ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!
ಶಿವಮೊಗ್ಗ, ಅಕ್ಟೋಬರ್ 05 : ಸಕ್ರೆಬೈಲು ಆನೆ ಬಿಡಾರದ 5 ಆನೆಗಳನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಆನೆಗಳನ್ನು ಉತ್ತರ ಪ್ರದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ.
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ 22 ಆನೆಗಳಿವೆ. ಇವುಗಳಲ್ಲಿ 5 ಆನೆಗಳನ್ನು ಕೊಡುಗೆಯಾಗಿ ನೀಡಲು ಗುರುತಿಸಲಾಗಿದೆ. ಉತ್ತರ ಪ್ರದೇಶದ ದುದ್ವಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಫಾರಿಗಾಗಿ ಈ ಆನೆಗಳನ್ನು ಬಳಕೆ ಮಾಡಲಾಗುತ್ತದೆ.

ಪಾರ್ವತಿ, ಕಿರಣ (4), ಭಾಸ್ಕರ (5), ಅಮೃತಾ (13), ರಾಘವೇಂದ್ರ (30) ಆನೆಗಳನ್ನು ಕಳುಹಿಸಿ ಕೊಡಲಾಗುತ್ತದೆ. ಈ ಐದು ಆನೆಗಳಿಗೆ ಹೊಂದಿಕೊಳ್ಳಲು ಉತ್ತರ ಪ್ರದೇಶದ ಮಾವುತರು ಸಕ್ರೆಬೈಲಿಗೆ ಬಂದಿದ್ದು, ತರಬೇತಿ ಪಡೆಯುತ್ತಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಆನೆಗಳು ಉತ್ತರ ಪ್ರದೇಶಕ್ಕೆ ಹೊರಡಲಿವೆ.
'ಆನೆಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಸಕ್ರೆಬೈಲಿನಲ್ಲಿರುವ ಕೆಲವು ಮಾವುತರು ಆನೆಗಳ ಜೊತೆಗೆ ಉತ್ತರ ಪ್ರದೇಶಕ್ಕೆ ತೆರಳಲಿದ್ದು, ಕೆಲವು ದಿನಗಳ ಕಾಲ ಅಲ್ಲಿದ್ದು, ವಾಪಸ್ ಬರಲಿದ್ದಾರೆ' ಎಂದು ಅರಣ್ಯಾಧಿಕಾರಿ ಮುಕುಂದ್ ರಾಜ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಬಿಡಾರದ ಹಿರಿಯ ಆನೆ ಟಸ್ಕರ್ ಮೃತಪಟ್ಟಿತ್ತು. ಈಗ ಐದು ಆನೆಗಳು ಉತ್ತರ ಪ್ರದೇಶಕ್ಕೆ ಹೊರಡಲು ಸಿದ್ಧವಾಗಿವೆ.












Click it and Unblock the Notifications