ಶಿವಮೊಗ್ಗ: ಜ.9 ರಿಂದ ಬಿದನೂರು ಮಾರಿಕಾಂಬಾ ಜಾತ್ರೆ
ಹೊಸನಗರ, ಜನವರಿ 08: ಹಲವು ವರ್ಷಗಳ ಇತಿಹಾಸವಿರುವ ಶಿವಮೊಗ್ಗ ಜಿಲ್ಲೆಯ ನಗರ ಎಂಬ ಹಳ್ಳಿಯ ಬಿದನೂರು ಶ್ರೀ ಮಾರಿಕಾಂಬಾ ಜಾತ್ರೆ ಜ.9 ರಿಂದ 13ರವರೆಗೆ ಸಡಗರ-ಸಂಭ್ರಮದಿಂದ ನೆರವೇರಲಿದೆ.
ಈ ಜಾತ್ರೆಗೆ ರಾಜ್ಯದ ಹಲವೆಡೆಯಿಂದ ಭಕ್ತರು ಬಂದು ತಮ್ಮ ಹರಕೆ ಒಪ್ಪಿಸಿಹೋಗುತ್ತಾರೆ. ಕೆಳದಿ ಸಾಮ್ರಾಜ್ಯದ ಕೊನೆಯ ರಾಜಧಾನಿಯಾಗಿದ್ದ ಬಿದನೂರು ಹಲವು ಐತಿಹಾಸಿಕ ಮಹತ್ವವನ್ನು ಪಡೆದಿದೆ.

ಮಾರಿಕಾಂಬಾ ಜಾತ್ರೆ ಸುಸೂತ್ರವಾಗಿ ನಡೆಯಬೇಕೆಂಬ ಉದ್ದೇಶದಿಂದ ಸಕಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ನಗರ ಮತ್ತು ಬಿದನೂರಿನ ಸುತ್ತಮುತ್ತಲ ಸಾವಿರಾರು ಜನ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಇಷ್ಟದೇವಿಗೆ ತಮ್ಮ ಪ್ರಾರ್ಥನೆ, ಹರಕೆ ಸಲ್ಲಿಸಲಿದ್ದಾರೆ.
ವಿಜೃಂಭಣೆಯಿಂದ ನಡೆಯುವ ಈ ಜಾತ್ರೆಯಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ಇರುತ್ತದೆ.












Click it and Unblock the Notifications