ಶಿವಮೊಗ್ಗ: ಕರಡಿ ದಾಳಿಗೆ ನಾಲ್ಕು ತಿಂಗಳ ಮಗು ಸಾವು

ಶಿವಮೊಗ್ಗ, ಫೆಬ್ರವರಿ 28: ಕರಡಿ ದಾಳಿಗೆ ನಾಲ್ಕು ತಿಂಗಳ ಮಗು ಮೃತಪಟ್ಟಿರುವ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬುಧವಾರ ನಡೆದಿದೆ.

ಭದ್ರಾವತಿಯ ಮಾವಿನಕೆರೆ ಗ್ರಾಮದ ತೋಟದ ಮೆಯೊಂದರಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಮೇಲೆ ಕರಡಿ ದಾಳಿ ನಡೆಸಿದ್ದು ಒಂದು ಮಗು ಮೃತಪಟ್ಟಿದ್ದು ತಾಯಿ ಹಾಗೂ ಇನ್ನೊಂದು ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಗುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಕರಡಿ ದಾಳಿಗೆ ಭದ್ರಾವತಿ ಹಡ್ಲಘಟ್ಟ ಗ್ರಾಮ ಬೆಚ್ಚಿಬಿದ್ದಿದೆ. ಕಾಡಂಚಿನಲ್ಲಿದ್ದ ಮನೆಯಾಗಿದ್ದರಿಂದ ಮನೆ ಹಿತ್ತಲಿನಲ್ಲಿ ಆಟ ಆಡುವಾಗ ಕರಡಿ ಏಕಾ ಏಕಿ ದಾಳಿ ನಡೆಸಿದ್ದು ಪೂರ್ವಿ (4) ಎನ್ನುವ ಬಾಲಕಿ ಸಾವನ್ನಪ್ಪಿದ್ದಾಳೆ. ಇನ್ನೋರ್ವ ಮೂರು ವರ್ಷದ ಮಗು ಲಾವಣ್ಯ ಗಾಯಗೊಂಡಿದೆ. ಮಕ್ಕಳನ್ನು ಕರಡಿಯಿಂದ ಬಚಾವ್ ಮಾಡಲು ಬಂದ ತಾಯಿ ಗೌರಿ(30) ಮೇಲೂ ದಾಳಿ ನಡೆಸಿದ್ದು.ನಂತರ ಬಂದ ಗಂಡ ಕುಮಾರ ಕರಡಿಯನ್ನು ಓಡಿಸಿದ್ದಾನೆ.

Bear attack claims four months child near Bhadravati

ಮನೆ ಹಿಂದೆ ಆಟವಾಡುತ್ತಿದ್ದ ಪೂರ್ವಿ ಹಾಗೂ ಲಾವಣ್ಯರ ಮೇಲೆ ಕರಡಿ ದಾಳಿ ನಡೆಸಿದೆ. ತೀವ್ರ ಗಾಯಗೊಂಡ ಪೂರ್ವಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ತಾಯಿ ಗೌರಿ ಮತ್ತು ಇನ್ನೊಂದು ಮಗು ಲಾವಣ್ಯ ಇವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Bear attack claims four months child near Bhadravati

ಆಸ್ಪತ್ರೆಗೆ ಭದ್ರಾವತಿ ಡಿಸಿಎಫ್ ಚಲುವರಾಜ್ ಹಾಗೂ ಅರಣ್ಯ ಸಿಬ್ಬಂದಿಗಳಾದ ಮೋಹನ್ ಭೇಟಿ, ಆರೋಗ್ಯ ವಿಚಾರಣೆ. ಮಾಡಿದ್ದಾರೆ. ಗ್ರಾಮಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದು, ಕರಡಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+