ಶಿವಮೊಗ್ಗದಲ್ಲಿ ಆಪ್ ಅಭ್ಯರ್ಥಿ ಶ್ರೀಧರ್ ಪ್ರಚಾರ ಜೋರು

ಶಿವಮೊಗ್ಗ, ಮಾ.27 : ಯಡಿಯೂರಪ್ಪ, ಗೀತಾ ಶಿವರಾಜ್ ಕುಮಾರ್ ಸ್ಪರ್ಧೆಯಿಂದ ರಾಜ್ಯದ ಜನರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ಜಿ.ಶ್ರೀಧರ್ ಸಹ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮಾಡಿದ ಭ್ರಷ್ಟಾಚಾರಗಳನ್ನು ಜನರಿಗೆ ತಲುಪಿಸಿ ಮತ ಕೇಳುತ್ತಿದ್ದಾರೆ.

ಶಿವಮೊಗ್ಗದ ಲಷ್ಕರ್ ಮೊಹಲ್ಲಾ, ಯಡೇಹಳ್ಳಿ, ಸಾಗರ ತಾಲೂಕಿನ ಅನಂತಪುರ, ಸಾಗರ ಮುಂತಾದ ಕಡೆ ಶ್ರೀಧರ್ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಹಿರಿಯ ರೈತ ಮುಖಂಡ ಕಡಿದಾಳ್ ಶಾಮಣ್ಣ ಸಹ ಶ್ರೀಧರ್ ಪರವಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಚಿತ್ರಗಳಲ್ಲಿ ನೋಡಿ ಆಮ್ ಆದ್ಮಿ ಪ್ರಚಾರ [ಮೋದಿ ಮಾತನ್ನು ಕನ್ನಡಲ್ಲಿ ಕೇಳಿ]

ಯುವಕರ ವಲಸೆ ತಡೆಯಬೇಕು

ಯುವಕರ ವಲಸೆ ತಡೆಯಬೇಕು

ಮಲೆನಾಡಿನ ಯುವಕರು ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಯುವಜನರ ವಲಸೆ ಹೋಗುವುದನ್ನು ತಡೆಗಟ್ಟಿ ಅವರು ವಾಸಿಸುವ ಸ್ಥಳದಲ್ಲಿಯೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ತಾವು ಚುನಾಣೆಗೆ ಸ್ಪರ್ಧಿಸುತ್ತಿರುವುದಾಗಿ ಶ್ರೀಧರ್ ಕಲ್ಲಹಳ್ಳ ಪ್ರಚಾರ ಮಾಡುತ್ತಿದ್ದಾರೆ.

ಜೈಲಿನಿಂದ ಬಂದವರಿಗೆ ವೋಟು ಕೋಡ್ತಿರಾ?

ಜೈಲಿನಿಂದ ಬಂದವರಿಗೆ ವೋಟು ಕೋಡ್ತಿರಾ?

ಕ್ಷೇತದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆಸಿದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರಿಗೆ ತಿಳಿದಿದೆ. ಇದಕ್ಕಾಗಿ ಅವರು ಜೈಲು ಶಿಕ್ಷೆಯನ್ನು ಅನುಭವಿಸಿ ಬೇಲ್ ಮೇಲೆ ಹೊರಗೆ ಬಂದವರು. ಅಂತಹವರಿಗೆ ಮತ ನೀಡುತ್ತಿರಾ? ಎಂದು ಶ್ರೀಧರ್ ಕಲ್ಲಹಳ್ಳ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಒಂದು ವೋಟು, ಒಂದು ನೋಟು

ಒಂದು ವೋಟು, ಒಂದು ನೋಟು

ಸಾಗರದಲ್ಲಿ ಶ್ರೀಧರ್ ಅವರ ಪರ ಪ್ರಚಾರ ನಡೆಸಿದ ಹಿರಿಯ ರೈತ ಮುಖಂಡ ಕಡಿದಾಳ್ ಶ್ಯಾಮಣ್ಣ, ಆಮ್‌ ಆದ್ಮಿ ಚುನಾವಣೆಯಲ್ಲಿ ಯಾವುದೆ ಹಣಕಾಸು ಖರ್ಚು ಮಾಡದೆ ಗೆಲ್ಲುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಅಭ್ಯರ್ಥಿಯ ಠೇವಣಿ ಹಣವನ್ನು ಸಹ ಸಾರ್ವಜನಿಕರಿಂದ ಸಂಗ್ರಹಿಸಲಾಗಿದೆ. ಒಂದು ನೋಟು ಒಂದು ವೋಟು ಎಂಬ ತತ್ವ ನಮ್ಮದು ಅದಕ್ಕೆ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕೃಷಿಕರಿಗೆ ಆತ್ಮವಿಶ್ವಾಸ ನೀಡುತ್ತೇವೆ

ಕೃಷಿಕರಿಗೆ ಆತ್ಮವಿಶ್ವಾಸ ನೀಡುತ್ತೇವೆ

ಇಂದು ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ನೈಸರ್ಗಿಕ ಕೃಷಿ ಅಳವಡಿಕೆ ಮೂಲಕ ರೈತರ ಸ್ವಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಲು ಶ್ರಮಿಸುತ್ತದೆ. ರೈತರಿಗೆ ಬೆಂಬಲವಾಗಿ ನಿಲ್ಲುವ ಪಕ್ಷಗಳಿಗೆ ಜನರು ಮತ ನೀಡಬೇಕು ಎಂದು ಶ್ರೀಧರ್ ಕಲ್ಲಹಳ್ಳ ಪ್ರಚಾರ ನಡೆಸುತ್ತಿದ್ದಾರೆ.

 ಬಂಡವಾಳ ಶಾಹಿಗಳಿಗೆ ಮತ ನೀಡಬೇಡಿ

ಬಂಡವಾಳ ಶಾಹಿಗಳಿಗೆ ಮತ ನೀಡಬೇಡಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮುಂತಾದವರು ಬಂಡವಾಳಶಾಹಿಗಳ ಜೇಬಿನಲ್ಲಿದ್ದಾರೆ. ಬಂಡವಾಳ ಶಾಹಿಗಳು ಇಂತಹವರ ನೆರವಿನಿಂದ ದೇಶದ ನೈಸರ್ಗಿಕ ಸಂಪನ್ಮೂಲ ಲೂಟಿ ಹೊಡೆಯುತ್ತಿದ್ದಾರೆ. ಆದ್ದರಿಂದ ಇಂತಹವರಿಗೆ ಮತ ನೀಡಬೇಡಿ ಎಂದು ಕೆ.ಜಿ.ಶ್ರೀಧರ್ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಶ್ರೀಧರ್ ಕಲ್ಲಹಳ್ಳ ಯಾರು?

ಶ್ರೀಧರ್ ಕಲ್ಲಹಳ್ಳ ಯಾರು?

ಶಿವಮೊಗ್ಗದ ಆಪ್ ಅಭ್ಯರ್ಥಿ ಶ್ರೀಧರ್ ಕಲ್ಲಹಳ್ಳ ಯಾರು ಎಂಬ ಮಾಹಿತಿ ಇಲ್ಲಿದೆ ನೋಡಿ. [ಚಿತ್ರಗಳಲ್ಲಿ ನೋಡಿ ಶ್ರೀಧರ ಕಲ್ಲಹಳ್ಳ ಪ್ರಚಾರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+