ಶಿವಮೊಗ್ಗ: ಭದ್ರಾ ಜಲಾಶಯದಿಂದ 47,500 ಕ್ಯೂಸೆಕ್ಸ್ ನೀರು ಹೊರಕ್ಕೆ..!

ಶಿವಮೊಗ್ಗ, ಸೆಪ್ಟೆಂಬರ್ 20: ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅತಿಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ಆಣೆಕಟ್ಟೆಯಿಂದ ಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.

186 ಅಡಿ ಎತ್ತರವಿರುವ ಡ್ಯಾಂನಲ್ಲಿ 71.666 ಕ್ಯೂಸೆಕ್ಸ್ ನೀರಿನ ಸಾಮರ್ಥ್ಯ ಹೊಂದಿದೆ. ಇಂದು ಬೆಳಿಗ್ಗೆ 9.20 ರ ಸಮಯದಲ್ಲಿ ನದಿಯ ಒಳ ಹರಿವು 55 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡುತ್ತಿರುವ ಕಾರಣ, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿಲಾಗಿದೆ.

ಅದರಂತೆ ಭದ್ರಾ ಡ್ಯಾಂ ನ ಹೊರಹರಿವನ್ನು ಹೆಚ್ಚಿಸಲಾಗಿದ್ದು, ಪ್ರಸ್ತುತ ಭದ್ರಾ ಜಲಾಶಯದಿಂದ 47,500 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಸೆ.14 ರಂದು ಜಲಾಶಯದ ನಾಲ್ಕೂ ಗೇಟಗಳನ್ನು ಮೂರಿಂಚು ಎತ್ತಲಾಗಿದ್ದು, 1,750 ಕ್ಯೂಸೆಕ್ಸ್ ನೀರನ್ನ ಬಿಡಲಾಗಿತ್ತು.

Shivamogga: 47,500 Cusecs Of Water Released From Bhadra Reservoir

ಆರು ದಿನಗಳ ಒಳಗೆ ಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಅಧಿಕವಾಗಿರುವುದರಿಂದ ಇಂದು ಬೆಳಿಗ್ಗೆ ಅಧಿಕ ನೀರು ಬಿಡಲಾಗಿದೆ. 47,500 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿರುವ ಕುರಿತು ಡ್ಯಾಂ ನ ಸಿಇ ಚಂದ್ರಹಾಸ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+