ನಾನೇಕೆ ಜೆಡಿಎಸ್ ಪಕ್ಷ ಸೇರಿದೆ: ರಾಜ್ ಸೊಸೆ ಗೀತಾ
ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡುತ್ತಾ, ನನಗೆ ರಾಜಕೀಯ ಹೊಸದಲ್ಲ. ನಮ್ಮ ತಂದೆಯವರ ಜೊತೆಗೆ ರಾಜಕೀಯದ ಏಳುಬೀಳುಗಳನ್ನು ತುಂಬ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಮೊದಲು ನಮ್ಮ ತಂದೆಯವರು ರಾಜಕೀಯಕ್ಕೆ ಬಂದಾಗ ನನಗೆ ಕೇವಲ ಎರಡು ವರ್ಷ. ಬಳಿಕ ಬುದ್ಧಿ ತಿಳಿದಾಗಿನಿಂದ ಎಲ್ಲವನ್ನೂ ಗಮನಿಸುತ್ತಾ ಬಂದಿದ್ದೇನೆ.
ನಾನು ರಾಜಕೀಯಕ್ಕೆ ಬರಲು ಒಂದೇ ಕಾರಣ. ನಮ್ಮ ತಂದೆಯವರ ಹೆಸರು ಉಳೀಬೇಕು. ಅವರ ರಾಜಕೀಯ ಕೆಲಸಕಾರ್ಯಗಳನ್ನು ಮುಂದುವರಿಸಬೇಕು. ಅವರು ತುಂಬಾ ಕೆಲಸ ಮಾಡಿದ್ದಾರೆ. ಅವರು ಮಾಡಲು ಆಗದೆ ಇರುವುದು ಇನ್ನೂ ಬಹಳಷ್ಟಿದೆ. ಬೇರೆ ಯಾವುದೇ ದುರುದ್ದೇಶವನ್ನಿಟ್ಟುಕೊಂಡು ತಾನು ರಾಜಕೀಯಕ್ಕೆ ಬಂದಿಲ್ಲ. [ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಗೀತಾ ಶಿವಣ್ಣ ಸಂದರ್ಶನ]

ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂಬುದು ಒಂದೇ ಆಸೆ ನನಗಿರುವುದು. ಇನ್ನು ನನಗೆ ಹುಟ್ಟಿದ ಮನೆ ಮೆಟ್ಟಿದ ಮನೆ ಎರಡರಲ್ಲೂ ನನಗೇನು ಕಮ್ಮಿ ಆಗಿಲ್ಲ. ಇವೆರಡು ನನಗೆ ಶಾಲೆ ಇದ್ದಂತೆ. ನಮ್ಮ ತಂದೆತಾಯಿ ಒಳ್ಳೆ ಬುದ್ಧಿ ಗುಣ ನಡತೆ ಹೇಳಿ ಕಳುಹಿಸಿದ್ದಾರೆ. ಅಲ್ಲಿ ಅಪ್ಪಾಜಿಯಿಂದ ಇನ್ನಷ್ಟು ಒಳ್ಳೆಯದನ್ನು ಕಲಿತೆ.
ಇನ್ನು ಜೆಡಿಎಸ್ ಪಕ್ಷಕ್ಕೆ ಯಾಕೆ ಸೇರ್ಪಡೆಯಾದೆ ಎಂದರೆ ನಮ್ಮ ತಂದೆಯವರು ಕೊನೆಗಾಲದಲ್ಲಿದ್ದ ಪಕ್ಷ. ನನ್ನ ತಮ್ಮನಿಗೆ ಸ್ಥಾನಮಾನ ಕೊಟ್ಟು ಅವನಿಗೆ ಉತ್ತಮ ಭವಿಷ್ಯ ರೂಪಿಸಿದ ಪಕ್ಷ ಅದು. ಈ ಕಾರಣಕ್ಕಾಗಿ ತಾನು ಜೆಡಿಎಸ್ ಪಕ್ಷಕ್ಕೆ ಬಂದಿದ್ದೇನೆ ಎಂದರು. ಬಳಿಕ ಒಂದೊಂದಾಗಿ ಗೀತಾ ಅವರಿಗೆ ಪತ್ರಕರ್ತರಿಂದ ಪ್ರಶ್ನೆಗಳು ತೂರಿಬಂದವು.
ಗೀತಾ ಅವರು ಎಲ್ಲ ಪ್ರಶ್ನೆಗಳಿಗೂ ಸಮರ್ಥವಾಗಿಯೇ ಉತ್ತರ ನೀಡಿದರು. ಕೆಲವು ಪ್ರಶ್ನೆಗಳಿಗೆ ಈ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ನೇರವಾಗಿ ಹೇಳಿದರು. ಇನ್ನೂ ಕೆಲವು ಕಡೆ ತೂರಿ ಬರುತ್ತಿದ್ದ ಪ್ರಶ್ನೆಯ ಬಾಣಗಳಿಗೆ ಶಿವಣ್ಣ ಸಮಾಧಾನಚಿತ್ತದಿಂದ ಉತ್ತರಿಸಿದರು. ಒಟ್ಟಾರೆಯಾಗಿ ಶಿವಣ್ಣ ಹಾಗೂ ಗೀತಾ ಅವರದು ರಕ್ಷಣಾತ್ಮಕ ಆಟವಾಗಿತ್ತು. ಕೆಲವು ಕಡೆ ಗೀತಾ ಅವರು ಚುಟುಕಾಗಿ ಉತ್ತರಿಸಿದರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications