ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನ್ನಭಾಗ್ಯ’ವಂತೆ ಗೀತಾರ ನೆಮ್ಮದಿಯ ನುಡಿಗಳಿವು

|
Google Oneindia Kannada News

"ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ದೊರೆಯದಿದ್ದರೆ ಮನೆ ನಡೆಸುವುದು ಕಷ್ಟವಾಗುತ್ತಿತ್ತು. ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಿಸಬೇಕಾಗುತ್ತಿತ್ತು. ಈಗ ನೋಡಿ ಮಕ್ಕಳು ಶಾಲೆಗೆ ಹೋಗ್ತಾರೆ. ಒಪ್ಪೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಇಲ್ಲ" ಎಂದು ಗೀತಾ ಸಮಾಧಾನದಿಂದ ಹೇಳಿದರು. ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಸಿಗುತ್ತದೆ ಎಂದು ಗೀತಾ ಅವರು ಹೇಳಿದ್ದು ಸರ್ಕಾರದ ಅನ್ನಭಾಗ್ಯ ಯೋಜನೆ ಕುರಿತು.

ಶಿವಮೊಗ್ಗದ ರಾಜೇಂದ್ರ ನಗರದ ಚಾನೆಲ್ ಸಮೀಪದ ಕೊಳಗೇರಿ ನಿವಾಸಿಯಾದ ಗೀತಾ (40) ಮನೆಯಲ್ಲಿ ಐದು ಜನ ಸದಸ್ಯರಿದ್ದಾರೆ. ಒಂದು ಗಂಡು ಮತ್ತು ಒಬ್ಬರು ಹೆಣ್ಣು ಮಗು ಶಾಲೆಗೆ ಹೋದರೆ, ಗಂಡ ಮದುವೆಗಳಲ್ಲಿ ಬ್ಯಾಂಡ್ ಬಾರಿಸುವ ಕೆಲಸ ಮಾಡುತ್ತಾರೆ. ಕೆಲವು ಮನೆಗಳಲ್ಲಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಿರುವ ಗೀತಾ ಅವರಿಗೆ ಅನ್ನಭಾಗ್ಯ ಯೋಜನೆ ಅಕ್ಕಿ ಕೊಳ್ಳುವ ಚಿಂತೆಯನ್ನು ದೂರ ಮಾಡಿದೆ.

ಗೀತಾ ಪತಿ ಶಿವಲಿಂಗಪ್ಪ ಮದುವೆಗಳು ಇದೆ ಎಂದು ಬ್ಯಾಂಡ್ ಹೆಗಲಿಗೇರಿಸಿ ಹೋದರೆ ಮನೆಗೆ ಮರಳುವುದು ಎರಡು ದಿನಗಳ ನಂತರ. ಮತ್ತೆ ಮದುವೆ ಮನೆ ಕರೆ ಬಂದರೆ ಹೊರಟು ಬಿಡುತ್ತಾರೆ. ಮೂವರು ಮಕ್ಕಳನ್ನು ಸಾಕಿ ಗಂಡ ಮತ್ತು ತನ್ನ ಸಂಪಾದನೆಯಿಂದ ಮನೆಯನ್ನು ನಡೆಸುವ ಜವಾಬ್ದಾರಿ ಗೀತಾ ಅವರ ಹೆಗಲಮೇಲಿದೆ. [ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]

ಗಂಡ ಮತ್ತು ತನ್ನ ಸಂಪಾದನೆಯಲ್ಲಿ ಮನೆಯ ಖರ್ಚು, ಮಕ್ಕಳ ಖರ್ಚು, ಶಾಲೆ ಶುಲ್ಕ, ಹಬ್ಬ ಎಂದು ಸಂಸಾರ ಸಾಗಿಸುವ ಕಷ್ಟ ಗೀತಾ ಅವರಿಗೆ ಮಾತ್ರ ತಿಳಿದಿದೆ. ತಮ್ಮ ದುಡಿಮೆಯಲ್ಲಿ ನೂರಾರು ರೂ. ಕೊಟ್ಟು ಅಕ್ಕಿಯನ್ನು ಖರೀದಿಸುವ ಸ್ಥಿತಿಯಲ್ಲಿ ಅವರಿಲ್ಲ. ಸದ್ಯ ಅನ್ನಭಾಗ್ಯ ಯೋಜನೆಯಿಂದಾಗಿ ಗೀತಾ ಮೂವರು ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯಿಂದಾಗಿ ಗೀತಾ ಕುಟುಂಬಕ್ಕೆ ತಿಂಗಳಿಗೆ 30 ರೂ.ಗೆ ಮೂವತ್ತು ಕೆಜಿ ಅಕ್ಕಿ ಸಿಗುತ್ತದೆ. ಇದರಿಂದ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವ ಅನಿವಾರ್ಯತೆ ಗೀತಾ ಕುಟುಂಬಕ್ಕಿಲ್ಲ. ಮಕ್ಕಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.

Shimoga

ಗೀತಾ ಮಗ ವೆಂಕಟೇಶ ಬಿಎ ಓದಬೇಕೆಂದಿದ್ದಾನೆ, ಒಬ್ಬ ಮಗಳು ಜಯಲಕ್ಷ್ಮಿ ಹತ್ತನೇ ತರಗತಿ ಓದುತ್ತಿದ್ದು, ಇನ್ನೊಬ್ಬಳು ರಮ್ಯಾ ಒಂಬತ್ತನೆ ತರಗತಿಯಲ್ಲಿ ಓದುತ್ತಿದ್ದಾಳೆ. ಸದ್ಯ ಅನ್ನಭಾಗ್ಯ ಯೋಜನೆಯಿಂದಾಗಿ ಕುಟುಂಬ ನಡೆಸುವ ಚಿಂತೆ ಸ್ಪಲ್ಪ ದೂರವಾಗಿದೆ ಎಂದು ಗೋಡೆ ಮೇಲಿದ್ದ ದೇವರ ಪೋಟೋಗೆ ಗೀತಾ ಕೈ ಮುಗಿದರು.

ಅಂದಹಾಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಂತ್ಯೋದಯದ 38,146, ಬಿಪಿಎಲ್‍ನ 2,87,949 ಕಾರ್ಡುದಾರರು ಸೇರಿ ಒಟ್ಟು 3,26,095 ಪಡಿತರ ಕಾರ್ಡುದಾರರು ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿದ್ದಾರೆ. ಪ್ರತಿ ತಿಂಗಳು 91,260 ಕ್ವಿಂಟಾಲ್ ಅಕ್ಕಿ ಹಾಗೂ 2,280 ಕ್ವಿಂಟಾಲ್ ಗೋಧಿಯನ್ನು ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ವಿತರಿಸಲಾಗುತ್ತಿದೆ. [ಚಿತ್ರ ಮಾಹಿತಿ : ಕರ್ನಾಟಕ ವಾರ್ತಾ ಇಲಾಖೆ]

English summary
The most ambitious programme of Karnataka govt 'Anna Bhagya' will complete one year on July, 2014. On this occasion Geetha resident of Shimoga district has shared her happiness of being beneficiary of the scheme. Karnataka Information dept will sharing such success stories everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X