ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರದಲ್ಲಿ ಪೌರಾಯುಕ್ತರ ಮೇಲೆ ಹಲ್ಲೆ ಆರೋಪ; ನೀರು ಪೂರೈಕೆ, ಕಸ ಸಂಗ್ರಹ ಸ್ಥಗಿತ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್‌, 01: ಸಾಗರದಲ್ಲಿ ನೀರು ಸರಬರಾಜಿನ ಜೊತೆಗೆ ಮನೆ ಮನೆಯಿಂದ ಕಸ ಸಂಗ್ರಹವನ್ನು ಸಹ ಸ್ಥಗಿತಗೊಳಿಸಲಾಗಿದೆ.
ಸಾಗರದ ನಗರ ಸಭೆ ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ.

ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದು, ಹಲ್ಲೆಕೋರರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೆ ಕಾರಣಕ್ಕೆ ಸಾಗರ ಪಟ್ಟಣದಲ್ಲಿ ಇವತ್ತು ಕಸ ಸಂಗ್ರಹ ಮಾಡದೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಇನ್ನು ಹಣ್ಣಿನ ಅಂಗಡಿ ತೆರವು ವಿಚಾರ ಸಾಗರ ನಗರಸಭೆ ಆವರಣದಲ್ಲಿ ಹೈಡ್ರಾಮಾಗೆ ಕಾರಣವಾಗಿದೆ. ಪೌರಾಯುಕ್ತರ ಮೇಲೆಯೇ ಹಲ್ಲೆಯಾಗಿರುವ ಆರೋಪ ಕೇಳಿ ಬಂದಿದೆ. ಇದರಿಂದ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು. ಕೆನರಾ ಬ್ಯಾಂಕ್ ಮುಂಭಾಗ ಶಾಬಾಜ್ ಎಂಬುವವರಿಗೆ ಸೇರಿದ ಹಣ್ಣಿನ ಅಂಗಡಿ ತೆರವು ವಿಚಾರವಾಗಿ ಪ್ರತಿಭಟನೆ ಮಾಡಲಾಗಿದೆ.

ಶಿವಮೊಗ್ಗ: ಬೀದಿ ನಾಯಿಗಳ ದಾಳಿಯಿಂದ 4 ವರ್ಷದ ಬಾಲಕ ಸಾವುಶಿವಮೊಗ್ಗ: ಬೀದಿ ನಾಯಿಗಳ ದಾಳಿಯಿಂದ 4 ವರ್ಷದ ಬಾಲಕ ಸಾವು

ಶಾಬಾಜ್ ಎಂಬುವವರು ಕೆನರಾ ಬ್ಯಾಂಕ್ ಮುಂಭಾಗ ಹಣ್ಣಿನ ಅಂಗಡಿ ನಡೆಸುತ್ತಿದ್ದರು. ಚರಂಡಿ ಕಾಮಗಾರಿ ಹಿನ್ನೆಲೆ ಹಣ್ಣಿನ ಗಾಡಿಗಳನ್ನು ತೆರವು ಮಾಡುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೂ ಶಾಬಾಜ್ ಅಂಗಡಿ ತೆರವು ಮಾಡಿರಲಿಲ್ಲ. ಚರಂಡಿ ಕಾಮಗಾರಿ ಹಿನ್ನೆಲೆ ನಗರಸಭೆ ಅಧಿಕಾರಿಗಳೇ ಅಂಗಡಿ ತೆರವುಗೊಳಿಸಿದ್ದಾರೆ. ಈ ವೇಳೆ ನಗರಸಭೆ ಅಧಿಕಾರಿಗಳು, ಪೌರ ಕಾರ್ಮಿಕರು ಹಣ್ಣುಗಳನ್ನು ರಸ್ತೆಗೆ ಎಸೆದಿದ್ದಾರೆ. ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣು, ನಗದು ಹೊತ್ತೊಯ್ದಿದ್ದಾರೆ ಎಂದು ಶಾಬಾಜ್ ಆರೋಪಿಸಿದ್ದಾರೆ. ಆದರೆ ಇದನ್ನು ಪೌರಾಯುಕ್ತರು ಮತ್ತು ನಗರಸಭೆ ಸಿಬ್ಬಂದಿ ತಿರಸ್ಕರಿಸಿದ್ದಾರೆ.

ಪೌರ ಕಾರ್ಮಿಕರಿಂದ ದಬ್ಬಾಳಿಕೆ

ಪೌರ ಕಾರ್ಮಿಕರಿಂದ ದಬ್ಬಾಳಿಕೆ

ಹಣ್ಣಿನ ವ್ಯಾಪಾರಿಯ ಮೇಲೆ ನಗರಸಭೆ ಅಧಿಕಾರಿಗಳು, ಪೌರ ಕಾರ್ಮಿಕರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರಸಭೆಯ ಕಾಂಗ್ರೆಸ್ ಸದಸ್ಯರು, ಕೆಲವು ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮನವಿ ಸಲ್ಲಿಸುವ ವೇಳೆ ನಗರಸಭೆ ಸದಸ್ಯ ತಸ್ರೀಫ್ ಅವರು ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರನ್ನು ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೌರಾಯುಕ್ತರ ಮೇಲೆ ಹಲ್ಲೆ ಆರೋಪ

ಪೌರಾಯುಕ್ತರ ಮೇಲೆ ಹಲ್ಲೆ ಆರೋಪ

ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಮೇಲೆ ನಗರಸಭೆಯ ಕಾಂಗ್ರೆಸ್ ಸದಸ್ಯ ತಸ್ರೀಫ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು, ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು. ನಗರಸಭೆ ಸಿಬ್ಬಂದಿಯ ಪ್ರತಿಭಟನೆಗೆ ಬಿಜೆಪಿ ಬೆಂಬಲವಾಗಿ ನಿಂತಿತ್ತು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಿಬ್ಬಂದಿ ಬೆಂಬಲಕ್ಕೆ ನಿಂತರು.

ಗಣಪತಿ ಬರವಳ್ಳಿಗೆ ಹೃದಯಾಘಾತ

ಗಣಪತಿ ಬರವಳ್ಳಿಗೆ ಹೃದಯಾಘಾತ

ಇನ್ನು ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಪರವಾಗಿ ಸಾಗರದ ಈಡಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಇದರಲ್ಲಿ ಭಾಗಿಯಾಗಿದ್ದ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ ಸಹೋದರ ಗಣಪತಿ ಬರವಳ್ಳಿ (50) ಬುಧವಾರ ಸಂಜೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಈಡಿಗ ಸಂಘದವರು ಗಣಪತಿ ಬರವಳ್ಳಿ ಪರವಾಗಿ ಮೌನಾಚರಣೆ ಮಾಡಿದ್ದು, ಬಳಿಕ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಕುಡಿಯುವ ನೀರು ಸರಬರಾಜು ವ್ಯತ್ಯಯ

ಕುಡಿಯುವ ನೀರು ಸರಬರಾಜು ವ್ಯತ್ಯಯ

ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕಸ ಸಂಗ್ರಹ ಮಾಡುವ ವಾಹನಗಳನ್ನು ನಗರಸಭೆ ಆವರಣದಲ್ಲಿ ಸಾಲಾಗಿ ನಿಲ್ಲಿಸಿ, ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗಿದೆ. ಪೌರಾಯುಕ್ತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಪೌರ ಸೇವಾ ನೌಕರರ ಸಂಘದ ವತಿಯಿಂದ ಸಾಗರ ನಗರ ಠಾಣೆಗೆ ದೂರು ನೀಡಲಾಗಿದೆ. ದೂರಿನಲ್ಲಿ ಪೌರಾಯುಕ್ತರ ಕರ್ತವ್ಯಕ್ಕೆ ಅಡ್ಡಿ, ಕಚೇರಿಗೆ ನುಗ್ಗಿ ದಾಂಧಲೆ, ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

English summary
Water supply, garbage collection stop in Sagara city of Shivamogga district. pourakarmika labors protested against attack on Municipal Commissioner, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X