Get Updates
Get notified of breaking news, exclusive insights, and must-see stories!

ಭದ್ರಾವತಿ ಜನರಿಗೆ ಸಿಹಿಸುದ್ದಿ; ಮತ್ತೆ ವಿಐಎಸ್ಎಲ್ ಆರಂಭ

ಶಿವಮೊಗ್ಗ, ಆಗಸ್ಟ್ 01; ಭದ್ರಾವತಿಯ ಜನರಿಗೆ ಸಿಹಿಸುದ್ದಿ. ಹಲವು ವರ್ಷಗಳ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್‌) ಮತ್ತೆ ಆರಂಭವಾಗಲಿದೆ.

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. 'ಮತ್ತೆ ಶುರುವಾಗುತ್ತಿದೆ ಭದ್ರಾವತಿಯ ಸುವರ್ಣಯುಗ! ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ!, ವಿಐಎಸ್ಎಲ್ ಮೈಕೊಡವಿ ಮೇಲೇಳುತ್ತಿದೆ!' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Bhadravati VISL To Re Open On August 10th Says BY Raghavendra

'ಉತ್ಪಾದನೆ ಶುರುಮಾಡಲು SAIL ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆ. ಇದೇ ತಿಂಗಳ 10ಕ್ಕೆ barmill ಶುರುವಾಗಿ, ಅದಾದ ಕೆಲದಿನದಲ್ಲೇ ಪೂರ್ಣ ಪುನರಾರಂಭ!. ಸವಾಲುಗಳನ್ನೆಲ್ಲಾ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು, ಭರವಸೆ ಕಳೆದುಕೊಳ್ಳದ ನೌಕರ ಸಮುದಾಯದ್ದು' ಎಂದು ಹೇಳಿದ್ದಾರೆ.

ಸಂಸದ ರಾಘವೇಂದ್ರ, 'ಇದಕ್ಕೆ ಕಾರಣರಾದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ Narendra Modi ಅವರಿಗೆ, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿ, ಮತ್ತು ಕೇಂದ್ರ ಉಕ್ಕು ಸಚಿವ ಸನ್ಮಾನ್ಯ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾಜಿ ಅವರಿಗೆ ಕೃತಜ್ಞತೆಗಳು. ಅಭಿನಂದನೆಗಳು. ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ' ಎಂದು ತಿಳಿಸಿದ್ದಾರೆ.

ಬಹುದೊಡ್ಡ ಹೋರಾಟ; ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್‌) ಮುಚ್ಚಬಾರದು ಪುನಃ ಉತ್ಪಾದನೆ ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಕೆಲವು ತಿಂಗಳ ಹಿಂದೆ ಭದ್ರಾವತಿ ಬಂದ್ ಸಹ ನಡೆಸಿ, ಉದ್ಯೋಗಿಗಳನ್ನು ಉಳಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ವಿಐಎಸ್‌ಎಲ್‌ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪುನರ್‌ ಪರಿಶೀಲಿಸಬೇಕು ಎಂದು ಕೇಂದ್ರ ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಬರೆದ ಪತ್ರದಲ್ಲಿ ಮನವಿಯನ್ನು ಮಾಡಿದ್ದರು. ಕಾರ್ಖಾನೆ ಪುನಾರಂಭದ ಕುರಿತು ಕೇಂದ್ರ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದರು.

ಸರ್.‌ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆ ಭದ್ರಾವತಿಯ ಜನರ ಜೀವನ ನಿರ್ವಹಣೆಗೆ ಆಧಾರವಾಗಿತ್ತು. ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಕೈಗಾರಿಕೆಯಾಗಿತ್ತು. ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದ ವಿಐಎಸ್‌ಎಲ್‌ ಅನ್ನು ಆಧುನೀಕರಣದ ಉದ್ದೇಶದಿಂದ 1989ರಲ್ಲಿ ಭಾರತ ಸರ್ಕಾರಕ್ಕೆ ಒಪ್ಪಿಸಲಾಯಿತು.

ಬಳಿಕ ಭಾರತೀಯ ಉಕ್ಕಿನ ಪ್ರಾಧಿಕಾರ (ಸೈಲ್‌) ಇದರ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಕೆಮ್ಮಣ್ಣುಗುಂಡಿ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಅದಿರು ಗಣಿಗಾರಿಕೆ ನಿಷೇಧಿಸಲಾಯಿತು. ಅಂದಿನಿಂದ ವಿಐಎಸ್‌ಎಲ್‌ ಕಾರ್ಖಾನೆಗೆ ಅದಿರು ಪೂರೈಕೆ ಸ್ಥಗಿತಗೊಂಡಿದೆ. ಬಳಿಕ ಕಾರ್ಖನೆ ಉಳಿಸಲು ಹೋರಾಟ ನಡೆಯುತ್ತಲೇ ಇದೆ.

ವಿಐಎಸ್‌ಎಲ್ ಕಾರ್ಖಾನೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಭಾರತೀಯ ಉಕ್ಕು ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. 1923ರಲ್ಲಿ ಈ ಕಾರ್ಖಾನೆಯು ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಆರಂಭಿಸಿತ್ತು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಲಕ್ಷಾಂತರ ಕುಟುಂಬಕ್ಕೆ ಬೆಳಕಾಗಿತ್ತು. ಬಳಿಕ ನಷ್ಟದಲ್ಲಿ ಸಾಗುತ್ತಿತ್ತು.

2016ರಲ್ಲಿ ಕೇಂದ್ರ ಸಚಿವ ಸಂಪುಟ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಒಪ್ಪಿಗೆ ನೀಡಿತ್ತು. ಡಿಐಪಿಎಎಂ ಮೂಲಕ ಬಿಡ್ ಸಹ ಆಹ್ವಾನಿಸಿತ್ತು. ಆದರೆ ಬಿಡ್‌ದಾರರು ಆಸಕ್ತಿ ತೋರದ ಕಾರಣ ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆ ವಾಪಸ್ ಪಡೆದಿತ್ತು. ಖಾಸಗೀಕರಣಕ್ಕೆ ಉದ್ಯೋಗಿಗಳು ಸಹ ವಿರೋಧ ವ್ಯಕ್ತಪಡಿಸಿದ್ದರು.

ಕೇಂದ್ರ ಉಕ್ಕು ಖಾತೆ ಸಚಿವರು ಮೂರು ಬಾರಿ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದರು. ರಾಜ್ಯ ಸರ್ಕಾರ ಗಣಿ ಮಂಜೂರು ಮಾಡಿದರೆ, ಕಾರ್ಖಾನೆಯ ಅಧುನೀಕರಣಕ್ಕೆ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. 2017ರಲ್ಲಿ ರಾಜ್ಯ ಸರ್ಕಾರ ವಿಐಎಸ್‌ಎಲ್‌ಗೆ ಸಂಡೂರು ತಾಲೂಕಿನ ರಾಮದುರ್ಗದಲ್ಲಿ 150 ಎಕರೆ ಗಣಿ ಮಂಜೂರು ಮಾಡಿತ್ತು. ಅಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, 2024ರಲ್ಲಿ ಅದಿರು ಪೂರೈಕೆ ಆರಂಭವಾಗುವ ನಿರೀಕ್ಷೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+