆದ ನೋವಿನ ಬಗ್ಗೆ ಮಾತನಾಡಿಲ್ಲ. ಪಕ್ಷದ ಸಿದ್ಧಾಂತದ ಅಡಿ ಕೆಲಸ ಮಾಡಿದರೂ ಸಹಿತ ಅವರು ನೋವು ಉಂಡಿದ್ದಾರೆ. ಗಣೇಶ ಚತುರ್ಥಿ ಬಳಿಕ ಪಾದಯಾತ್ರೆ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.

ಕೇಂದ್ರ ನಾಯಕರು ಈ ಸಭೆ ನಡೆಸಿದ ನಾಯಕರನ್ನು ಕಡೆಗಣಿಸಬಾರದು. 12 ಜನ ಮಾತ್ರ ಸಭೆ ನಡೆಸಿದ್ದಾರೆ ಎಂದು ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಅಸಮಾಧಾನಿತ ನಾಯಕರು ತಿಳಿಸಿದ್ದಾರೆ. ಅವರು ಪಾದಯಾತ್ರೆ ನಡೆಸಿದ್ದೇ ಆಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪಕ್ಷ ಎರಡು ಹೋಳಾಗುತ್ತದೆ.
ಬಿಎಸ್‌ವೈ ಕುಟುಂಬಕ್ಕೆ ಅಧಿಕಾರ, ಬಿಜೆಪಿ ಸ್ಥಾನಕ್ಕೆ ಕುತ್ತು
ಲೋಕಸಭೆ ಚುನಾವಣೆಯ ವೇಳೆಗೆ ಯಡಿಯೂರಪ್ಪ ಪುತ್ರನನ್ನು ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಅಧಿಕಾರ ನೀಡಿದ ಕಾರಣದಿಂದಲೇ ಲೋಕಸಭೆಯಲ್ಲಿ ಬಿಜೆಪಿ ಸ್ಥಾನ 25 ರಿಂದ 17ಕ್ಕೆ ಇಳಿದಿದೆ ಎಂದು ಈಶ್ವರಪ್ಪ ತಿಳಿಸಿದರು.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪಕ್ಷ ಬಲ ಇದ್ದಾಗ ಹೆಚ್ಚು ಸ್ಥಾನ ಗಳಿಸಿತ್ತು. ಆದರೆ ಅದು ಈಗ ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್‌ವೈ ಕುಟುಂಬದ ಮೇಲೆ ಯಾಕಿಷ್ಟು ಮೋಹ?
ಬಿಎಸ್ ಯಡಿಯೂರಪ್ಪ ಕುಟುಂಬದವರ ಕೈಯಲ್ಲಿ ಪಾರ್ಟಿ ಕೊಡಲು ಕೇಂದ್ರದ ನಾಯಕರಿಗೆ ಯಾಕಿಷ್ಟು ಮೋಹ. ಸಾಮೂಹಿಕ ನಾಯಕತ್ವ ಎಂದು ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ಯಡಿಯೂರಪ್ಪನವರು ಸ್ವಜನ ಪಕ್ಷಪಾತ ಮಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಜಿಎಂ ಸಿದ್ದೇಶ್ವರ್ ಹೀಗೆ ಅನೇಕರು ಸಭೆ ನಡೆಸಿದ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಆದ್ದರಿಂದ ಕೂಡಲೇ ಹೈಕಮಾಂಡ್ ನಾಯಕರು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಸಜ್ಜಾಗಿರುವ ಈ ನಾಯಕರನ್ನು ಕರೆಯಿಸಿ ಮಾತನಾಡಬೇಕು. ಅವರ ನೋವು ಕೇಳುವ ಕೆಲಸ ಮಾಡಬೇಕು.
12 ಜನರು ಗುಂಪಿಗೆ ಮತ್ತಷ್ಟು ಜನ ಸೇರುತ್ತಾರೆ
ಇಲ್ಲವಾದರೆ ಈಗ 12 ಜನರು ಸೇರಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಈ ನೋವುಂಡವರ ಗುಂಪು ಸೇರಬಹುದು. ಮುಂದೆ ಪಕ್ಷ ಇಬ್ಬಾಗವಾಗಬಹುದು. ಅಲ್ಲ ಪಕ್ಷ ಸಂಘಟನೆಗೆ ಕುತ್ತು ಬರಲಿದ್ದು, ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸ್ಥಾನ 66ಕ್ಕೆ ಕುಸಿದಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಅಸಮಾಧಾನಿತರನ್ನು ಗಮನಸದೇ ಹೋದಲ್ಲಿ ಪಕ್ಷ ಕಟ್ಟಿದವರಿಗೆ ನೋವಾಗುತ್ತದೆ ಎಂದು ಅವರು ತಿಳಿಸಿದರು.
ನಾವೆಲ್ಲ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ನನಗೆ ಯಾರ ಮುಲಾಜು ಇಲ್ಲ, ನನಗೆ ಪಕ್ಷ ಮುಖ್ಯ. ಪಕ್ಷದಲ್ಲಿನ ಬೆಳವಣಿಗೆಯ ಕುರಿತು ಕೇಂದ್ರದ ನಾಯಕರು ಬೇಗ ಗಮನ ಹರಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications