ಶಿವಮೊಗ್ಗ ಜೈಲಿನಿಂದ ವಿಚಾರಣಾಧೀನ ಬಾಂಗ್ಲಾ ಕೈದಿ ಪರಾರಿ
ಶಿವಮೊಗ್ಗ, ಮೇ 22 : ಭಾನುವಾರ ಸಂಜೆ ಶಿವಮೊಗ್ಗ ಕೇಂದ್ರ ಕಾರಗೃಹದಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿದ್ದಾನೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಪ್ರವೇಶಿಸಿದ್ದ ಮಹಮ್ಮದ್ ರಹಮನ್ ಶಿವಮೊಗ್ಗ ಜೈಲು ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ.[ವಿಶ್ವದ ಅತೀ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಮೇ 24 ಕ್ಕೆ ಲೋಕಾರ್ಪಣೆ]

ಜೈಲಿನಗೋಡೆ ಜಿಗಿದು ಪರಾರಿಯಾಗಿರುವುದು ಸಾಧ್ಯತೆ ಕಡಿಮೆ ಇದ್ದು. ಜೈಲು ಸಿಬ್ಬಂದಿಗಳಾದ ಶಿವಾರಜ್ ಮತ್ತು ನಂದೀಶ್ ಅವರು ಆರೋಪಿಯನ್ನು ಮುಖ್ಯದ್ವಾರದಿಂದಲೇ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಹೆಚ್ಚುವರಿ ಐಜಿಪಿ ಜಿ. ವೀರಭದ್ರಸ್ವಾಮಿ ಮತ್ತು ಬಂದೀಖಾನೆ ಉತ್ತರ ವಲಯದ ಡಿಐಜಿ ಶೇಷ ಅವರು ಶಿವಮೊಗ್ಗ ಕೇಂದ್ರ ಕಾರಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
{promotion-urls}












Click it and Unblock the Notifications