ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಶಿವಮೊಗ್ಗ, ನವೆಂಬರ್ 22 : ನೈಋತ್ಯ ರೈಲ್ವೆ ಶಿವಮೊಗ್ಗ-ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ವಾರದ ಎಲ್ಲಾ ದಿನಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ನವೆಂಬರ್ 22ರಿಂದ ಅನ್ವಯವಾಗುವಂತೆ ಶಿವಮೊಗ್ಗ-ಯಶವಂತಪುರ ರೈಲು ವಾರದ ಎಲ್ಲಾ ದಿನಗಳು ಸಹ ಸಂಚಾರ ನಡೆಸಲಿದೆ ಎಂದು ಆದೇಶ ಹೊರಡಿಸಲಾಗಿದೆ. ಇದುವರೆಗೂ ಮಂಗಳವಾರ ಮಾತ್ರ ರೈಲು ಸಂಚಾರ ನಡೆಸುತ್ತಿರಲಿಲ್ಲ.

ವಾರದ ಎಲ್ಲಾ ದಿನಗಳಿಗೆ ರೈಲು ಸೇವೆ ವಿಸ್ತರಣೆ ಮಾಡಿರುವುದರಿಂದ ನೂರಾರು ಪ್ರಯಾಣಿಕರಿಗೆ ಸಹಾಯಕವಾಗಿದೆ. ಶಿವಮೊಗ್ಗ-ಯಶವಂತಪುರ ರೈಲು 4 ಗಂಟೆ 20 ನಿಮಿಷದಲ್ಲಿ ಸಂಚಾರ ನಡೆಸುತ್ತದೆ. ಈಗಾಗಲೇ ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

train

ವೇಳಾಪಟ್ಟಿ : ಜನಶತಾಬ್ದಿ ರೈಲು ಪ್ರತಿದಿನ ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. 9.50ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಂಜೆ 5.30ಕ್ಕೆ ಯಶವಂತಪುರಿಂದ ಹೊರಟು 9.50ಕ್ಕೆ ಶಿವಮೊಗ್ಗವನ್ನು ತಲುಪಲಿದೆ.

ಜನಶತಾಬ್ದಿ ರೈಲು ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸಲು ಮೊದಲು 4 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿತ್ತು. ಅಕ್ಟೋಬರ್‌ನಲ್ಲಿ ಸಮಯವನ್ನು ಪರಿಷ್ಕರಣೆ ಮಾಡಲಾಗಿತ್ತು. ಈ ವಾರದ ಎಲ್ಲಾ ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+