ಶಿವಮೊಗ್ಗ-ತುಮಕೂರು 4 ಪಥದ ರಸ್ತೆ; 3368 ಮರಕ್ಕೆ ಕೊಡಲಿ

ಶಿವಮೊಗ್ಗ, ಮಾರ್ಚ್ 17 : ಶಿವಮೊಗ್ಗ-ತುಮಕೂರು ಚತುಷ್ಪಥ ರಸ್ತೆ ಕಾಮಗಾರಿಗಾಗಿ ಭದ್ರಾವತಿ ವಲಯದಲ್ಲಿ 3368 ಮರಗಳನ್ನು ಕಡಿಯಲು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆಕ್ಷೇಪಣೆಗಳನ್ನು ಇಲಾಖೆಗೆ ಸಲ್ಲಿಸಲಾಗಿದೆ.

ಭದ್ರಾವತಿ ಅರಣ್ಯ ವಿಭಾಗ ವ್ಯಾಪ್ತಿಯ ತರೀಕೆರೆ ವಲಯ, ಲಕ್ಕವಳ್ಳಿ ವಲಯ, ಭದ್ರಾವತಿ ವಲಯ ಉಂಬಳೇಬೈಲು ವಲಯಗಳಲ್ಲಿ ರಸ್ತೆಯ ಅಗಲೀಕರಣ ಕಾಮಗಾರಿಯ ಪ್ರದೇಶದಲ್ಲಿ ಬರುವ ರಸ್ತೆ ಬದಿಯ ವಿವಿಧ ಜಾತಿಯ ಮರಗಳನ್ನು ಕಡಿಯಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು.

ಸಾರ್ವಜನಿಕರು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿತ್ತು. ಭದ್ರಾವತಿ ವಿಭಾಗದ ಉಪ ಸಂರಕ್ಷಣಾಧಿಕಾರಿಗೆ ಈ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. 3368 ಮರಗಳನ್ನು ಕಡಿಯುವುದರಿಂದ ಆಗುವ ಪರಿಣಾಮಗಳ ಬಗ್ಗೆ ವಿವರಣೆಗಳನ್ನು ನೀಡಲಾಗಿದೆ.

3368 Trees To Cut For Shivamogga-Tumkur 4 Lane Road

ಸರ್ಕಾರದ ಆದೇಶ ಅನ್ವಯ ಮರಗಳನ್ನು ಕಡಿದು ವಿಲೇವಾರಿ ಮಾಡುವುದರಿಂದ ಅರಣ್ಯ ಇರುವ ಜಾಗದಲ್ಲಿ ಸಾವಿರಾರು ಮರಗಳು ಕಾಣದಾಗಿ ಅಲ್ಲಿನ ತಾಪಮಾನ ಏರಿಕೆಯಾಗುತ್ತದೆ. ಸದ್ಯ ಆ ಮರಗಳನ್ನು ಆಧರಿಸಿ ಜೀವನ ನಡೆಸುತ್ತಿರುವ ಅನೇಕ ವಿಶೇಷ ಜಾತಿಯ ಪಕ್ಷಿ ಮತ್ತು ಪ್ರಾಣಿ ಸಂಕುಲಕ್ಕೆ ಇದರಿಂದಾಗಿ ತಮ್ಮ ನೆಲೆಗಳನ್ನು ಕಳೆದುಕೊಳ್ಳಬೇಕಾದ ಅನಾರೋಗ್ಯಕರ ತುರ್ತು ಸ್ಥಿತಿ ಎದುರಾಗಲಿದೆ ಎಂದು ಉಲ್ಲೇಖಿಸಲಾಗಿದೆ.

ನಿತ್ಯ ಸಾಗುವ ಪ್ರಯಾಣಿಕರು ಸಹ ಬಿಸಿಲಿನಲ್ಲಿಯೇ ತಮ್ಮ ಪ್ರಯಾಣ ಕೈಗೊಳ್ಳಬೇಕಾದ ಅಸಹನೀಯ ಪರಿಸ್ಥಿತಿ ಒದಗುತ್ತದೆ. ಹೀಗಾಗಿ ಸರ್ಕಾರ ಜನರ ಮತ್ತು ಪರಿಸರ ಕಾಳಜಿ ಪರಿಗಣಿಸಿ ಈ ಯೋಜನೆಯನ್ನು ಕೈ ಬಿಡುವಂತೆ ಮನವಿ ಮಾಡಲಾಗಿದೆ.

ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿಯನ್ನು 4 ಪಥದ ರಸ್ತೆಯಾಗಿ ವಿಸ್ತರಣೆ ಮಾಡಲು ಕಾಮಗಾರಿ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ತಾಲೂಕಿನಲ್ಲಿಯೂ ರಸ್ತೆ ಹಾದು ಹೋಗಲಿದ್ದು, ಇಲ್ಲಿ 1968 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.

ಮರ ಕಡಿದು ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನಡೆಲಾಗುತ್ತದೆ. ಹಲಸು, ಹೊನ್ನೆ, ಬೇವು, ಅರಳಿ ಸಸಿಗಳನ್ನು ಬೆಳೆಸಲಾಗುತ್ತದೆ ಎಂದು ಇಲಾಖೆ ಹೇಳಿತ್ತು. ಮರ ಕಡಿಯಲು ವಿರೋಧವೂ ವ್ಯಕ್ತವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+