ಭಾರತ್ ಬಂದ್: ರೈತರಲ್ಲಿ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದೇನು?

ಶಿವಮೊಗ್ಗ, ಡಿಸೆಂಬರ್ 7: ಪದೇ ಪದೇ ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ನಾಳೆ ಕರೆ ನೀಡಲಾಗಿರುವ ಭಾರತ್ ಬಂದ್ ಕೈಬಿಡಿ ಎಂದು ರೈತರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಈಗಾಗಲೇ ಬಂದ್ ಕೈಬಿಡಲು ರೈತರ ಬಳಿ ಪ್ರಧಾನಿಗಳು ಮನವಿ ಮಾಡಿದ್ದಾರೆ. ಆದರೆ, ರೈತರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.

ರಾಜ್ಯ ಹಾಗೂ ದೇಶದಲ್ಲಿ ಪದೇ ಪದೇ ಬಂದ್ ಮಾಡುವುದರಿಂದ ಜನರಿಗೆ, ರೈತರಿಗೆ ತೊಂದರೆಯಾಗುತ್ತದೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಮನವಿ ಮಾಡಿದರು.

Shivamogga: Bharat Bandh: CM Yediyurappa Appeals To Farmers

ರೈತರು ಈ ರೀತಿಯ ಕಟು ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಇಲ್ಲ. ಇದರಿಂದ ಜನರಿಗೆ ತೊಂದರೆಯಾಗಲಿದೆ. ಭಾರತ್ ಬಂದ್ ಹೋರಾಟ ಕೈ ಬಿಡಲು ನಾನು ಕೂಡ ರೈತರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇನ್ನು ಸೋಮವಾರದಿಂದ ಚಳಿಗಾಲದ ವಿಧಾನಸಭೆ ಅಧಿವೇಶನ ಆರಂಭಗೊಂಡಿದ್ದು, ಎರಡೂ ಕಡೆಯವರಿಗೂ (ಆಡಳಿತ ಹಾಗೂ ವಿರೋಧ ಪಕ್ಷ) ನ್ಯಾಯ ಒದಗಿಸುವಂತಹ ಅಧಿವೇಶನ ಇದಾಗಬೇಕೆಂಬುದು ನಮ್ಮ ಆಶಯವೆಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+