ಶಿವಮೊಗ್ಗ ಜಿಲ್ಲೆಗೆ ಎಸ್ಪಿಯಾಗಿ ಬರುತ್ತಿರುವುದು ಹೆಮ್ಮೆಯೆನಿಸುತ್ತಿದೆ:ಡಾ. ಅಶ್ವಿನಿ
ಶಿವಮೊಗ್ಗ, ಫೆಬ್ರವರಿ 22: ಶಿವಮೊಗ್ಗದ ನೂತನ ಎಸ್ಪಿಯಾಗಿ ಡಾ. ಅಶ್ವಿನಿ ಇಂದು ಶುಕ್ರವಾರ (ಫೆ.22) ಅಧಿಕಾರ ಸ್ವೀಕರಿಸಿದರು.
ಶಿವಮೊಗ್ಗ ಪೊಲೀಸ್ ಇಲಾಖೆ ಸರ್ಕಾರಿ ಗೌರವ ಸಲ್ಲಿಸಿ, ನೂತನ ಎಸ್ಪಿ ಅಶ್ವಿನಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿತು. ಅಭಿನವ್ ಅಶೋಕ್ ಖರೆಯಿಂದ ನೂತನ ಎಸ್ಪಿಗೆ ಸಾಂಕೇತಿಕವಾಗಿ ಕಡತ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಎಸ್ಪಿ ಡಾ. ಅಶ್ವಿನಿ, ಶಿವಮೊಗ್ಗ ಜಿಲ್ಲೆಗೆ ಎಸ್ಪಿಯಾಗಿ ಬರುತ್ತಿರುವುದು ಹೆಮ್ಮೆ ಅನ್ನಿಸುತ್ತಿದೆ. ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟು ಹೆಸರುವಾಸಿಯಾಗಿದೆಯೋ ಅಷ್ಟೇ ಕ್ರೈಂ ಕೇಸುಗಳು ಹೆಚ್ಚಾಗಿವೆ.

ಜಿಲ್ಲೆಯಲ್ಲಿ ಶಾಂತಿ ವಾತವರಣ ನಿರ್ಮಿಸುವುದು ನಮ್ಮ ಗುರಿ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ. ಜಿಲ್ಲೆಗೆ ಇದೀಗ ಆಗಮಿಸಿದ್ದು, ಸಮಗ್ರ ಮಾಹಿತಿ ಪಡೆದು ಕಾರ್ಯನಿರ್ವಹಿಸುತ್ತೇನೆ ನನ್ನ ಪೋನ್ ನಂಬರ್ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದರು.












Click it and Unblock the Notifications