ಶಿವಮೊಗ್ಗದಲ್ಲಿ ಆಸ್ತಿ ಖರೀದಿ ಮಾಡುವ ಪ್ಲಾನ್ ಇದೆಯೇ?, ಇದನ್ನು ಓದಿ
ಶಿವಮೊಗ್ಗ, ಜನವರಿ 17: ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಮಹತ್ವದ ಮಾಹಿತಿಯೊಂದಿದೆ. ಸ್ಥಿರಸ್ತಿಗಳ ನೋಂದಣಿಗಾಗಿ 2023-24ನೇ ಸಾಲಿನ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿಯಲ್ಲಿ ಕೆಲವು ತಿದ್ದುಪಡಿ ಮಾಡಿ ಆದೇಶಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ ಮತ್ತು ಹೊಸನಗರ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಸ್ಥಿರಸ್ತಿಗಳ ನೋಂದಣಿಗಾಗಿ 2023-24 ನೇ ಸಾಲಿನ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾಗಸೂಚಿ ದರಪಟ್ಟಿಯಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ ಮತ್ತು ಹೊಸನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಕನಾಟಕ ಮುದ್ರಾಂಕ ಕಾಯ್ದೆ 1957 ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಅಧಿನಿಯಮ 7(3) ರಲ್ಲಿ ಪಕಾರ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಮೌಲ್ಯ ಮಾಪನ ಉಪ-ಸಮಿತಿಯು ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.
2023-24ನೇ ಸಾಲಿಗೆ ಪರಿಷ್ಕರಿಸಿ ಅನುಮೋದನೆ ಪಡೆದು ದಿನಾಂಕ 01/10/2023ರಿಂದ ಜಾರಿಗೆ ಬರುವಂತೆ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿತ್ತು. ಮುಂದುವರೆದು ಸದರಿ ಅಧಿಸೂಚನೆಯಲ್ಲಿ ಕೆಲವು ನ್ಯೂನ್ಯತೆಗಳಿದ್ದು, ಸದರಿ ನ್ಯೂನ್ಯತೆಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿಯು ಸರಿಪಡಿಸಿದ್ದು, ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ.
ತಿದ್ದುಪಡಿ ಮಾಡಲಾದ ವಿವರಗಳು; ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ/ ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳ ಅನ್ವಯ ಈ ಪರಿಷ್ಕರಣೆ ಮಾಡಲಾಗಿದೆ.
ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ ಅಭಿವೃದ್ಧಿಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಹೊಸ ದರಗಳನ್ನು ಅಳವಡಿಸುವುದು, ಪಟ್ಟಣ ಪಂಚಾಯತ್/ ಪುರಸಭೆ/ ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ. 5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ) ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
ನಿವೇಶನದರ. ಯಾವ ಉದ್ದೇಶಕ್ಕೆ ಭೂವರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ ವಾಣಿಜ್ಯೋಪಯೋಗಿ / ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು. ಪಟ್ಟಣ ಪಂಚಾಯ್ತಿ/ ಪುರಸಭೆ/ ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಗೆ ಬರುವ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಹೊಸ ದರಗಳನ್ನು ಅಳವಡಿಸುವುದು.
5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ) ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ಜಮೀನಿಗೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ) ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ) ಆಯಾ ಪ್ರದೇಶದ ನಿವೇಶನದ ದರದ 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ) ಆಯಾ ಪ್ರದೇಶದ ನಿವೇಶನದ ದರದ 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ. ಕೈಗಾರಿಕೋಪಯೋಗಿ 55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ). ವಾಸೋಪಯೋಗಿ 65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ). ವಾಣಿಜ್ಯೋಪಯೋಗಿ ವಸತಿಯೇತರ 80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ನಿವೇಶನ ದರ. ಯಾವ ಉದ್ದೇಶಕ್ಕೆ ಭೂವರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ ವಾಣಿಜ್ಯೋಪಯೋಗಿ/ ಸತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications