ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲು ತಾಳಗುಪ್ಪದ ತನಕ ವಿಸ್ತರಣೆ

ಶಿವಮೊಗ್ಗ, ಅಕ್ಟೋಬರ್ 04 : ಕೇಂದ್ರ ಸರ್ಕಾರ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸುವ ಮೂಲಕ ಈ ಭಾಗದ ಜನರಿಗೆ ದಸರಾಕ್ಕೆ ಭರ್ಜರಿ ಕೊಡುಗೆ ನೀಡಿದೆ.

ಶಿವಮೊಗ್ಗ ಸಂಸದರಾಗಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಣೆ ಮಾಡಲು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು. ಈಗ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ.

ವೇಳಾಪಟ್ಟಿ : ಪ್ರಸ್ತುತ ಶಿವಮೊಗ್ಗ-ಬೆಂಗಳೂರು ನಡುವೆ ಚಲಿಸುತ್ತಿರುವ ಇಂಟರ್ ಸಿಟಿ ರೈಲು ಸಂಖ್ಯೆ 20651 ಮತ್ತು 20652 ಗಳನ್ನು ತಾಳಗುಪ್ಪದವರೆಗೆ ವಿಸ್ತರಿಸಿದೆ. ವಿಸ್ತರಿಸಿರುವ ಈ ರೈಲು ಬೆಳಗ್ಗೆ 3.50 ಕ್ಕೆ ತಾಳಗುಪ್ಪದಿಂದ ಹೊರಟು ಬೆಂಗಳೂರಿಗೆ ಬೆಳಗ್ಗೆ 11.35 ಕ್ಕೆ ತಲುಪಲಿದೆ.

intercity train

ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 10.15 ಕ್ಕೆ ತಾಳಗುಪ್ಪ ತಲುಪಲಿದೆ. ಬೆಂಗಳೂರು ಮತ್ತು ಶಿವಮೊಗ್ಗ ಮಧ್ಯೆ ಸೂಪರ್ ಪಾಸ್ಟ್ ಎಕ್ಸ್‌ಪ್ರೆಸ್‌ ರೈಲಾಗಿ ಚಲಿಸುವ ರೈಲು ಶಿವಮೊಗ್ಗ ಮತ್ತು ತಾಳಗುಪ್ಪ ಮಧ್ಯೆ ಎಕ್ಸ್‌ಪ್ರೆಸ್‌ ರೈಲಾಗಿ ಚಲಿಸಲಿದೆ.

ಶಿವಮೊಗ್ಗ ತಾಳಗುಪ್ಪ ಮಧ್ಯೆ ಆನಂದಪುರ ಮತ್ತು ಸಾಗರದಲ್ಲಿ ನಿಲುಗಡೆ ಹೊಂದಲಿದೆ. ಈ ರೈಲಿನಿಂದ ಸಾಗರ ಭಾಗದ ಜನರಿಗೆ ತುಂಬಾ ಅನುಕೂಲವಾಗಿದ್ದು, ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

ಯಡಿಯೂರಪ್ಪ ಅಭಿನಂದನೆ : ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ಮನೋಜ್ ಸಿನ್ಹಾ ಅವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲೆಯ ಜನರ ಪರವಾಗಿ ಬಿ.ಎಸ್. ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+