ಶಿವಮೊಗ್ಗದಲ್ಲಿ ಪ್ರೇಮ ಪ್ರಕರಣ; ಯುವತಿ ಸಾವು, ಯುವಕನ ಹತ್ಯೆ!

ಶಿವಮೊಗ್ಗ, ಡಿಸೆಂಬರ್ 15: ಶಿವಮೊಗ್ಗ ನಗರದ ಹರಿಗೆಯಲ್ಲಿರುವ ಕೆಇಬಿ ಕ್ವಾಟ್ರಸ್ ಹಿಂಭಾಗದಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಇದೊಂದು ಪ್ರೇಮ ಪ್ರಕರಣದಲ್ಲಿ ಹಿನ್ನಲೆಯಲ್ಲಿ ನಡೆದ ಕೃತ್ಯ ಎಂದು ಶಂಕಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಕಾರ್ತಿಕ್ ಎಂಬ 23 ವರ್ಷದ ಯುವಕನನ್ನು ಹತ್ಯೆ ಮಾಡಲಾಗಿದೆ. ವಿದ್ಯಾನಗರ ಸಮೀಪದ ಸುಭಾಷ್ ನಗರದ ಯುವಕನನ್ನು ಯಾರು ಹತ್ಯೆ ಮಾಡಿದ್ದಾರೆ? ಎಂಬುದು ತಿಳಿದುಬಂದಿಲ್ಲ.

ಕಾರ್ತಿಕ್ ಹತ್ಯೆಗೆ ಪ್ರೇಮ ಪ್ರಕರಣ ಕಾರಣ ಎಂದು ಶಂಕಿಸಲಾಗಿದೆ. ಈತ ಪ್ರೀತಿಸುತ್ತಿದ್ದ ಯುವತಿ ಕೋಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು.

23 Year Old Man Found Murdered

ಯುವತಿ ಅಮೃತಾ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೋಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ, ಮಂಗಳವಾರ ಕಾರ್ತಿಕ್ ಕೊಲೆ ಆಗಿರುವುದು ಪ್ರಕರಣಕ್ಕೆ ತಿರುವನ್ನು ನೀಡಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು, ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ಅಮೃತಾ ಸಾವಿಗೂ ಕಾರ್ತಿಕ್ ಹತ್ಯೆಗೆ ಸಂಬಂಧವಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಅಮೃತಾ ಪರಿಚಯದವರು, ಕುಟುಂಬಸ್ಥರ ಕೈವಾಡದ ಕುರಿತು ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+