ಅಮೃತಧಾರೆ : ತಾಯಿ ಎದೆ ಹಾಲು ಬ್ಯಾಂಕ್ ಶಿವಮೊಗ್ಗದಲ್ಲಿ ಆರಂಭ
ಶಿವಮೊಗ್ಗ, ಮೇ 15: ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ 'ಅಮೃತಧಾರೆ'ಯನ್ನು ಈಗ ಶಿವಮೊಗ್ಗದಲ್ಲಿ ಆರಂಭಿಸಲಾಗಿದೆ. ಕರ್ನಾಟಕ ಸರ್ಕಾರದ ಮೊದಲ ಈ ಮಾದರಿ ಬ್ಯಾಂಕ್ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರಾರಂಭವಾಗಿತ್ತು.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ 'ಅಮೃತಧಾರೆ' ತೆರೆಯಲಾಗಿದೆ. ಈ ಬ್ಯಾಂಕ್ ಅನ್ನು ಸಿಮ್ಸ್ ನಿರ್ದೇಶಕ ಡಾ. ವಿ. ವಿರೂಪಾಕ್ಷ ಉದ್ಘಾಟಿಸಿದರು.

ಎಲ್ಲಾ ಆರೋಗ್ಯವಂತ ತಾಯಿಯಂದಿರು ತಮ್ಮ ಮಗುವಿಗೆ ಉಣಿಸಿ ಹೆಚ್ಚಾದ ಎದೆ ಹಾಲನ್ನು 'ಅಮೃತಧಾರೆ' ಸಂಗ್ರಹ ಕೇಂದ್ರಕ್ಕೆ ದಾನ ನೀಡಬಹುದಾಗಿದ್ದು, ಕೆಲವು ತಾಯಂದಿರಲ್ಲಿ ಹಾಲು ಉತ್ಪತ್ತಿಯಾಗದಿದ್ದರೆ, ತೀವ್ರ ನಿಗಾ ಘಟಕದ ಕೇಂದ್ರದಲ್ಲಿ ದಾಖಲಾದ ತಾಯಿಯ ಮಗುವಿಗೆ ಅಥವಾ ನವಜಾತ ಶಿಶು ಕೇಂದ್ರದಲ್ಲಿದ್ದ ಮಗುವಿಗೆ ಅಥವಾ ಹೆರಿಗೆ ಸಮಯದಲ್ಲಿ ತಾಯಿ ಮೃತರಾದ ಮಗುವಿಗೆ ಹಾಲನ್ನುಈ ಬ್ಯಾಂಕ್ ಮೂಲಕ ಉಪಯೋಗ ಮಾಡಿಕೊಳ್ಳಲಾಗುತ್ತದೆ.
ಎದೆಹಾಲು ನೀಡುವುದರಿಂದ ನವಜಾತ ಶಿಶುವಿಗೆ ನೀಡುವ ಫಾರ್ಮುಲ ಫೀಡ್ ತಪ್ಪಿಸಬಹುದಾಗಿದೆ. ಇದರಿಂದ ಕರುಳಿನ ಬೇನೆ, ನಂಜು, ಕಣ್ಣಿನ ದೋಷ, ಮಕ್ಕಳಿಗೆ ಆಗುವ ಸಂದರ್ಭ ಹೆಚ್ಚಾಗದಂತೆ ತಡೆಯಬಹುದು. ನವಜಾತ ಶಿಶು ಆಸ್ಪತ್ರೆಯಲ್ಲಿ ಇರಬೇಕಾದ ಸಮಯ ಕಡಿಮೆಯಾಗುತ್ತದೆ. ಪೋಷಕರಿಗೆ ಖರ್ಚಿನ ಭಾರ ಕಡಿಮೆಯಾಗುತ್ತದೆ. ಎದೆಹಾಲು ನೀಡುವುದರಿಂದ ಮಗುವಿಗೆ ಪೋಷಕಾಂಶಗಳು, ಮೆದುಳು ಚುರುಕು ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ತಾಯಿಯ ಹಾಲು ಅಮೃತ: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ 'ಅಮೃತಧಾರೆ' ಸಹ ಒಂದು.
ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ. ಇದು ನವಜಾತ ಶಿಶುವಿನ ಎಲ್ಲಾ ಅಗತ್ಯಗಳನ್ನು ಅತ್ಯುತ್ತಮ ಪೋಷಣೆ ಮತ್ತು ರಕ್ಷಣಾತ್ಮಕ ಸೋಂಕುನಿವಾರಕ ವಸ್ತುಗಳನ್ನು ಒದಗಿಸುವ ಮೂಲಕ ಪೂರೈಸುತ್ತದೆ. ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ, ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಹಾಲನ್ನು ಹೊಂದಿರುವುದಿಲ್ಲ.
ಎಲ್ಲಾ ಶಿಶುಗಳಿಗೆ ಎದೆಹಾಲು ನಿರಂತರ ಪೂರೈಕೆಯನ್ನು ಒದಗಿಸುವ ಅವಶ್ಯಕತೆಯಿದೆ. ಮಾನವ ಹಾಲಿನ ಬ್ಯಾಂಕ್ ತಾಯಂದಿರಿಂದ ನೈಸರ್ಗಿಕ ಹಾಲುಣಿಸುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಎಲ್ಲಾ ಶಿಶುಗಳಿಗೆ ಉಚಿತ, ಪಾಸ್ಟರೈಸ್ ಮಾಡಿದ ಎದೆಹಾಲನ್ನು ಒದಗಿಸುವ ಪ್ರಯತ್ನವಾಗಿದೆ. ಹ್ಯೂಮನ್ ಮಿಲ್ಕ್ ಬ್ಯಾಂಕ್ ಎನ್ನುವುದು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಯಶಸ್ಸಗಳಿಸಿದೆ. ಮಗುವಿನ ಬೌದ್ಧಿಕ ಅಂಶವನ್ನು ಹೆಚ್ಚಿಸುವಲ್ಲಿ ಹಾಲಿನ ಕೊಡುಗೆಯು ಮಹತ್ವದ್ದು.
ಭಾರತದಲ್ಲಿ ಪ್ರತಿ ವರ್ಷ 27 ಮಿಲಿಯನ್ ಶಿಶುಗಳು ಜನಿಸುತ್ತವೆ ಅದರಲ್ಲಿ 3.5 ಮಿಲಿಯನ್ ಅವಧಿಪೂರ್ವ ಮತ್ತು 7.5 ಮಿಲಿಯನ್ ಕಡಿಮೆ ತೂಕದ ಜನನವಾಗಿದೆ. ಭಾರತದಲ್ಲಿ ಜನಿಸಿದ ಸುಮಾರು 47 ಪ್ರತಿಶತದಷ್ಟು ಶಿಶುಗಳು ಗರ್ಭಾವಸ್ಥೆಯ ವಯಸ್ಸಿಗೆ ಚಿಕ್ಕದಾಗಿದೆ. ಈ ಎಲ್ಲಾ ಶಿಶುಗಳು ಬದುಕುಳಿಯುವಿಕೆ ಮತ್ತು ಅರಿವಿನ ಬೆಳವಣಿಗೆಯ ವಿಷಯದಲ್ಲಿ ದುರ್ಬಲವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಅವರ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಆಹಾರ ಸಮಸ್ಯೆಗಳನ್ನು ಹೊಂದಿರುತ್ತಾರೆ.
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಮಾರ್ಚ್ 8, 2022ರಲ್ಲಿ ರಾಜ್ಯದ ಮೊದಲ 'ಅಮೃತಧಾರೆ' ಬ್ಯಾಂಕ್ ಆರಂಭವಾಯಿತು. ಒಂದು ವರ್ಷದಲ್ಲಿ 186 ಲೀಟರ್ ಎದೆಹಾಲು ಸಂಗ್ರಹಣೆ ಮಾಡಲಾಯಿತು. ಇದರಲ್ಲಿ 123 ಲೀಟರ್ ಬಳಕೆ ಮಾಡಲಾಯಿತು. 886 ಮಕ್ಕಳಿಗೆ ಈ ಬ್ಯಾಂಕ್ ಹಾಲನ್ನು ಒದಗಿಸಿತು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications