ಬಡತನದಿಂದ ಬೇಸತ್ತು ನವಜಾತ ಶಿಶು ಮಾರಾಟ

ಶಿವಮೊಗ್ಗ, ಮಾ.11 : ಬಡತನದ ಕಾರಣದಿಂದಾಗಿ ನವಜಾತ ಹೆಣ್ಣು ಶಿಶುವನ್ನು ವೃದ್ಧೆಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿಯೇ ಒಂದು ಸಾವಿರ ರೂ.ಗೆ ಮಾರಾಟ ಮಾಡಿರುವ ಪ್ರಕರಣ ಶಿವಮೊಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ತಾಯಿಯೊಂದಿಗೆ ದಾಖಲಾಗಿದ್ದ 27 ದಿನಗಳ ಹೆಣ್ಣು ಮಗುವನ್ನು ಅಜ್ಜಿಯೇ ಒಂದು ಸಾವಿರ ರೂಗಳಿಗೆ ಅನಾಮಿಕರಿಗೆ ಮಾರಾಟ ಮಾಡಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ಎರಡು ದಿನದ ಹಿಂದೆ ಮಾರಾಟ ಮಾಡಲಾಗಿದ್ದು ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಗುವಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Shimoga

ಪ್ರಕರಣವೇನು : ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕೊಡತಾಳು ಗ್ರಾಮದ ಸೋಮ್ಲಿಬಾಯಿ ಬಾಣಂತಿ ಸನ್ನಿಯಿಂದ ಬಳಲುತ್ತಿದ್ದ ತನ್ನ ಮಗಳು ನಾಗಿಬಾಯಿಯನ್ನು ಕಳೆದ ಒಂದು ವಾರದ ಹಿಂದೆ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಎರಡು ದಿನಗಳ ಹಿಂದೆ ನಾಗಿಬಾಯಿಯ ಮಗು ಆಸ್ಪತ್ರೆಯಿಂದ ಕಾಣೆಯಾಗಿತ್ತು. [ಕಡು ಬಡತನ, ಕಂದಮ್ಮನನ್ನೇ ಮಾರಿದ ತಾಯಿ]

ಆಸ್ಪತ್ರೆ ಸಿಬ್ಬಂದಿಗಳು ಮಗುವಿನ ಬಗ್ಗೆ ಸೋಮ್ಲಿಬಾಯಿ ಬಳಿ ವಿಚಾರಿಸಿದಾಗ ಆಕೆ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ಸಂಬಂಧಿಕರಿಗೆ ಸಾಕುವುದಕ್ಕೆ ಕೊಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದಳು. ಜೊತೆಗೆ ಆಸ್ಪತ್ರೆಯಲ್ಲಿನ ಅಕ್ಕಪಕ್ಕದ ಬೆಡ್‌ನಲ್ಲಿದ್ದವರೊಂದಿಗೆ ಮಗುವನ್ನು ಸಾಕಲು ಸಾಧ್ಯವಿಲ್ಲ ನಾವು ಮಾರಾಟ ಮಾಡುತ್ತೇವೆ ಎಂದು ಸೋಮ್ಲಿಬಾಯಿ ಹೇಳಿಕೊಂಡಿದ್ದಳು.

ಸೋಮ್ಲಿಬಾಯಿ ಉತ್ತರದಿಂದ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ, ಆಕೆಯನ್ನು ವಿಚಾರಣೆ ಮಾಡಿದಾಗ ಮಗುವನ್ನು 1 ಸಾವಿರ ರೂಗಳಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದ್ದರಿಂದ ಆಸ್ಪತ್ರೆ ಅಧಿಕಾರಿಗಳು ಈ ಕುರಿತು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮೀಕಾಂತಮ್ಮ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸೋಮ್ಲಿಬಾಯಿ ಮಗುವನ್ನು ಯಾರಿಗೆ ಮಾರಾಟ ಮಾಡಿದ್ದಾನೆ ಎಂದು ಮಾಹಿತಿ ನೀಡಿಲ್ಲ. ಆದರೆ, ಅವರು ಸವಳಂಗದವರು ಎಂದು ಹೇಳಿಕೆ ನಿಡಿದ್ದಾಳೆ. ಆದ್ದರಿಂದ ಮಗುವಿನ ಪತ್ತೆಗಾಗಿ ಎರಡು ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಒಂದು ತಂಡವನ್ನು ಸವಳಂಗಕ್ಕೆ ಮತ್ತೊಂದು ತಂಡವನ್ನು ಸೋಮ್ಲಿಬಾಯಿ ಸಂಬಂಧಿಕರ ಮನೆಗೆ ಕಳುಹಿಸಿ ವಿಚಾರಣೆ ನಡೆಸಲಾಗುತ್ತಿದೆ.

ಸೋಮ್ಲಿಬಾಯಿ ಪುತ್ರಿ ನಾಗಿಬಾಯಿಗೆ ಇದಕ್ಕೆ ಮೊದಲು ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಈಗ ಮತ್ತೊಂದು ಹೆಣ್ಣು ಮಗುವನ್ನು ಸಾಕಬೇಕಾಗುತ್ತದೆ ಎಂದು ಅದನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸೋಮ್ಲಿಬಾಯಿ ಅಳಿಯ ಗಂಗಾನಾಯ್ಕ ಮದ್ಯ ವ್ಯಸನಿಯಾಗಿದ್ದು, ಹಣದ ಆಸೆಗಾಗಿ ತಾಯಿಯೊಂದಿಗೆ ಸೇರಿ ಮಗುವನ್ನು ಮಾರಾಟ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಗಂಗಾನಾಯ್ಕ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+